ಪರಿವರ್ತನಾ ಯಾತ್ರೆಗೆ ಬಿಜೆಪಿ ಸಜ್ಜು


Team Udayavani, Oct 29, 2017, 7:15 AM IST

171028kpn97.jpg

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ನಿಟ್ಟಿನಲ್ಲಿ ನವೆಂಬರ್‌ 2 ರಿಂದ ಹಮ್ಮಿಕೊಂಡಿರುವ “ಪರಿವರ್ತನಾ ಯಾತ್ರೆ’ಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಸಾಧನೆಗಳು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫ‌ಲ್ಯ-ಭ್ರಷ್ಟಾಚಾರ ಆರೋಪಗಳ ಪಟ್ಟಿ ಸಿದಟಛಿಪಡಿಸಲಾಗಿದೆ.

ಜತೆಗೆ “ಕಮಲವು ಅರಳಲಿ, ಕೇಸರಿ ಮರಳಲಿ, ಕರ್ನಾಟಕದಲ್ಲಿ ಕಮಲ ರಂಗೇರಲಿ, ಒಂದೇ ಮಾತರಂ, ಜೈ ಬಿಜೆಪಿ’ ಥೀಮ್‌ಸಾಂಗ್‌ ಸೀಡಿ ಸಹ ಸಿದ್ಧಗೊಳಿಸಲಾಗಿದ್ದು, ಬಿಜೆಪಿ ಸಾಧನೆ, ಕಾಂಗ್ರೆಸ್‌ನ ವೈಫ‌ಲ್ಯಗಳ ಕರಪತ್ರಗಳನ್ನು ರಾಜ್ಯದ ಎಲ್ಲ ವಿಧಾನಸಭೆ
ಕ್ಷೇತ್ರದ ಬೂತ್‌ ಮಟ್ಟಕ್ಕೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ.

ಶನಿವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪರಿವರ್ತನಾ ಯಾತ್ರೆಯ ಕರಪತ್ರ, ಥೀಮ್‌ಸಾಂಗ್‌ ಸೀಡಿ ಬಿಡುಗಡೆಗೊಳಿಸಿ ಮಾತನಾಡಿದ ಸಂಸದೆ ಹಾಗೂ ಯಾತ್ರೆಯ ಉಸ್ತುವಾರಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ನೇತೃತ್ವದಲ್ಲಿ 75 ದಿನಗಳ ಕಾಲ ನಡೆಯುವ ಯಾತ್ರೆ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.

ನವೆಂಬರ್‌ 2 ರಂದು ಬೆಂಗಳೂರಿನ ತುಮಕೂರು ರಸ್ತೆಯ ವಸ್ತು ಪ್ರದರ್ಶನ ಕೇಂದ್ರ ಆವರಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಾಲ್ಗೊಳ್ಳಲಿದ್ದು, ಸಮಾರೋಪದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ದಿನ ರಾಜ್ಯದ ವಿವಿಧೆಡೆಯಿಂದ ಒಂದು ಲಕ್ಷ ಬೈಕ್‌ಗಳು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಈಗಾಗಲೇ 55 ಸಾವಿರ ಬೈಕ್‌ ಗಳು ನೋಂದಣಿಯಾಗಿವೆ. 3 ಲಕ್ಷ ಜನ ಸೇರುವ ಅಂದಾಜು ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದ 224 ಕ್ಷೇತ್ರಗಳಲ್ಲೂ ಸಂಚರಿಸುವ ಯಾತ್ರೆ ಯಶಸ್ವಿಗಾಗಿ ರಾಜ್ಯಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವಾರು ಸಮಿತಿ ರಚಿಸಲಾಗಿದೆ. ರಥ ನಿರ್ವಹಣೆ, ಯಾತ್ರಾ ಪ್ರಮುಖ್‌, ಬೈಕ್‌ ರ್ಯಾಲಿ ಪ್ರಮುಖ್‌, ಆರ್ಥಿಕ ಸಮಿತಿ, ಊಟ ಮತ್ತು ವಸತಿ ಸಮಿತಿ, ಸ್ವತ್ಛತಾ ಸಮಿತಿ, ಮಾಧ್ಯಮ ಸಮಿತಿ, ಸಾಮಾಜಿಕ ಜಾಲತಾಣ ನಿರ್ವಹಣೆ ಸಮಿತಿ ರಚಿಸಲಾಗಿದೆ.

