![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Jan 29, 2025, 11:07 AM IST
ಬೆಂಗಳೂರು: ವರ್ತೂರು, ವಿಲ್ಸನ್ ಗಾರ್ಡನ್, ಯಲಹಂಕ, ಕೋಣನಕುಂಟೆ, ಬಾಗಲಗುಂಟೆ, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ದ್ವಿಚಕ್ರವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಯನ್ನು ಬಂಧಿಸಿದ ಪೊಲೀಸರು, 56 ದ್ವಿಚಕ್ರವಾಹನ, 4 ಆಟೋ ರಿಕ್ಷಾಗಳು ಹಾಗೂ 4 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.
ವರ್ತೂರು ಪೊಲೀಸರ ಕಾರ್ಯಾಚರಣೆ ನಡೆಸಿ ದ್ವಿಚಕ್ರವಾಹನ ಕದಿಯುತ್ತಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಿದ್ದಾರೆ. ಈತ ವೃತ್ತಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ. ಟೈಂ ಪಾಸ್‌ಗಾಗಿ ರಸ್ತೆ ಬದಿ ನಿಲುಗಡೆ ಮಾಡಿರುವ ಹಳೇ ಬೈಕ್‌ಗಳನ್ನು ಕದಿಯುತ್ತಿದ್ದ. ಬೈಕ್ ಗಳ ಹ್ಯಾಂಡ್ ಲಾಕ್ ಮುರಿದು ಡೈರೆಕ್ಟ್ ಮಾಡಿ ಸ್ಟಾರ್ಟ್ ಮಾಡಿ ಚಲಾಯಿಸಿಕೊಂಡು ಹೋಗುತ್ತಿದ್ದ. ಇನ್ನು ಈತ ಕದ್ದ ಬೈಕ್‌ಗಳನ್ನು ಮಾರಾಟ ಮಾಡದೇ ಅದರಲ್ಲಿದ್ದ ಪೆಟ್ರೋಲ್ ಖಾಲಿಯಾಗುವವರೆಗೆ ಓಡಿಸಿ ಪೆಟ್ರೋಲ್ ಖಾಲಿಯಾದ ನಂತರ ಅಲ್ಲೇ ನಿಲ್ಲಿಸಿ ಅಕ್ಕ-ಪಕ್ಕದಲ್ಲಿರುವ ಮತ್ತೂಂದು ದ್ವಿಚಕ್ರವಾಹನ ಕದಿಯುತ್ತಿದ್ದ. ಹಳೇ ಬೈಕ್‌ಗಳಿಗೆ ದಾಖಲೆಗಳು ಸರಿಯಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಹಳೇ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ. ಇತ್ತೀಚೆಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಶ್ರೀನಿವಾಸ್‌ನನ್ನು ಬಂಧಿಸಿದ್ದರು. ಆರೋಪಿಯಿಂದ ಒಟ್ಟು 15 ಲಕ್ಷ ರೂ. ಮೌಲ್ಯದ 20 ಬೈಕ್ ಜಪ್ತಿ ಮಾಡಿದ್ದಾರೆ.
4 ಬಸ್ ಬ್ಯಾಟರಿ ಜಪ್ತಿ: ಬೆಂಗಳೂರಿನ ಶಾಂತಿನಗರ ಬಸ್ ಡಿಪೋದ ವಿಲ್ಸನ್ ಗಾರ್ಡನ್ ಮಾರ್ಗದ ಬಿಎಂಟಿಸಿ ಬಸ್‌ಗಳ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಆರೋಪಿ ಸಲೀಂ ಪಾಷಾ ಎಂಬಾತನನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಶಾಂತಿನಗರದ ಡಿಪೋದ ಬಸ್ ಚಾಲಕರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಸಲೀಂ ಪಾಷಾನನ್ನು ವಿಚಾರಣೆ ನಡೆಸಿದಾಗ ಬಸ್ ಬ್ಯಾಟರಿ ಮಾತ್ರವಲ್ಲದೇ ಬೈಕ್ ಸಹ ಕಳ್ಳತನವಾಗಿರುವುದು ಗೊತ್ತಾಗಿದೆ. ಬಂಧಿತನಿಂದ ಒಟ್ಟು 14 ಲಕ್ಷ ಮೌಲ್ಯದ 17 ಬೈಕ್ ಮತ್ತು 4 ಬಸ್ ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.