ಬಿಜೆಪಿಯದ್ದು ಲಾಜಿಕ್ ಇಲ್ಲದ, ರಾಜಕೀಯ ಪ್ರೇರಿತ ಕರ್ಫ್ಯೂ: ಖಾದರ್
ದೇಹದಲ್ಲಿ ಲಾಕ್ ಡೌನ್, ಕರ್ಫ್ಯೂ ಮಾಡಬೇಕೇ ಹೊರತು ಹೊರಗಡೆ ಅಲ್ಲ
Team Udayavani, Jan 7, 2022, 6:51 PM IST
ಬೆಂಗಳೂರು : ಬಿಜೆಪಿಯದ್ದು ಲಾಜಿಕ್ ಇಲ್ಲದ, ರಾಜಕೀಯ ಪ್ರೇರಿತ ಕರ್ಫ್ಯೂ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಮಿಕ್ರಾನ್ ಸಂಬಂಧಿಸಿದಂತೆ ಸರ್ಕಾರ ಸದುದ್ದೇಶದಿಂದ ಕೈಗೊಂಡ ನಿರ್ಧಾರಕ್ಕೆ ಎಲ್ಲರೂ ಬೆಂಬಲಿಸುತ್ತಾರೆ. ಆದರೆ ದುರುದ್ದೇಶದ ತೀರ್ಮಾನಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಸರ್ಕಾರ ಈಗ ತೆಗೆದುಕೊಂಡಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಜನವಿರೋಧಿ ತೀರ್ಮಾನ ಎಂದು ಆರೋಪಿಸಿದರು.
ಕೋವಿಡ್ ಸಂಬಂಧಿಸಿದಂತೆ ಸರ್ಕಾರ ವಿಜ್ಞಾನದ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೇ ಹೊರತು, ರಾಜಕೀಯ ಮಾಡಬಾರದು. ಯಾವುದೇ ಲಾಕ್ ಡೌನ್ ಅಥವಾ ಕರ್ಫ್ಯೂ ತೀರ್ಮಾನ ತೆಗೆದುಕೊಳ್ಳುವಾಗ ಎಷ್ಟು ಪಾಸಿಟಿವ್ ಪ್ರಕರಣ ಬರುತ್ತದೆ, ಅದರಲ್ಲಿ ಶೇ.ರಷ್ಟು ಜನ ಆಕ್ಸಿಜನ್ ಬೆಡ್ ಅಥವಾ ಐಸಿಯುಗೆ ದಾಖಲಾದರೆ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಮಾನದಂಡವಿದೆ.
ಲಾಕ್ ಡೌನ್, ಕರ್ಫ್ಯೂನಿಂದ ಒಮಿಕ್ರಾನ್ ನಿಯಂತ್ರಣ ಆಗುವುದಿಲ್ಲ, ಅದು ಕೇವಲ ಪೂರ್ವಸಿದ್ಧತೆಗೆ ಸಮಯ ಕಲ್ಪಿಸುತ್ತದೆ. ಈಗ ಪಾಸಿಟಿವ್ ದರ ಶೇ.3ರಷ್ಟಿದೆ. ಇದರಲ್ಲಿ ಆಕ್ಸಿಜನ್ ಹಾಗೂ ಐಸಿಯು ಬೆಡ್ ನಲ್ಲಿ ಹೆಚ್ಚಿನ ಜನ ಇಲ್ಲ. ಇಂದು 95%ರಷ್ಟು ಜನ ಪಾಸಿಟಿವ್ ಬಂದರೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬರುವ ಅಗತ್ಯವೇ ಇಲ್ಲವಾಗಿದೆ ಎಂದರು.
ಈ ಸಮಯದಲ್ಲಿ ಲಾಕ್ ಡೌನ್, ಕರ್ಫ್ಯೂ ತಂದು ಜನರ ಮೇಲೆ ಕಷ್ಟ ಹೇರುವ ಸರ್ಕಾರ ದ್ದೇಶ ಎಂತಹದ್ದು? ಎಂದು ಜನರಿಗೆ ತಿಳಿಸಬೇಕು. ನಾನು ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗುವುದಾದರೆ, ನೀವು ಈ ನಿರ್ಬಂಧ ಹಾಕುವ ಉದ್ದೇಶವೇನು? ಇದರಿಂದಾಗುವಆರ್ಥಿಕ ಹಾಗೂ ಸಾಮಾಜಿಕ ದುಷ್ಪರಿಣಾಮಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ನಮ್ಮ ದೇಹದಲ್ಲಿ ಲಾಕ್ ಡೌನ್, ಕರ್ಫ್ಯೂ ಮಾಡಬೇಕೇ ಹೊರತು ಹೊರಗಡೆ ಅಲ್ಲ. ಇದಕ್ಕಾಗಿ ಲಸಿಕೆ ಹೆಚ್ಚಾಗಿ ನೀಡಿ, ಬೂಸ್ಟರ್ ಡೋಸ್ ನೀಡುವ ಬಗ್ಗೆ ಯೋಚಿಸಿ, 18 ವರ್ಷ ಮೇಲ್ಪಟ್ಟವರಿಗೆ ಮೂರನೇ ಡೋಸ್ ಪಡೆಯಲು ಅನುಮತಿ ನೀಡಿ, ದೇಶದಲ್ಲಿ ದುಡಿಯುವ ಶಕ್ತಿ 18 ವರ್ಷ ಮೇಲ್ಪಟ್ಟವರು. ಅವರಿಗೆ ಯಾಕೆ ಲಸಿಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.