ರಾಜ್ಯಕ್ಕೆ ಬಿಜೆಪಿಯೇ ಪರ್ಯಾಯ


Team Udayavani, May 5, 2018, 6:55 AM IST

Shobha-Karandlaje–A-750.jpg

ಬೆಂಗಳೂರು:ಕರ್ನಾಟಕದಲ್ಲಿ  ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ದಕ್ಷಿಣ ಭಾರತದ ಹೆಬ್ಟಾಗಿಲು ಪ್ರವೇಶ ಮಾಡಲಿದೆ ಎಂದು ಸಂಸದೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳಿಗೂ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ. ತೋರಿಕೆಗೆ ನಮ್ಮದೇ ಸರ್ಕಾರ ಎಂದು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ . ವಾಸ್ತವ ಅವರಿಗೂ ಗೊತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬಿಡು¤, ಮೇ.17 ಕ್ಕೆ ಪ್ರಮಾಣ ವಚನ ಎಂಬ ಹೇಳಿಕೆಗಳು ಅತಿಯಾದ ವಿಶ್ವಾಸ ಅಲ್ಲವಾ?
         ಖಂಡಿತ ಇಲ್ಲ. ಯಾರಿಗೆ ವಿಶ್ವಾಸ ಇಲ್ಲವೋ ಅವರು ಗೊಂದಲದ ಹೇಳಿಕೆ ಕೊಟ್ಟು ಜನರನ್ನು ದಿಕ್ಕು ತಪ್ಪಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಹ ಕೆಲಸದಲ್ಲಿ ನಿರತರಾಗಿದ್ದಾರೆ. ರಾಜ್ಯದ ಜನಾಭಿಪ್ರಾಯದ ಆಧಾರದ ಮೇಲೆಯೇ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಹೇಳುತ್ತಿದ್ದೇವೆ.

ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿಯಲ್ಲೂ  ಈ ಬಾರಿ ಟಿಕೆಟ್‌ ಹಂಚಿಕೆಯ ಬಗ್ಗೆ ಅಪಸ್ವರ ಬಂತಲ್ಲಾ?
         ಇದು ಕೇವಲ ಬಿಜೆಪಿ ಅಂತಲ್ಲ. ಕಾಂಗ್ರೆಸ್‌-ಜೆಡಿಎಸ್‌ ಎಲ್ಲ ಪಕ್ಷಗಳಲ್ಲೂ ಇದ್ದದ್ದೇ. ಒಂದು ಕ್ಷೇತ್ರಕ್ಕೆ ಐವರು ಆಕಾಂಕ್ಷಿಗಳಿದ್ದರೆ ಒಬ್ಬರಿಗೆ ಮಾತ್ರ ಟಿಕೆಟ್‌ ಕೊಡಲು ಸಾಧ್ಯ. ಉಳಿದವರು ಬೇಸರವಾಗುವುದು ಸಹಜ. ಆದರೆ, ನಾವು ಆದಷ್ಟೂ ಬಂಡಾಯ ಶಮನ ಮಾಡಿದ್ದೇವೆ.

ವಿಜಯಪುರ, ಬಾಗಲಕೋಟೆ, ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್‌ ಸಿಕ್ಕಿಲ್ಲ ಎಂಬ ಆರೋಪ ಇದೆಯಲ್ಲಾ?
         ನೋಡಿ, ಬಿಜೆಪಿ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಹಾಲಿ ಶಾಸಕರಿಗೆ ಸ್ಥಳೀಯವಾಗಿ ವಿರೋಧಿ ಅಲೆ ಇದೆ  ಎಂಬುದು ಗೊತ್ತಾಯಿತು. ಹೀಗಾಗಿಯೇ ನಾವು ಟಿಕೆಟ್‌ ಕೊಟ್ಟಿಲ್ಲ. ನಾವು ಮಿಷನ್‌ -150 ಗುರಿ ಇಟ್ಟುಕೊಂಡಿರುವಾಗ ಸಮರ್ಥ ಹಾಗೂ ಗೆಲ್ಲುವ ಅಭ್ಯರ್ಥಿಯನ್ನು ಬಿಟ್ಟು ಬೇರೆಯವರಿಗೆ ಕೊಡಲು ಸಾಧ್ಯವೇ.

