ಬಿಜೆಪಿ ಪ್ರಭಾರಿ, ಸಂಚಾಲಕರ ನೇಮಕ
Team Udayavani, Nov 22, 2018, 6:50 AM IST
ಬೆಂಗಳೂರು: ಲೋಕಸಭಾ ಚುನಾವಣೆಗೆ ಸಿದ್ಧತೆಯನ್ನು ಚುರುಕುಗೊಳಿಸಿರುವ ಬಿಜೆಪಿಯು ಪಕ್ಷ ಸಂಘಟನೆಗಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಪ್ರಭಾರಿಗಳು ಹಾಗೂ ಸಂಚಾಲಕರನ್ನು ನೇಮಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆ ಹಾಗೂ ಮತದಾರರನ್ನು ಸೆಳೆಯಲು ತಾಲೀಮಿಗೆ ವೇಗ ನೀಡಿರುವ ಬಿಜೆಪಿಯು ಪ್ರತಿ ಕ್ಷೇತ್ರಕ್ಕೆ ಪ್ರಭಾರಿಗಳು, ಸಂಚಾಲಕರನ್ನು ನೇಮಕ ಮಾಡಿದೆ.
ಈ ಪ್ರಭಾರಿಗಳು, ಸಂಚಾಲಕರು ಕ್ಷೇತ್ರ ಹಾಗೂ ರಾಜ್ಯ ಘಟಕದ ನಡುವೆ ಸಮನ್ವಯ ಕೊಂಡಿಯಂತೆ ಕಾರ್ಯ ನಿರ್ವಹಿಸಲಿದ್ದಾರೆ. ಪಕ್ಷ ಸಂಘಟನೆಯ ಸ್ಥಿತಿಗತಿ, ಸಂಘಟನೆ ಪ್ರಕ್ರಿಯೆಗಿರುವ ಸಮಸ್ಯೆ, ಸವಾಲುಗಳು, ಅದರ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಗಮನ ಹರಿಸಲಿದ್ದಾರೆ. ಜತೆಗೆ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯ ಲೆಕ್ಕಾಚಾರದ ಜತೆಗೆ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಕಾರ್ಯದಡಿ ನಿರಂತರವಾಗಿ ಸಭೆಗಳನ್ನು ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪದಾಧಿಕಾರಿಯೊಬ್ಬರು ತಿಳಿಸಿದರು.
ಸದ್ಯದಲ್ಲೇ ಸಭೆ
ಇದೇ 29ರಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಆ ನಂತರ ಲೋಕಸಭಾ ಕ್ಷೇತ್ರಗಳ ಪ್ರಭಾರಿ ಹಾಗೂ ಸಂಚಾಲಕರ ಸಭೆ ಇರಲಿದೆ. ಆ ಸಭೆಯಲ್ಲಿ ಪ್ರಭಾರಿಗಳು ಹಾಗೂ ಸಂಚಾಲಕರ ಜವಾಬ್ದಾರಿ, ಕಾರ್ಯ ನಿರ್ವಹಣೆ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹಿರಿಯ ನಾಯಕರು ನೀಡಲಿದ್ದಾರೆ. ಆ ನಂತರ ಎಲ್ಲರೂ ಆಯಾ ಕ್ಷೇತ್ರಗಳಲ್ಲಿ ಸಂಘಟನೆ, ಸಮನ್ವಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಸ್ಥಳೀಯರಲ್ಲದವರಿಗೆ ಜವಾಬ್ದಾರಿ
ಬಹುತೇಕ ಲೋಕಸಭಾ ಕ್ಷೇತ್ರಗಳಿಗೆ ಸ್ಥಳೀಯರಿಗೆ ಬದಲಾಗಿ ಹೊರಗಿನವರನ್ನು ಪ್ರಭಾರಿ, ಸಂಚಾಲಕರನ್ನಾಗಿ ನೇಮಿಸಲಾಗಿದ್ದು, ಕೆಲವೆಡೆಯಷ್ಟೇ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ. ಶಿಗ್ಗಾಂವ್ ಶಾಸಕ ಬಸವರಾಜ ಬೊಮ್ಮಾಯಿ ಅವರನ್ನು ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದ ಪ್ರಭಾರಿಯನ್ನಾಗಿ ನೇಮಿಸಲಾಗಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಪ್ರಭಾರಿಯನ್ನಾಗಿ ಸುಬ್ಬ ನರಸಿಂಹ ಅವರನ್ನು ನೇಮಿಸಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರಾದ ಮಾಜಿ ಶಾಸಕ ಎಸ್.ಮುನಿರಾಜು ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
ಸ್ಥಳೀಯರನ್ನೇ ಪ್ರಭಾರಿ, ಸಂಚಾಲಕರನ್ನಾಗಿ ಮಾಡಿದರೆ ಸಂಘಟನೆ ಪರಿಣಾಮಕಾರಿಯಾಗಿ ನಡೆಯದು. ಜತೆಗೆ ಅನಿವಾರ್ಯವಾಗಿ ಸ್ಥಳೀಯರೇ ಸ್ಪರ್ಧಿಸಬೇಕಾದ ಸಂದರ್ಭ ಬಂದರೆ ಪ್ರಭಾರಿ, ಸಂಚಾಲಕರಾಗಿದ್ದವರನ್ನು ಅಭ್ಯರ್ಥಿಯನ್ನಾಗಿ ಮಾಡುವುದು ಸೂಕ್ತವೆನಿಸದು. ಹಾಗಾಗಿ ಅಕ್ಕಪಕ್ಕದ ಕ್ಷೇತ್ರದವರು ಇಲ್ಲವೇ ಜಾತಿಬಲ, ಸಂಘಟನಾ ಸಾಮರ್ಥಯ ಆಧರಿಸಿ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಲೋಕಸಭಾ ಕ್ಷೇತ್ರ- ಪ್ರಭಾರಿಗಳು, ಸಂಚಾಲಕರ ವಿವರ ಕ್ರಮವಾಗಿ ಹೀಗಿದೆ.
