ಗೌರಿ ಹತ್ಯೆ ಪ್ರಕರಣ: ರಾಘವೇಶ್ವರ ಶ್ರೀ ವಿರುದ್ಧ ದೂರು
Team Udayavani, Sep 17, 2017, 12:00 PM IST
ಬೆಂಗಳೂರು :ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತೂಂದು ತಿರುವು ಪಡೆದುಕೊಂಡಿದ್ದು, ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳ ಕೈವಾಡವಿದೆ ಎಂದು ಆರೋಪಿಸಿ ಎಸ್‌ಐಟಿಯಲ್ಲಿ ದೂರು ದಾಖಲಿಸಲಾಗಿದೆ.
ಈ ಹಿಂದೆ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಪ್ರೇಮಲತಾ ಹಾಗೂ ದಿವಾಕರಶಾಸಿŒ ದಂಪತಿ ಈ ದೂರು ನೀಡಿದ್ದು, ಅತ್ಯಾಚಾರ ಆರೋಪ ಸಂಬಂಧ ರಾಘವೇಶ್ವರ ಶ್ರೀಗಳ ವಿರುದ್ಧ ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಈ ಸಂಬಂಧ ಮಾನನಷ್ಟ ಮೊಕದ್ದಮೆ ಸಹ ದಾಖಲಾಗಿದೆ. ಹೀಗಾಗಿ ರಾಘವೇಶ್ವರ ಶ್ರೀಗಳೇ ಸುಪಾರಿ ಹಂತಕರಿಗೆ ಹಣ ಕೊಟ್ಟು ಕೃತ್ಯವೆಸಗಿರುವ ಸಾಧ್ಯತೆಯಿದೆ. ಈ ಕೋನದಲ್ಲಿಯೂ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಆರೋಪ ಸಂಬಂಧ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಇದುವರೆಗೂ ಆರೋಪಕ್ಕೆ ಪೂರಕವಾದ ಸಾಕ್ಷ್ಯಳು ಪತ್ತೆಯಾಗಿಲ್ಲ. ಆದರೆ, ರಾಘವೇಶ್ವರ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿ ತಮ್ಮ ಹೇಳಿಕೆ ದಾಖಲಿಸುವಂತೆ ಕೇಳಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ನಡೆದ ಮೂರನೇ ದಿನ ಪ್ರೇಮಲತಾ ದಂಪತಿ ದೂರು ನೀಡಿದ್ದು, ಕೆಲವೊಂದು ದಾಖಲೆಗಳನ್ನು ಕೊಟ್ಟಿದ್ದಾರೆ. ಇದರೊಂದಿಗೆ ಶ್ರೀಗಳ ವಿರುದ್ಧ ಎಸ್‌ಐಟಿಯ ಸಹಾಯವಾಣಿಗೆ ನೂರಕ್ಕೂ ಅಧಿಕ ಕರೆಗಳು ಬರುತ್ತಿದ್ದು, ಕೃತ್ಯದಲ್ಲಿ ಅವರನ್ನು ಕರೆದು ವಿಚಾರಣೆ ನಡೆಸಿದರೆ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಬೆಂಗಳೂರು ಸಾಹಿತ್ಯ ಉತ್ಸವ ಸಂಸ್ಥಾಪಕ ವಿಕ್ರಂ ಸಂಪತ್‌ರನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಈ ಕುರಿತು ಖುದ್ದು ಸಾಮಾಜಿಕ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಕ್ರಂ ಸಂಪತ್, ತನ್ನನ್ನು ವಿಚಾರಣೆಗೆ ಕರೆಸಿಕೊಂಡಿದ್ದನ್ನು ಖಂಡಿಸಿದ್ದಾರೆ. ತಾವು ಇದುವರೆಗೂ ಗೌರಿ ಲಂಕೇಶ್ ಅವರನ್ನು ಭೇಟಿಯೇ ಮಾಡಿಲ್ಲ. ಲಂಡನ್‌ನಲ್ಲಿದ್ದುಕೊಂಡೆ ಆಕೆಯ ಕೊಲೆಯನ್ನು ಟ್ವಿಟರ್ ಮೂಲಕ ಖಂಡಿಸಿದ್ದೆ. ಇಷ್ಟಾದರೂ ವಿಚಾರಣೆಯಲ್ಲಿ ನನಗೆ ಅತ್ಯಧಿಕ ಪ್ರಶ್ನೆಗಳನ್ನು ಕೇಳಲಾಯಿತು.