ಪರಿವರ್ತನಾ ಯಾತ್ರೆಗೆ ರಾಜ್ಯಮಟ್ಟದಲ್ಲಿ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಿಂದ ಅನುಮತಿ ಪಡೆಯಲಾಗಿದೆಯಾದರೂ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಮನವಿಕೊಟ್ಟು ಅನುಮತಿ ಪಡೆಯಲಾಗುವುದು . ಯಾತ್ರೆ ಕೊಡಗು ಜಿಲ್ಲೆಗೆ ಪ್ರವೇಶ ಮಾಡುವುದಕ್ಕೆ ಅಲ್ಲಿನ ಜಿಲ್ಲಾಡಳಿತ ಅನುಮತಿ ಕೊಟ್ಟಿಲ್ಲ. ಹೀಗಾಗಿ, ಅರಕಲಗೂಡಿನಿಂದ ನೇರವಾಗಿ ಪುತ್ತೂರಿಗೆ ತೆರಳಿ
ಸುಳ್ಯದಲ್ಲಿ ಮರುದಿನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.

ಉದ್ಘಾಟನೆಯಿಂದ ಸಮಾರೋಪದವರೆಗೆ 224 ಕ್ಷೇತ್ರಗಳಲ್ಲಿ ಸಂಚಾರ ಮತ್ತು ಭಾಷಣ ಎಲ್ಲವೂ ವಿಡಿಯೋ, ಫೋಟೋ ಸಹಿತ ದಾಖಲೀಕರಣ ಮಾಡಲಾಗುವುದು. 

ಪರಿವರ್ತನಾಯಾತ್ರೆ ಸಲುವಾಗಿಯೇ ಬಿಜೆಪಿ ಕಾರ್ಯಾಲಯ ಹೊರತುಪಡಿಸಿ ಮತ್ತೂಂದು ಕಾರ್ಯಾಲಯ ಸ್ಥಾಪಿಸಲಾಗಿದ್ದು, ಇದೇ ಕಚೇರಿಯ 3ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

75 ದಿನಗಳ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ವಿಧಾನಮಂಡಲ ಅಧಿವೇಶನ ಹಾಗೂ ಸಂಸತ್‌ ಅಧಿವೇಶನವೂ ಅದೇ ಸಂದರ್ಭದಲ್ಲಿ ನಡೆಯುವುದರಿಂದ ಅಲ್ಲೂ ನಮ್ಮ ಹಾಜರಿ ಇರುವಂತೆ ನೋಡಿಕೊಂಡು ಯಾತ್ರೆಯಲ್ಲಿ ಭಾಗವಹಿಸಬೇಕಾದ ನಾಯಕರ ತಂಡ ರಚಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ವಕ್ತಾರರಾದ ವಾಮನಾಚಾರ್ಯ, ಸಹ ವಕ್ತಾರರಾದ ಎ.ಎಚ್‌.ಆನಂದ್‌, ಮಾಳವಿಕಾ ಅವಿನಾಶ್‌, ಮಧುಶ್ರೀ, ಲಹರಿ ವೇಲು ಉಪಸ್ಥಿತರಿದ್ದರು.

ಶೋಭಾ ಪರಿಕಲ್ಪನೆ 
ಪರಿವರ್ತನಾ ಯಾತ್ರೆಗೆ ರಚಿಸಲಾಗಿರುವ “ಕಮಲವು ಅರಳಲಿ, ಕೇಸರಿ ಮರಳಲಿ, ಕರ್ನಾಟಕದಲ್ಲಿ ಕಮಲ ರಂಗೇರಲಿ, ಒಂದೇ ಮಾತರಂ, ಜೈ ಬಿಜೆಪಿ’ ಥೀಮ್‌ಸಾಂಗ್‌ ಶೋಭಾ ಕರಂದ್ಲಾಜೆ ಅವರ ಪರಿಕಲ್ಪನೆಯಡಿ ಹರ್ಷಭಟ್‌ ಎಂಬುವರು ರಚನೆ ಮಾಡಿ ಪುತ್ತೂರಿನ ಜಗದೀಶ್‌ ಎಂಬುವರು ಹಾಡಿದ್ದಾರೆ.

