ಬಹಿರಂಗ ಚರ್ಚೆಗೆ ಬಿಜೆಪಿಗೆ ಧಮ್ ಇಲ್ಲ
Team Udayavani, Nov 12, 2017, 12:23 PM IST
ಬೆಂಗಳೂರು: ಭ್ರಷ್ಟಾಚಾರ ಕುರಿತು ಬಹಿರಂಗ ಚರ್ಚೆಗೆ ಕರೆದರೆ ಬರುವ “ಧಮ್’ ರಾಜ್ಯ ಬಿಜೆಪಿಯವರಿಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ವಿಜಯನಗರದಲ್ಲಿ ಶನಿವಾರ ವಿವಿಧ ಅಭಿವೃದಿಟಛಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಯಡಿಯೂರಪ್ಪ ನವರಿಗೆ ವಯಸ್ಸಾಗಿ ರುವ ಕಾರಣ ಏನೇನೋ ಮಾತನಾಡುತ್ತಾರೆ.
ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡುವ ಅವರು, ಬಹಿರಂಗ ಚರ್ಚೆಗೆ ಕರೆದರೆ ಬರುವುದಿಲ್ಲ ಎಂದು ಹೇಳಿದರು.
ಅಷ್ಟೇ ಅಲ್ಲದೆ “ಬಿಜೆಪಿ ನಾಯಕರಿಗೆ ಧಮ್ ಇದ್ದರೆ ಬೆಳಗಾವಿ ಅಧಿವೇಶನಕ್ಕೆ ಬರಲಿ ಚರ್ಚೆ ಮಾಡೋಣ’ಎಂದು ಸವಾಲು ಹಾಕಿದರು.
ಭ್ರಷ್ಟ ಬಿಜೆಪಿ ನಾಯಕರು ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ನಯವಾಗಿ ಮಾತನಾಡುವ ನಯವಂಚಕರು. ಬಿಜೆಪಿಯವರಿಗೆ ಜನಪರ ಕಾರ್ಯಕ್ರಮಗಳ ಬಗ್ಗೆ ಕಾಳಜಿಯಿಲ್ಲ. ನನ್ನನ್ನು ಒಳಗೊಂಡಂತೆ ಕಾಂಗ್ರೆಸ್ ನಾಯಕರು ಲೂಟಿ ಹೊಡೆದಿದ್ದಾರೆಂದು ಆರೋಪ ಮಾಡುವುದೇ ಅವರ ಸಿದ್ಧಾಂತವಾಗಿದೆ. ಆದರೆ, ಜೈಲಿಗೆ ಹೋಗಿ ಬಂದಿದ್ದು
ಯಡಿಯೂರಪ್ಪ ಮತ್ತು ಅಮಿತ್ ಶಾ ಅಂತ ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಬ್ಲೂ ಫಿಲಂ ಅಂದರೆ ಏನು ಗೊತ್ತಾ?: ಬಿಜೆಪಿ ವಿರುದ್ಧ ಟೀಕಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬಿಜೆಪಿ ಅಧಿಕಾರದಲ್ಲಿದ್ದಾಗ ಬ್ಲೂ ಫಿಲಂ ನೋಡಿ ಕೆಲವರು ಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಬ್ಲೂ ಫಿಲಂ ಅಂದ್ರೆ ಏನು ಗೊತ್ತಾ?’ ಎಂದು ಸಭಿಕರನ್ನು ಪ್ರಶ್ನಿಸಿದರು. “ಬ್ಲೂ ಫಿಲಂ ಅಂದ್ರೆ ನೀಲಿ ಚಿತ್ರ ಅಂಥ’ ಎಂದ ಅವರು, “ಜೈಲಿಗೆ ಹೋಗಿದ್ದವರು, ನೀಲಿ ಚಿತ್ರ ನೋಡಿದವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ’ ಎಂದರು.
ಸಚಿನ್‌ಗೆ ಹೋಲಿಕೆ: ಮೇಯರ್ ಆರ್.ಸಂಪತ್ ರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದರು. ಸಚಿನ್‌ಗೆ ತಮ್ಮ ದಾಖಲೆಗಳ ಬಗ್ಗೆ ಕೇಳಿದರೆ ಯಾವ ದಾಖಲೆ
ಎಂದು ತಿಳಿಯುವುದಿಲ್ಲ. ಅದೇ ರೀತಿ ಸಿದ್ದರಾಮಯ್ಯ ಅವರಿಗೆ ತಾವು ಘೋಷಣೆ ಮಾಡಿರುವ ಯೋಜನೆಗಳು ಎಷ್ಟಿವೆ ಎಂಬುದು ತಿಳಿಯುವುದಿಲ್ಲ ಎಂದು ಹೇಳಿದರು.
ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ತಂತ್ರ
ವಿಧಾನಮಂಡಲ ಅಧಿವೇಶನದ ವೇಳೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾದರೆ, ಇಂಧನ ಖರೀದಿ ಅಕ್ರಮ ಪ್ರಕರಣವನ್ನು ಗುರಾಣಿಯಾಗಿ
ಬಳಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಬೆಳಗಾವಿ ಅಧಿವೇಶನದಲ್ಲಿ ಇಂಧನ ಖರೀದಿ ಅಕ್ರಮ ಕುರಿತು ವರದಿ ಸಲ್ಲಿಸುವುದಾಗಿ ಹೇಳಿರುವುದರಿಂದ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದರೆ ಇಂಧನ ಖರೀದಿಯ ಅವ್ಯವಹಾರದ ಅಂತಿಮ ವರದಿಯನ್ನು ಸದನದಲ್ಲಿ ಮಂಡಿಸಿ, ಬಿಜೆಪಿ ವಿರುದಟಛಿವೇ ತಿರುಗಿ ಬೀಳಲು ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಕೈ ಬಿಟ್ಟಿರುವುದರಿಂದ ಆ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸುವಂತೆ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ. ಅದನ್ನೂ ಕೂಡ ಸಂಪುಟದಲ್ಲಿ ಚರ್ಚಿಸಿ, ಬೆಳಗಾವಿ ಅಧಿವೇಶನದ ಸಮಯದಲ್ಲಿಯೇ ಬಿಜೆಪಿ ವಿರುದ್ಧ ಪ್ರಯೋಗಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ಬಗರ್ ಹುಕುಂ ಜಮೀನು ಮಂಜೂರು ಮಾಡಿರುವ ಆರೋಪದ ಪ್ರಕರಣವನ್ನೂ ಪ್ರಸ್ತಾಪಿಸಿ ಬಿಜೆಪಿ ಬಾಯಿ ಮುಚ್ಚಿಸುವುದು ಕಾಂಗ್ರೆಸ್ ತಂತ್ರಗಾರಿಕೆ. ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯ ಹೋರಾಟದ ವೈಖರಿ ನೋಡಿಕೊಂಡು ಕಾಂಗ್ರೆಸ್ ಸಹ ಒಂದೊಂದೇ ಅಸOಉ ಪ್ರಯೋಗಕ್ಕೆ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.