ಹಿಂದುಳಿದ ವರ್ಗ ಸೆಳೆಯಲು ಬಿಜೆಪಿ ಕೃಷ್ಣಂರಾಜುಗೆ ಬಿಜೆಪಿ ಮೊರೆ
Team Udayavani, Apr 13, 2018, 12:08 PM IST
ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಮತಬ್ಯಾಂಕ್ ಬಿಜೆಪಿಯತ್ತ ಸೆಳೆಯುವ ದೃಷ್ಟಿಯಿಂದ ಬಿಜೆಪಿ ನೆರೆಯ ಆಂಧ್ರಪ್ರದೇಶದ ರೆಬಲ್‌ಸ್ಟಾರ್ ಖ್ಯಾತಿಯ ನಟ ಕೃಷ್ಣಂರಾಜು ಅವರಿಗೆ ಮೊರೆ ಹೋಗಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿರುವ ಕೃಷ್ಣಂರಾಜು ರಾಜುಕ್ಷತ್ರಿಯ ಸಂಘದ ಅಧ್ಯಕ್ಷ ಎಲ್.ಕೆ.ರಾಜು, ಉದ್ಯಮಿ ಶ್ಯಾಮರಾಜು ಸೇರಿದಂತೆ ಸಮುದಾಯದ ಮುಖಂಡರ ಜತೆ ಸತತ ಸಮಾಲೋಚನೆ ನಡೆಸಿದ್ದಾರೆ.
ನಟ ಪ್ರಭಾಸ್ ಅವರನ್ನು ರಾಜಕೀಯಕ್ಕೆ ಕರೆ ತಂದರೆ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ರಾಜು ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲು ಹಾಗೂ ಸಮುದಾಯದವನ್ನು ಎಲ್ಲರೂ ಗುರುತಿಸಲು ಸಹಕಾರಿಯಾಗಲಿದೆ ಎಂದು ರಾಜ್ಯದ ಮುಖಂಡರು ಕೃಷ್ಣಂರಾಜು ಅವರ ಬಳಿ ಪ್ರಸ್ತಾಪವನ್ನೂ ಇಟ್ಟಿದ್ದು ವಿಶೇಷ. ಈ ಸಂದರ್ಭದಲ್ಲಿ ಕೃಷ್ಣಂರಾಜು ಜತೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನ.
* ಕರ್ನಾಟಕದಲ್ಲಿ ನಿಮ್ಮ ಪ್ರಕಾರ ಬಿಜೆಪಿ ಪರಿಸ್ಥಿತಿ ಹೇಗಿದೆ?
ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದರಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿದೆ.
* ಆಂಧ್ರಪ್ರದೇಶಕ್ಕೆ ವಿಶೆಷ ಪ್ಯಾಕೇಜ್ ನೀಡಿಲ್ಲ. ತೆಲುಗು ಭಾಷಿಕರು ಬಿಜೆಪಿಗೆ ಮತ ಹಾಕಬಾರದು ಎಂಬ ಅಭಿಯಾನ ನಡೆಯುತ್ತಿದೆಯಲ್ಲಾ?|
ಅದೆಲ್ಲಾ ಇಲ್ಲಿ ನಡೆಯುವುದಿಲ್ಲ. ಬಿಜೆಪಿ ಆಂಧ್ರಪ್ರದೇಶಕ್ಕೆ ಮೋಸ ಮಾಡಿಲ್ಲ. ವಾಗಾœನ ಮಾಡಿದ್ದನ್ನು ಈಡೇರಿಸಿದೆ, ಇನ್ನೂ ಕೊಡಲಿದೆ.
* ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾತಿಗೆ ತಪ್ಪಿದ ಬಿಜೆಪಿ ಎಂದು ಎನ್‌ಡಿಎ ಮೈತ್ರಿಕೂಟದಿಂದಲೇ ಹೊರ ಹೋಗಿದ್ದಾರಲ್ಲಾ?