ಮೈಸೂರು- ಕೊಡಗು- ಕೆ.ಎಸ್.ಈಶ್ವರಪ್ಪ, ಎನ್.ವಿ.ಫಣೀಶ್; ಚಾಮರಾಜನಗರ - ಎಲ್.ನಾಗೇಂದ್ರ, ಬಾಲಸುಬ್ರಹ್ಮಣ್ಯ; ಮಂಡ್ಯ- ಇ.ಅಶ್ವತ್ಥ ನಾರಾಯಣ, ಮಧು ಚಂದನ್; ಹಾಸನ- ಸಿ.ಟಿ.ರವಿ, ರೇಣುಕುಮಾರ್; ದಕ್ಷಿಣ ಕನ್ನಡ- ಸುನೀಲ್ ಕುಮಾರ್, ಗೋಪಾಲಕೃಷ್ಣ ಹೇರಳೆ; ಉಡುಪಿ- ಚಿಕ್ಕಮಗಳೂರು- ಅರಗ ಜ್ಞಾನೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ; ಶಿವಮೊಗ್ಗ- ವಿಶ್ವೇಶ್ವರ ಹೆಗಡೆ ಕಾಗೇರಿ, ಹರತಾಳು ಹಾಲಪ್ಪ; ಉತ್ತರ ಕನ್ನಡ- ಲಿಂಗರಾಜ್ ಪಾಟೀಲ, ವಿನೋದ್ ಪ್ರಭು; ಹಾವೇರಿ- ಬಸವರಾಜ ಬೊಮ್ಮಾಯಿ, ಸಿದ್ದರಾಜ್ ಕಲಕೋಟೆ; ಧಾರವಾಡ- ಗೋವಿಂದ ಕಾರಜೋಳ, ಡಾ.ಮಾ.ನಾಗರಾಜ್; ಬೆಳಗಾವಿ- ಮಹಾಂತೇಶ ಕವಟಗಿಮಠ, ಈರಣ್ಣ ಕಡಾಡಿ; ಚಿಕ್ಕೋಡಿ- ಸಂಜಯ್ ಪಾಟೀಲ್, ಶಶಿಕಾಂತ ನಾಯಕ್; ಬಾಗಲಕೋಟೆ- ಸಿ.ಸಿ.ಪಾಟೀಲ್, ವೀರಣ್ಣ ಚರಂತಿಮಠ; ವಿಜಯಪುರ- ಲಕ್ಷ್ಮಣ ಸವದಿ, ಅರುಣ್ ಶಹಾಪುರ.
ಬೀದರ್- ಅಮರನಾಥ ಪಾಟೀಲ್, ಸುಭಾಷ್ ಕಲ್ಲೂರ; ಕಲಬುರಗಿ- ಎನ್.ರವಿಕುಮಾರ್, ಮಾಲೀಕಯ್ಯ ಗುತ್ತೇದಾರ್; ರಾಯಚೂರು- ಹಾಲಪ್ಪ ಆಚಾರ್, ರಮಾನಂದ ಯಾದವ್; ಕೊಪ್ಪಳ- ಬಿ.ಶ್ರೀರಾಮುಲು, ಅಪ್ಪಣ್ಣ ಪದಕಿ; ಬಳ್ಳಾರಿ- ಜಗದೀಶ ಶೆಟ್ಟರ್, ಮೃತ್ಯುಂಜಯ ಜಿನಗಾ; ದಾವಣಗೆರೆ- ಆಯನೂರು ಮಂಜುನಾಥ, ಜೀವನಮೂರ್ತಿ; ಚಿತ್ರದುರ್ಗ- ವೈ.ಎ.ನಾರಾಯಣಸ್ವಾಮಿ, ಟಿ.ಜಿ.ನರೇಂದ್ರ ನಾಥ್; ತುಮಕೂರು- ಅರವಿಂದ ಲಿಂಬಾವಳಿ, ಬೆಟ್ಟಸ್ವಾಮಿ; ಬೆಂಗಳೂರು ಗ್ರಾಮಾಂತರ- ಅಶ್ವತ್ಥ ನಾರಾಯಣ, ತುಳಸಿ ಮುನಿರಾಜುಗೌಡ; ಚಿಕ್ಕಬಳ್ಳಾಪುರ- ವಿ.ಸೋಮಣ್ಣ, ಎಸ್.ಆರ್.ವಿಶ್ವನಾಥ್; ಕೋಲಾರ- ಕಟ್ಟಾ ಸುಬ್ರಹ್ಮಣ್ಯನಾಯ್ಡು, ವೈ. ಸಂಪಂಗಿ; ಬೆಂಗಳೂರು ದಕ್ಷಿಣ-ಸುಬ್ಬನರಸಿಂಹ, ಆರ್.ಅಶೋಕ್; ಬೆಂಗಳೂರು ಕೇಂದ್ರ- ಡಾ.ಅಶ್ವತ್ಥ ನಾರಾಯಣ, ಸಚ್ಚಿದಾನಂದಮೂರ್ತಿ; ಬೆಂಗಳೂರು ಉತ್ತರ- ಬಿ.ಎಚ್.ಕೃಷ್ಣಾರೆಡ್ಡಿ, ಎಸ್.ಮುನಿರಾಜು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ
H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್: ದೇವೇಗೌಡ
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.