Bike wheeling: ಬೈಕ್ ವ್ಹೀಲಿಂಗ್; ನಾಲ್ವರ ಸೆರೆ, 8 ಬೈಕ್ ಆರ್‌ಸಿ ಸಸ್ಪೆಂಡ್
Team Udayavani, Feb 28, 2024, 11:10 AM IST
ಬೆಂಗಳೂರು: ನಗರ ಸಂಚಾರ ಪೊಲೀಸರು ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾ ಚರಣೆ ಮುಂದುವರಿಸಿದ್ದು, ಸಂಚಾರ ಪೂರ್ವ ವಿಭಾ ಗದ ಪೊಲೀಸರು, ಐದು ಕೇಸುಗಳಲ್ಲಿ ನಾಲ್ವರು ಸವಾರರನ್ನು ಬಂಧಿಸಿದ್ದಾರೆ. ಇದೇ ವೇಳೆ ಬೈಕ್ ವ್ಹೀಲಿಂಗ್ ಸಂಬಂಧ 8 ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಪತ್ರವನ್ನು 3 ತಿಂಗಳ ಅವಧಿಗೆ ಸಾರಿಗೆ ಇಲಾಖೆ ಅಮಾನತು ಮಾಡಿದೆ.
ಸುರಂಜನ್ ದಾಸ್ ರಸ್ತೆ ಮತ್ತು ಎಚ್‌ಬಿಆರ್ ಲೇಔಟ್‌ನ 80 ಅಡಿ ರಸ್ತೆ ಹಾಗೂ ನರೇಂದ್ರ ಟೆಂಟ್ ರಸ್ತೆಯಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುತ್ತಿದ್ದ ಐವರು ದ್ವಿಚಕ್ರ ವಾಹನ ಸವಾರರನ್ನು ಬಂಧಿಸಿದ್ದು, ಅವರಿಂದ ಐದು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಐವರು ಸವಾರರ ಪೈಕಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದವನಾಗಿದ್ದಾನೆ. ಈ ಸಂಬಂಧ ಎಚ್‌ಎಎಲ್ ಸಂಚಾರ ಠಾಣೆ, ಕೆ.ಜಿ.ಹಳ್ಳಿ, ಜೀವನಭೀಮಾನಗರ ಸಂಚಾರ ಠಾಣೆಗಳಲ್ಲಿ 5 ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ .
8 ದ್ವಿಚಕ್ರ ವಾಹನಗಳ ನೋಂದಣಿ ಅಮಾನತು: ಈ ವೇಳೆ ಕಳೆದ6 ತಿಂಗಳಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್ ಸಂಬಂಧ 46 ಕೇಸು ದಾಖ ಲಿಸಿದ್ದ ಪೂರ್ವ ಸಂಚಾರ ವಿಭಾಗದ ಪೊಲೀಸರು, ಈ ಪೈಕಿ 8 ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು 3 ತಿಂಗಳ ಅವಧಿಗೆ ಸಾರಿಗೆ ಇಲಾಖೆ ಅಮಾ ನತುಗೊಳಿಸಿದೆ. 2023ರ ಸೆಪ್ಟೆಂಬರ್‌ನಿಂದ ಫೆ.27ರ ವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ 46 ದ್ವಿಚಕ್ರ ವಾಹನ ವ್ಹೀಲಿಂಗ್ ಪ್ರಕರಣ ದಾಖಲಿ ಸಲಾಗಿತ್ತು. ಈ ಪೈಕಿ 34 ಮಂದಿ ವಯಸ್ಕರು, 12 ಮಂದಿ ಅಪ್ರಾಪ್ತರಾಗಿದ್ದಾರೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.