ಅದು ರಾಜಕೀಯ ಕಾರಣಗಳಿಗೆ. ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಆದರೆ, ನರೇಂದ್ರಮೋದಿಯಿಂದ ನಮಗೆ ಅನ್ಯಾಯವಾಗಿಲ್ಲ
* ಈ ಚುನಾವಣೆಯಲ್ಲಿ ನಿಮ್ಮ ರಾಜು ಸಮುದಾಯಕ್ಕೆ ಬಿಜೆಪಿಯಿಂದ ಎಷ್ಟು ಟಿಕೆಟ್ ಕೊಡಿಸುವಿರಿ?
ಯಾವ್ಯಾವ ಕ್ಷೇತ್ರದಲ್ಲಿ ರಾಜು ಸಮುದಾಯದ ನಾಯಕರಿಗೆ ಗೆಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ಟಿಕೆಟ್ ದೊರೆಯಲಿದೆ.
* ನೀವು ಆ ಬಗ್ಗೆ ಮಾತನಾಡಿದ್ದೀರಾ?
ಹೌದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಬಳಿ ಮಾತನಾಡಿದ್ದೇನೆ.
* ನಿಮ್ಮನ್ನು ಸಮುದಾಯದ ಸಂಘಟಿಸಲು ಕೇಂದ್ರದ ನಾಯಕರು ಕರ್ನಾಟಕಕ್ಕೆ ಕಳುಹಿಸಿದ್ದಾರಾ?
ಹಾಗೇನಿಲ್ಲ. ಪಕ್ಷದ ಜವಾಬ್ದಾರಿಯುತ ಮುಖಂಡನಾಗಿ ಪಕ್ಷದ ಪರ ಕೆಲಸ ಮಾಡಲು ಬಂದಿದ್ದೇನೆ.
* ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆಂಧ್ರ-ತೆಲಂಗಾಣದಲ್ಲಿ ಯಾವುದು ಪ್ರಮುಖ ವಿಷಯ?
ಟಿಡಿಪಿ-ಬಿಜೆಪಿ ಮರು ಮೈತ್ರಿ ಸಾಧ್ಯವಾ? ಯಾವುದೇ ಚುನಾವಣೆಯಲ್ಲೂ ಅಭಿವೃದ್ಧಿ ಪ್ರಮುಖ ವಿಷಯ. ಜತೆಗೂಡುವುದು ಬಿಡುವುದು ಅವರವರಿಗೆ ಬಿಟ್ಟದ್ದು.
* ನಿಮ್ಮ ಸಹೋದರ ಪುತ್ರ ನಟ ಪ್ರಭಾಸ್‌ನನ್ನು ಸಮುದಾಯದ ಪರವಾಗಿ ರಾಜಕೀಯಕ್ಕೆ ಕರೆತನ್ನಿ ಎಂಬ ಪ್ರಸ್ತಾಪವಿದೆಯಂತಲ್ಲಾ?
ರಾಜಕೀಯಕ್ಕೆ ಬರುವುದು ಬಿಡುವುದು ಆತನ ಇಚ್ಛೆ.
ಆಂಧ್ರದ ರೆಬೆಲ್ ಸ್ಟಾರ್: ಉಪ್ಪಲಪಾಟಿ ಚಿನ್ನವೆಂಕಟ ಕೃಷ್ಣಂರಾಜು ಅವಿಭಜಿತ ಆಂಧ್ರಪ್ರದೇಶದಲ್ಲಿ “ರೆಬಲ್‌ಸ್ಟಾರ್’ ಎಂದೇ ಖ್ಯಾತಿ. 183 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು “ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರ ದೊಡ್ಡಪ್ಪ. ಪ್ರಭಾಸ್ ಇವರ ಗರಡಿಯಲ್ಲೇ ಪಳಗಿ ನಟರಾದವರು. 1998 ರಲ್ಲಿ ಕಾಕಿನಾಡಿ, 1999 ರಲ್ಲಿ ನರಸಾಪುರ ಲೋಕಸಭೆ ಕ್ಷೇತ್ರದಿಂದ ಗೆದ್ದಿದ್ದ ಕೃಷ್ಣಂರಾಜು, ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು.
* ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.