ಶೋಕಿಗಾಗಿ ಬೈಕ್ ಕಳ್ಳತನ, ದ್ವಿಚಕ್ರ ವಾಹನ ಜಪ್ತಿ
Team Udayavani, Jun 12, 2022, 11:59 AM IST
ಬೆಂಗಳೂರು: ಶೋಕಿ ಜೀವನಕ್ಕಾಗಿ ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಪಿ.ಅಗ್ರಹಾರದ ಮಸ್ತಾನ್(26) ಬಂಧಿತ. ಇದೇ ವೇಳೆ ಕಾನೂನು ಸಂಘರ್ಷಕ್ಕೊಳಗಾದವನನ್ನು ವಶಕ್ಕೆ ಪಡೆ ಯಲಾಗಿದೆ. ಇಬ್ಬರಿಂದ 5 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮೇ 22ರಂದು ರಾತ್ರಿ ವ್ಯಕ್ತಿಯೊಬ್ಬರು ತಮ್ಮ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳವುವಾಗಿತ್ತು. ಈ ಸಂಬಂಧ ಬಂಧಿಸಲಾಗಿದೆ.
ಆರೋಪಿ ಮಸ್ತಾನ್, ಅಪ್ರಾಪ್ತ ಬಾಲಕನ ಜತೆ ಸೇರಿ ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡುತ್ತಿದ್ದರು. ಅವರ ಬಂಧನದಿಂದ ವಿಜಯನಗರ, ಜೆ.ಜೆ. ನಗರ, ಕೆ.ಜಿ.ಹಳ್ಳಿ, ಹೆಣ್ಣೂರು, ರಾಮಮೂರ್ತಿ ನಗರ, ವೈಟ್‌ಫೀಲ್ಡ್, ಚನ್ನಮ್ಮನಕೆರೆ ಅಚ್ಚುಕಟ್ಟು ಸೇರಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 11 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಒಎಲ್‌ಎಕ್ಸ್‌ನಲ್ಲಿ ಲ್ಯಾಪ್‌ಟಾಪ್ ತೋರಿಸಿ ವಂಚನೆ :
ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಲ್ಯಾಪ್‌ಟಾಪ್ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿ, ಅದನ್ನು ಗಮನಿಸಿ ಸಂಪರ್ಕಿಸುತ್ತಿದ್ದ ಗ್ರಾಹಕರಿಗೆ ಪಾರ್ಸೆಲ್ ಶುಲ್ಕ ಎಂದು ಹಣ ಸುಲಿಗೆ ಮಾಡುತ್ತಿದ್ದ ದೆಹಲಿ ಮೂಲದ ವಂಚಕನನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ಅಮನ್ ಕುಮಾರ್ (20) ಬಂಧಿತ. ಈತನಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಒಎಲ್‌ಎಕ್ಸ್ ನಲ್ಲಿ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಖರೀದಿಸಲು ಹುಡುಕುವಾಗ 1.50 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್ ಗಮನಿಸಿದ್ದಾರೆ. ಬಳಿಕ ಅದರಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಆರೋಪಿ, ಪಾರ್ಸೆಲ್ ಶುಲ್ಕ, ಪ್ಯಾಕಿಂಗ್ ಶುಲ್ಕ ಎಂದೆಲ್ಲ ಸುಮಾರು 72 ಸಾವಿರ ರೂ. ಪಡೆದುಕೊಂಡಿದ್ದಾನೆ. ಬಳಿಕ ದೂರುದಾರರ ವಿಳಾಸಕ್ಕೆ ಪಾರ್ಸೆಲ್ ಬಂದಿದ್ದು, ಅದನ್ನು ತೆರೆದು ನೋಡಿದಾಗ ಲ್ಯಾಪ್‌ಟಾಪ್ ಇರುವುದಿಲ್ಲ.
ಈ ಸಂಬಂಧ ದೂರು ನೀಡಿದ್ದರು. ಈ ಸಂಬಂಧ ದೂರು ನೀಡಿದ್ದು, ಆರೋಪಿಯ ಮೊಬೈಲ್ ಸಿಡಿಆರ್ ಹಾಗೂ ಇತರೆ ತಾಂತ್ರಿಕ ತನಿಖೆ ನಡೆಸಿ ಆತನನ್ನು ಬಂಧಿಸಲಾಗಿದೆ. ಈತನ ಇತರರಿಗೂ ಇದೇ ರೀತಿ ಯಲ್ಲಿ ವಂಚನೆ ಮಾಡಿರುವ ಮಾಹಿತಿಯಿದ್ದು, ವಿಚಾರಣೆ ಮುಂದುವರಿದಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.