ಸಚಿವ ಮಹದೇವಪ್ಪ ಹುಡುಕಿಕೊಡಲು ಬಿಜೆಪಿ ಆಗ್ರಹ
Team Udayavani, Mar 25, 2017, 3:45 AM IST
ವಿಧಾನಸಭೆ: ಲೋಕಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಸದನಕ್ಕೆ ಗೈರು ಹಾಜರಾಗಿರುವುದಕ್ಕೆ ಕಾರಣ ಕೇಳಿ ಅವರನ್ನು ಹುಡುಕಿಕೊಡುವಂತೆ ಬಿಜೆಪಿ ಸದಸ್ಯರು ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರನ್ನು ಆಗ್ರಹಿಸಿದ ಪ್ರಸಂಗ ನಡೆಯಿತು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದರು. ತಾವು ಕೇಳುವ ಪ್ರಶ್ನೆಗೆ ಉತ್ತರಿಸಲು ಸಂಬಂಧ ಪಟ್ಟ ಸಚಿವರು ಸದನದಲ್ಲಿ ಇಲ್ಲ. ಅವರು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಸಿಗ್ತಾರೆ ಅಲ್ಲಿಯೇ ಕೇಳುತ್ತೇನೆ ಬಿಡಿ ಎಂದರು.
ಅದಕ್ಕೆ ಸ್ಪೀಕರ್ ಕೊಳಿವಾಡ, ಸಚಿವರು ಅನುಮತಿ 2 ದಿನ ಸದನದಕ್ಕೆ ಹಾಜರಾಗದಿರಲು ಅನುಮತಿ ತೆಗೆದುಕೊಂಡಿದ್ದಾರೆ. ಎರಡು ದಿನ ಕಾರ್ಯ ನಿಮಿತ್ತ ಮೈಸೂರಿಗೆ ಹೋಗಬೇಕಿರುವುದರಿಂದ ಸದನಕ್ಕೆ ಬರಲು ಆಗುವುದಿಲ್ಲ ಎಂದು ಪತ್ರ ನೀಡಿದ್ದಾರೆ. ಅದರ ಆಧಾರದ ಮೇಲೆ ಅವರಿಗೆ ಅನುಮತಿ ನೀಡಿದ್ದೇನೆ. ಅವರ ಪರವಾಗಿ ಸರ್ಕಾರ ಉತ್ತರ ನೀಡುತ್ತದೆ ಎಂದು ಹೇಳಿದರು.
ಸ್ಪೀಕರ್ ಹೇಳಿಕೆಗೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು, ಮಹದೇವಪ್ಪ ಅವರು ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಅಧಿವೇಶನಕ್ಕಿಂತಲೂ ಅವರಿಗೆ ಉಪ ಚುನಾವಣೆ ಮುಖ್ಯವಾಗಿದೆಯೇ, ನಿಜವಾಗಲೂ ಕಾರ್ಯ ನಿಮಿತ್ತ ಅಂದರೆ, ಯಾವ ಕಾರ್ಯ ನಿಮಿತ್ತ ಹೋಗಿದಾರೆ, ಅವರಿಗೇನಾದರೂ ತೊಂದರೆಯಾಗಿದೆಯೇ, ಸಚಿವರ ಬಗ್ಗೆ ಸದನಕ್ಕೆ ಮಾಹಿತಿ ನೀಡುವಂತೆ ಸುರೇಶ್ ಕುಮಾರ್ ಆಗ್ರಹಿಸಿದರು. ಅವರಿಗೆ ಬೆಂಬಲವಾಗಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ನವರು ಸೋಲಿನ ಭೀತಿಯಿಂದ ಈಗಲೇ ಸಚಿವರನ್ನು ಅಲ್ಲಿ ಠೀಕಾಣಿ ಹೂಡಿಸಿದ್ದಾರೆ. ಸಚಿವರು ಎಲ್ಲಿದ್ದಾರೆ ಎಂಬುದನ್ನ ಸಭಾಧ್ಯಕ್ಷರು ತಕ್ಷಣವೆ ಕರೆಸಬೇಕೆಂದು ಆಗ್ರಹಿಸಿದರು. ಪೊಲಿಸರ ಮೂಲಕ ಅವರನ್ನು ಹುಡುಕಿಸಿ ಕೊಡಬೇಕೆಂದು ಆಗ್ರಹಿಸಿದರು.