ಕರಪತ್ರದಲ್ಲೇನಿದೆ?
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್‌ ಅವಧಿಯಲ್ಲಿ ಮಾಡಲಾದ ಸಾಧನೆಗಳು. ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆ, ಸಾವಯವ ಕೃಷಿ ಮಿಷನ್‌ಗೆ 200 ಕೋಟಿ ರೂ. ಅನುದಾನ, 10 ಎಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌, 20 ಲಕ್ಷ ರೈತರಿಗೆ ಕಿಸಾನ್‌ಕಾರ್ಡ್‌, ವಿದ್ಯಾರ್ಥಿನಿಯರಿಗೆ ಬೈಸಿಕಲ್‌ ವಿತರಣೆ, ಭಾಗ್ಯಲಕ್ಷ್ಮಿ, ಮಡಿಲು ಯೋಜನೆ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಆರ್ಥಿಕ ನೆರವು. ಸಕಾಲ ಯೋಜನೆ ಜಾರಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉಜ್ವಲ ಯೋಜನೆ, ಜನ್‌ಧನ್‌, ಮುದ್ರಾ ಯೋಜನೆ, ಆದರ್ಶ ಗ್ರಾಮ, ಸ್ಮಾರ್ಟ್‌ ಸಿಟಿ, ಡಿಜಿಟಲ್‌ ಭಾರತ್‌, ಜಿಎಸ್‌ಟಿ ಜಾರಿ, ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯಾ ಸಮೃದಿಟಛಿ ಯೋಜನೆ ಜಾರಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ ದ ವೈಫ‌ಲ್ಯಗಳಲ್ಲಿ 2000 ರೈತರ ಆತ್ಮಹತ್ಯೆ, ಎಸಿಬಿ ದುರುಪಯೋಗ, ಡಿವೈಎಸ್‌ಪಿ ಗಣಪತಿ , ಡಿ.ಕೆ.ರವಿ, ಕಲ್ಲಪ್ಪ ಹಂಡಿಬಾಗ್‌, ಅನುರಾಗ್‌ ತಿವಾರಿ ಸಾವು ಪ್ರಕರಣ, ಸ್ಟೀಲ್‌ ಬ್ರಿಡ್ಜ್, ದುಬಾರಿ ವಾಚ್‌ ಪ್ರಕರಣ ಪ್ರಸ್ತಾಪಿಸಲಾಗಿದೆ.

ಮೂವರು ಮಾತ್ರ
ಪರಿವರ್ತನಾ ಯಾತ್ರೆಗೆ ಬಿಜೆಪಿ ಕರ್ನಾಟಕ ಘಟಕ ವತಿಯಿಂದ ಮುದ್ರಿಸಿರುವ ಕರಪತ್ರ ಹಾಗೂ ಪೋಸ್ಟರ್‌ನಲ್ಲಿ ಪ್ರಧಾನಿ
ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಭಾವಚಿತ್ರಗಳು ಮಾತ್ರ ಇವೆ. ಉಳಿದಂತೆ ಯಾವ ನಾಯಕರ ಚಿತ್ರಗಳೂ ಇಲ್ಲ. 

ನ. 10ರಂದು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡುತ್ತಿದೆ. ಆದರೆ, ನಾವು ನವೆಂಬರ್‌ 8ರಂದು ಕೊಡಗು ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ನವೆಂಬರ್‌ 9 ಕ್ಕೆ ನಿರ್ಗಮಿಸುತ್ತೇವೆ, ಪುತ್ತೂರಿನಲ್ಲಿ ವಾಸ್ತವ್ಯ ಮಾಡಿಕೊಳ್ಳುತ್ತೇವೆ ಎಂದರೂ ಜಿಲ್ಲಾಡಳಿತ ಒಪ್ಪುತ್ತಿಲ್ಲ. ನಮ್ಮ ಯಾತ್ರೆ ಹತ್ತಿಕ್ಕುವ ಕೆಲಸವೂ ನಡೆಯುತ್ತಿದೆ. ಆದರೆ, ನಾವು ಗಲಾಟೆ ಮಾಡಲು ಹೋಗುತ್ತಿಲ್ಲ. ಸರ್ಕಾರ ಈ ಬಗ್ಗೆ ವಿನಾಕಾರಣ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಯಾತ್ರೆಗೆ ಅನುಮತಿ ಕೊಡಬೇಕು .
–  ಶೋಭಾ ಕರಂದ್ಲಾಜೆ, ಸಂಸದೆ

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

Yatnal-Team

Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್‌ ಬಿಜೆಪಿ ವಕ್ಫ್ ಪ್ರವಾಸ

Congress-Session

Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್‌ ಪಣ

Negotiation: ಹೆಬ್ಬಾಳ್ಕರ್‌-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ

BYV

Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.