ಬಿಜೆಪಿಗೆ ಜನಾರ್ದನರೆಡ್ಡಿ ತೀರಾ ಅಗತ್ಯವಾ?
        ನಾವು ಅಗತ್ಯ ಎಂದು ಹೇಳೇ ಇಲ್ಲ. ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಅವರದು ದಶಕಗಳ ಸಂಬಂಧ. ವೈಯಕ್ತಿಕ ಬಾಂಧವ್ಯದ ನೆಲೆಗಟ್ಟಿನಲ್ಲಿ ಅವರು ಪ್ರಚಾರ ಮಾಡುತ್ತಿರಬಹುದು. ಮೊಳಕಾಳೂ¾ರು ಸೇರಿ ಒಂದೆರಡು ಕ್ಷೇತ್ರಗಳಲ್ಲಿ ಪ್ರಚಾರದಲ್ಲಿದ್ದಾರೆ. ಇದನ್ನೇ ಕಾಂಗ್ರೆಸ್‌ನವರು ದೊಡ್ಡದು ಮಾಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರು ಎನ್ನುವ ಅವರು ನಾಗೇಂದ್ರ, ಆನಂದ್‌ಸಿಂಗ್‌ ಅವರನ್ನು ಯಾಕೆ ಕರೆದು ಟಿಕೆಟ್‌ ಕೊಟ್ಟರು. ಇನ್ನೂ ಹಲವರನ್ನು ಕಾಂಗ್ರೆಸ್‌ಗೆ ಸೆಳೆಯಲು ಏನೆಲ್ಲಾ ಬ್ಲ್ಯಾಕ್‌ವೆುàಲ್‌ ಮಾಡಿದರು ಎಂಬುದು ನಮಗೆ ಗೊತ್ತಿದೆ. ಅದು ಮುಂದೆ ಬಹಿರಂಗವಾಗಲಿದೆ. ಕಾದು ನೋಡಿ.

ಕಳಂಕಿತರಿಗೆ ಟಿಕೆಟ್‌ ನೀಡಲಾಗಿದೆ ಎಂಬ ಆರೋಪ ಇದೆಯಲ್ಲಾ?
       ಕಾಂಗ್ರೆಸ್‌ನವರ ದೃಷ್ಟಿಯಲ್ಲಿ ಕಳಂಕಿತರು ಎಂದರೆ ಕಳಂಕಿತರಲ್ಲ. ನ್ಯಾಯಾಲಯ ತೀರ್ಪು ಕೊಡಬೇಕು. ಕಾಂಗ್ರೆಸ್‌ ಸರ್ಕಾರವೇ ರಚಿಸಿದ ಎಸ್‌ಐಟಿ ತನಿಖೆಯಲ್ಲೇ ಯಾವುದೂ ಸಾಬೀತಾಗದೆ ಕ್ಲೀನ್‌ಚಿಟ್‌ ಸಿಕ್ಕಿರುವಾಗ ಸುಮ್ಮನೆ ಆರೋಪ ಮಾಡುವುದು ಎಷ್ಟು ಸರಿ. ಅವರು ಟಿಕೆಟ್‌ ಕೊಟ್ಟಿರುವವರ ಮೇಲೆ ಏನೆಲ್ಲಾ ಆರೋಪಗಳಿಗೆ ಗೊತ್ತುಂಟಾ.

ವಿಜಯೇಂದ್ರಗೆ ವರುಣಾದಲ್ಲಿ ಟಿಕೆಟ್‌ ತಪ್ಪಿದ್ದಕ್ಕೆ ನಾನಾ ರೀತಿಯ ವಿಶ್ಲೇಷಣೆಗಳು ಕೇಳಿಬರುತ್ತಿವೆಯಲ್ಲಾ?
        ಅವೆಲ್ಲವೂ ಕಪೋಲಕಲ್ಪಿತ ಊಹಾಪೋಹ. ಪಕ್ಷದ ಕಾರ್ಯತಂತ್ರದ ಭಾಗವಾಗಿ ಟಿಕೆಟ್‌ ಕೊಟ್ಟಿಲ್ಲ. ಅದು ಬಿಟ್ಟು ಬೇರೇನೂ ಇಲ್ಲ.

ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಕಾಂಗ್ರೆಸ್‌ ಹೇಳುತ್ತಿದೆಯಾ?
        ಕಾಂಗ್ರೆಸ್‌ನವರಿಗೆ ಭಯ ಬಂದಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ. ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದೆ. ಇಡೀ ನಾಡಿನ ಜನತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ. ಕಾಂಗ್ರೆಸ್‌ನವರು ಅಪಪ್ರಚಾರ, ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.