ಅದಕ್ಕೆ ಕಾಂಗ್ರೆಸ್‌ನ ಬಂಗಾರಪೇಟೆ ನಾರಾಯಣಸ್ವಾಮಿ, ಸಚಿವರು ಎಲ್ಲಿಯೂ ಓಡಿ ಹೋಗಿಲ್ಲ. ಸ್ಪೀಕರ್ ಅನುಮತಿ ಪಡೆದುಕೊಂಡು ಹೋಗಿದ್ದಾರೆ ಎಂದರು. ಸಚಿವರಿಗೆ ಯಾರ ಜೊತೆಯೂ ಓಡಿ ಹೋಗುವ ವಯಸಲ್ಲಾ ಇದು. ಅವರು ಓಡಿ ಹೋಗಿಲ್ಲ ಅನ್ನುವ ನಂಬಿಕೆ ನಮಗೂ ಇದೆ. ಆದರೆ, ಸದನಕ್ಕೆ ಕರೆಸುವಂತೆ ಸ್ಪೀಕರ್‌ಗೆ ಸಿ.ಟಿ.ಆಗ್ರಹಿಸಿದರು.
ಸಚಿವರು ಡೈರಿ ಪ್ರಕರಣಕ್ಕೆ ಹೆದರಿ ಹೋಗಿದ್ದಾರಾ? ಮಗನಿಗೆ ನಂಜನಗೂಡಿನಲ್ಲಿ ಟಿಕೆಟ್ ಸಿಗಲಿಲ್ಲ ಅಂತ ಬೇಸರ ಮಾಡಿಕೊಂಡು ಹೋಗಿದಾರಾ ಅಥವಾ ಆರೋಗ್ಯ ಸಮಸ್ಯೆ ಇದೆಯಾ ಎಂದು ಬಿಜೆಪಿಯ ಸುನಿಲ್ ಕುಮಾರ್ ಪ್ರಶ್ನಿಸಿದರು. ಸಚಿವರಿಗೆ ಸೋಮವಾರ ಮತ್ತು ಮಂಗಳವಾರ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸುವುದಾಗಿ ಸ್ಪೀಕರ್ ಕೋಳಿವಾಡ್ ಹೇಳಿದ ನಂತರ ಸದನ ತಣ್ಣಗಾಯಿತು.
ಸರ್ಕಾರ ಸತ್ತಿದೆ : ಶೆಟ್ಟರ್
*ಪ್ರಶ್ನೋತ್ತರ ಕಲಾಪ ಆರಂಭವಾದಾಗ ವಿಧಾನಸಭೆಯಲ್ಲಿ ಹಾಜರಿರಬೇಕಾದಷ್ಟು ಸಚಿವರು ಹಾಜರಿಲ್ಲದ ಕಾರಣ ಸ್ಪೀಕರ್ ಕೆ.ಬಿ. ಕೋಳಿವಾಡ ಹಾಜರಿರಬೇಕಾದ ಸಚಿವರ ಪಟ್ಟಿ ಓದಿದರು. ಪ್ರಶ್ನೆಗಳಿಗೆ ಉತ್ತರಿಸಬೇಕಾದ ಆರು ಜನ ಸಚಿವರಲ್ಲಿ ಕೇವಲ ಇಬ್ಬರು ಮಾತ್ರ ಹಾಜರಿದ್ದರು. ಅಲ್ಲದೇ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರಲ್ಲಿ ಜಯಚಂದ್ರ ಮಾತ್ರ ಹಾಜರಿದ್ದು, ಎಂ.ಬಿ. ಪಾಟೀಲ್, ರಮೇಶ್ ಕುಮಾರ್, ಎಚ್. ಆಂಜನೇಯ, ರಮಾನಾಥ ರೈ, ರುದ್ರಪ್ಪ ಲಮಾಣಿ, ಡಿ.ಕೆ ಶಿವಕುಮಾರ್ ಹಾಜರಿರಲಿಲ್ಲ. ಹೀಗಾಗಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸರ್ಕಾರಕ್ಕೆ ಸದನ ನಡೆಸುವ ಮನಸಿಲ್ಲ. ನಮ್ಮ ಪಕ್ಷದಿಂದಲೂ ಚುನಾವಣೆಗೆ ಹೋಗಬೇಕೆಂಬ ಸೂಚನೆ ಇದೆ. ಆದರೆ, ಅಧಿವೇಶನ ಇರುವುದರಿಂದ ಇದು ಮುಗಿಯುವವರೆಗೂ ನಮಗೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಲಾಗಿದೆ. ಸದನದ ಪರಿಸ್ಥಿತಿಯನ್ನು ನೋಡಿದರೆ, ಸರ್ಕಾರ ಸತ್ತು ಹೋಗಿದೆ ಎನಿಸುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.