ಬಿಗ್‌ಬಜಾರಲ್ಲಿ ವಿಶೇಷ ರಿಯಾಯಿತಿ ಮಾರಾಟ
Team Udayavani, Jan 20, 2017, 11:42 AM IST
ಬೆಂಗಳೂರು: ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಿಗ್ ಬಜಾರ್, ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ “ಸಬ್ಸೆ ಸಸ್ತೆ 6 ದಿನ್’ ಎಂಬ ಆರು ದಿನಗಳ ವಿಶೇಷ ರಿಯಾಯಿತಿ ಮಾರಾಟ ಉತ್ಸವ ಆಯೋಜಿಸಿದೆ.
ಜ.21ರಿಂದ 26ರವ ರೆಗೆ ಎಲ್ಲಾ ಬಿಗ್ ಬಜಾರ್ ಮಾಲ್‌ಗಳಲ್ಲಿ ಈ ಬೃಹತ್ ರಿಯಾಯಿತಿ ಮಾರಾಟ ಉತ್ಸವ ನಡೆಯಲಿದ್ದು, ಎಲ್ಲಾ ಉತ್ಪನ್ನಗಳ ಖರೀದಿ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಕನಿಷ್ಠ 2000 ರೂ. ಅಥವಾ ಅದಕ್ಕೂ ಹೆಚ್ಚಿನ ಬೆಲೆಯ ಉತ್ಪನ್ನಗಳನ್ನು ಖರೀದಿಸಿದವರಿಗೆ 400 ರೂ.ನಷ್ಟು “ಕ್ಯಾಶ್‌ಬ್ಯಾಕ್’ ರಿಯಾಯಿತಿ ದೊರೆಯಲಿದ್ದು, ಈ ಸೌಲಭ್ಯ ಗ್ರಾಹಕರ ಮುಂದಿನ ಖರೀದಿಗೆ ಅನ್ವಯವಾಗುತ್ತದೆ.
ಈಸೀ ಇಎಂಐ ಮತ್ತು ಪೇಟಿಎಂ ಬಳಕೆದಾರರೂ ರಿಯಾಯಿತಿ ಸೌಲಭ್ಯ ಪಡೆಯಬಹುದು. ಇದರೊಂದಿಗೆ ಗ್ರಾಹಕರು ತಮಗೆ ಬೇಕಾದ ಆಹಾರ ಉತ್ಪನ್ನ, ಅಲಂಕಾರಿಕ ವಸ್ತುಗಳು, ಗೃಹ ಬಳಕೆ ವಸ್ತುಗಳು ಸೇರಿದಂತೆ ಇತರೆ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಬಿಗ್ ಬಜಾರ್ ಅವಕಾಶ ನೀಡಿದೆ.
ಕಳೆದ 12 ವರ್ಷಗಳಿಂದ ಬಿಗ್ ಬಜಾರ್ “ಸಬ್ಸೆ ಸಸ್ತೆ 6 ದಿನ್’ ರಿಯಾಯಿತಿ ಮಾರಾಟ ಉತ್ಸವದ ಮೂಲಕ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಈ ಬಾರಿ ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ರಿಯಾಯಿತಿ ಜತೆಗೆ, ಶೇ.10ರಷ್ಟು ಹೆಚ್ಚುವರಿ ರಿಯಾ ಯಿತಿ ಕೂಡ ದೊರೆಯಲಿದೆ.
ಈ ಬಾರಿ ಹಿಂದಿನ ರಿಯಾಯಿತಿ ಉತ್ಸವಗಳಿಗಿಂತಲೂ ಹೆಚ್ಚಿನ ರಿಯಾಯಿತಿ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ. ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಅವರ ಅಗತ್ಯತೆಗಳನ್ನು ಪೂರೈಸುವುದು ಬಿಗ್‌ಬಜಾರ್ ಗುರಿಯಾಗಿದೆ ಎಂದು ಬಿಗ್ ಬಜಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.