ಚಾಮುಂಡೇಶ್ವರಿ-ವರುಣಾದಲ್ಲಿ ಬಿಜೆಪಿ ಯಾಕೆ ಪ್ರಬಲ ಅಭ್ಯರ್ಥಿ ಇಳಿಸಲಿಲ್ಲಾ?
        ನಿಜ ಹೇಳಬೇಕಾದರೆ ಎರಡೂ ಕ್ಷೇತ್ರಗಳಲ್ಲಿ ನಮ್ಮ ಸಂಘಟನಾ ಶಕ್ತಿ ಅಷ್ಟೊಂದು ಶಕ್ತಿಯುತವಾಗಿಲ್ಲ. ಅಲ್ಲಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್‌ ನೀಡಲಾಗಿದೆ

ಕುಮಾರಸ್ವಾಮಿ- ಅಮಿತ್‌ ಶಾ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ರು ಅಂತ, ಸಿದ್ದರಾಮಯ್ಯ ಹೇಳ್ತಾರೆ, ವರುಣಾದಲ್ಲಿ ಕಾಂಗ್ರೆಸ್‌-ಬಿಜೆಪಿ ಹೊಂದಾಣಿಕೆಯಾಗಿದೆ ಅಂತ ಕುಮಾರಸ್ವಾಮಿ ಹೇಳ್ತಾರೆ ಯಾವುದ ಸತ್ಯ?
        ಎರಡೂ ಸತ್ಯವಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ. ಹೀಗಾಗಿ, ಜನರನ್ನು ದಿಕ್ಕು ತಪ್ಪಿಸುವ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಒಂದು ರೀತಿಯಲ್ಲಿ ದಾರಿ ತಪ್ಪಿದ ಮಗ ಎಂಬಂತಾಗಿದ್ದಾರೆ. ಅವರಿಗೆ ಎರಡು ನಾಲಿಗೆ, ಎರಡು ತಲೆ. ದಿನಕ್ಕೊಂದು ಹೇಳಿಕೆ, ಗಂಟೆಗೊಂದು ವರ್ತನೆ,  ಬರೀ ಉಡಾಫೆ .ಇದು ಹತಾಶೆಯ ಪ್ರತೀಕ.

ಆಡಳಿತಾರೂಢ ಕಾಂಗ್ರೆಸ್‌ ಬಗ್ಗೆ ನಿರಂತರ ಟೀಕೆಗಳಲ್ಲಿ ತೊಡಗಿದ್ದೀರಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಿಲ್ಲವೇ?
        ಪಕ್ಷ ಪ್ರತಿಯೊಬ್ಬರಿಗೂ ಕೆಲವೊಂದು ಹೊಣೆಗಾರಿಕೆ ನೀಡಿದೆ. ಅದನ್ನು ನಾನು ನಿಭಾಯಿಸುತ್ತಿದ್ದೇನೆ. ಜತೆಗೆ  ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ಮುಂದೆಯೂ ಮಾಡಲಿದ್ದೇನೆ.

ಯಶವಂತಪುರದಲ್ಲಿ ಸ್ಪರ್ಧೆಯಿಂದ ಯಾಕೆ ಹಿಂದೇಟು ಹಾಕಿದಿರಾ?
        ನನಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆಸಕ್ತಿ ಇರಲಿಲ್ಲ. ಪಕ್ಷದ ನಿರ್ಧಾರವೂ ಅದೇ ಆಗಿತ್ತು. ಆದರೆ,  ಕ್ಷೇತ್ರದ ಜನತೆ ನಾನು ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹೇರಿದ್ದರು. ಆದರೆ, ನನ್ನ ಸಂಸತ್‌ ಸದಸ್ಯತ್ವ ಅವಧಿ ಇನ್ನೂ ಒಂದು ವರ್ಷ ಇದೆ. ಹೀಗಾಗಿ, ವಿಧಾನಸಭೆ ಚುನಾವಣೆಗ ಸ್ಪರ್ಧಿಸಿದರೆ ಇನ್ನೊಂದು ಉಪ ಚುನಾವಣೆ ಎದುರಾಗಲಿತ್ತು.  ಹೀಗಾಗಿ ಬೇಡ ಎಂದು ಅಲ್ಲಿನ ಕಾರ್ಯಕರ್ತರು-ಮುಖಂಡರಿಗೆ ಮನವೊಲಿಸಲಾಯಿತು.