ಗೌರಿ ಲಂಕೇಶ್ ನನ್ನ ವಿರುದ್ಧ ಬರೆದ ಲೇಖನಗಳಿಗೂ ನಾನು ಪ್ರತಿಕ್ರಿಯೆ ನೀಡಿರಲಿಲ್ಲ. ಅದರ ಅಗತ್ಯವೂ ನನಗೆ ಇರಲಿಲ್ಲ. ಹೀಗಿರುವಾಗ ನನಗೂ ಗೌರಿ ಹತ್ಯೆಗೂ ಏನು ಸಂಬಂಧ? ಗೌರಿ ಲಂಕೇಶ್ ಸರ್ಕಾರ ಸೇರಿದಂತೆ ಕೆಲ ವ್ಯಕ್ತಿಗಳ ವಿರುದ್ಧ ತಮ್ಮ ಲೇಖನಗಳ ಮೂಲಕ ಟೀಕಿಸಿದ್ದಾರೆ. ಅವರನ್ನು ಸಹ ಎಸ್‌ಐಟಿ ವಿಚಾರಣೆ ನಡೆಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಕೌಟುಂಬಿಕ ಕಲಹ ಇಲ್ಲ
ಪ್ರಕರಣದಲ್ಲಿ ಕೌಟುಂಬಿಕ ಕಲಹ ಇಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಎಲ್ಲ ಸಂಬಂಧಿಕರ ವಿಚಾರಣೆಯಲ್ಲಿ ಯಾವುದೇ ಗಲಾಟೆ ವಿಚಾರಗಳಿಲ್ಲವೆಂದು ಸ್ಪಷ್ಟವಾಗಿದೆ. ಅವರ ಆಸ್ತಿ ಹಂಚಿಕೆ ವಿಚಾರ ಗೊಂದಲ ಬಗೆ ಹರಿದಿದೆ. 2005ರಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಪಿಸ್ತೂಲ್ ತೋರಿಸಿದ್ದ ಗಲಾಟೆ ಆಗಲೇ ಹಿರಿಯ ಸಮ್ಮುಖದಲ್ಲಿ ಮುಕ್ತಾಯವಾಗಿದೆ. ಘಟನೆ ಬಳಿಕ ಇಂದ್ರಜಿತ್ ಲಂಕೇಶ್ ಪಿಸ್ತೂಲ್ ಮಾರಾಟ ಮಾಡಿದ್ದರು. ಈ ದಾಖಲೆಗಳನ್ನು ಇದೀಗ ಇಂದ್ರಜಿತ್ ಲಂಕೇಶ್ ಎಸ್‌ಐಟಿಗೆ ತೋರಿಸಿದ್ದಾರೆ. ಇದೇ ವೇಳೆ ನೆಲಮಂಗಲದ ಆಸ್ತಿ ವಿಚಾರದಲ್ಲಿ ಗಲಾಟೆಯಾಗಿತ್ತು. ಬಳಿಕ ಇಂದ್ರಜಿತ್ ಸೂಚನೆ ಮೇರೆಗೆ ರಿಯಲ್ ಎಸ್ಟೇಟ್ ಉದ್ಯಮಿ ಅರುಣ್ ಗೌರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿತ್ತು. ಆದರೆ, ತಾಯಿ ಇಂದಿರಾ ಅವರು ಮಧ್ಯ ಪ್ರವೇಶಿಸಿ ಗಲಾಟೆ ಇತ್ಯರ್ಥ ಪಡಿಸಿದ್ದರು. ಹೀಗಾಗಿ ಕೌಟುಂಬಿಕ ಪ್ರಕರಣದಲ್ಲಿ ಯಾವುದೇ ಘರ್ಷಣೆಗಳಿಲ್ಲ ಎಂಬುದು ತಿಳಿದು ಬಂದಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಆದರೆ ವಿಚಾರಣೆಗೆ ಹಾಜರಾಗಬೇಕಾದ ಅರುಣ್ ಮುಖ್ಯಮಂತ್ರಿ ಕಚೇರಿಯಿಂದ ಕರೆ ಮಾಡಿಸಿ ವಿಚಾರಣೆಯಿಂದ ರಿಯಾಯಿತಿ ಕೇಳಿಕೊಂಡಿದ್ದ ಎನ್ನಲಾಗಿದೆ. ಆದರೆ, ಇತ್ತ ಕರೆ ಸ್ವೀಕರಿಸಿದ ಎಸ್‌ಐಟಿ ಅಧಿಕಾರಿ, ದಯವಿಟ್ಟು ಅವರನ್ನು ವಿಚಾರಣೆಗೆ ಕಳುಹಿಸಿಕೊಡಿ. ನಾವು ಅವರನ್ನು ಬಂಧಿಸುವುದಿಲ್ಲ ಎಂದು ಹೇಳಲಾಯಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.