ಬೆಂಗಳೂರಿನಲ್ಲಿ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ?
        28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗಿಂತ ಅತಿ ಹೆಚ್ಚು ಸೀಟು ಗೆಲ್ಲಲಿದೆ. ಬೆಂಗಳೂರು ರಕ್ಷಿಸಿ ಅಭಿಯಾನ, ಬೂತ್‌ ಮಟ್ಟದ ಸಮಾವೇಶ, ವಾರ್ಡ್‌ಮಟ್ಟದ ಪ್ರಚಾರ ಅಭಿಯಾನಕ್ಕೆ ಅತೀವ ಸ್ಪಂದನೆ ದೊರೆತಿದೆ. ಕಾಂಗ್ರೆಸ್‌ನ ಪರ್ಸಂಟೇಜ್‌ ವ್ಯವಹಾರದಿಂದ ಜನ ರೋಸಿ ಹೋಗಿದ್ದಾರೆ.  ಬೆಳ್ಳಂದೂರು ಕೆರೆ ಹೊತ್ತಿ  ಉರಿದರೂ ಪರಿಹಾರ ಸಿಕ್ಕಿಲ್ಲ, ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ  ಒತ್ತು ಕೊಟ್ಟಿಲ್ಲ. ಇವೆಲ್ಲವೂ ಆ ಪಕ್ಷಕ್ಕೆ ಮುಳುವಾಗಲಿದ್ದು ಜನತೆ ಬಿಜೆಪಿ ಬೆಂಬಲಿಸಲಿದ್ದಾರೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಭರ್ಜರಿ ಕಾರ್ಯಕ್ರಮ ಘೋಷಿಸಿದ್ದೀರಿ? ಅನುಷ್ಟಾನ ಸಾಧ್ಯವಾ?
       ಖಂಡಿತವಾಗಿಯೂ ಸಾಧ್ಯ. ಆರ್ಥಿಕ ಇತಿ-ಮಿತಿ, ಸಂಪನ್ಮೂಲ ಕ್ರೂಢೀಕರಣ, ರಾಜ್ಯದ ಎಲ್ಲ ವಿಭಾಗಗಳ ಅಗತ್ಯತೆ ಎಲ್ಲವನ್ನೂ ಕೂಲಂಕುಶವಾಗಿ ಪರಾಮರ್ಶೆ ಮಾಡಿಯೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ.  ಪ್ರಣಾಳಿಕೆ ನಮಗೆ ಭಗವದ್ಗೀತೆ ಇದ್ದಂತೆ. ಅತ್ಯಂತ ಗೌರವಪೂರ್ವಕವಾಗಿ ಸಿದ್ಧಪಡಿಸಿ ಜನತೆಯ ಮುಂದಿಟ್ಟಿದ್ದೇವೆ. ಕಾಂಗ್ರೆಸ್‌ನವರು ಹಿಂದಿನ ಚುನಾವಣೆಯಲ್ಲಿ 169 ಭರವಸೆಯಲ್ಲಿ 165 ಭರವಸೆ  ಈಡೇರಿಸಿದ್ದೇವೆ ಅಂತಾರೆ.  ಎಲ್ಲವೂ ಅಭಿವೃದ್ಧಿ ಆಗಿ ಹೋಗಿದ್ದರೆ  ಈ ಬಾರಿ ಯಾಕೆ ಇನ್ನೂ 200 ಭರವಸೆ ನೀಡಲಾಗಿದೆ. ಒಬ್ಬ ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಣಾಳಿಕೆ ಓದಿಯೇ ಇಲ್ಲ ಎಂಬುದೇ ದುರಂತ. ಇಲ್ಲದಿದ್ದರೆ ಶತಮಾನದ ಇತಿಹಾಸ ಹೊಂದಿರುವ ಪಕ್ಷದ ಪ್ರಣಾಳಿಕೆ ತಪ್ಪು-ದೋಷ, ಅಸಂಬದ್ಧಗಳಿಂದ ನಗೆಪಾಟಲಿಗೆ  ಈಡಾಗುತ್ತಿರಲಿಲ್ಲ.

ಸಂದರ್ಶನ: ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.