ಕರ್ನಾಟಕದಲ್ಲಿ ಕಾಡಿದ್ದ ಕಪ್ಪು ದಂಧೆ
Team Udayavani, Nov 9, 2017, 10:29 AM IST
ನೋಟು ಅಮಾನ್ಯಗೊಂಡ ಬೆನ್ನಲ್ಲೇ ಸಾವಿರಾರು ಕೋಟಿ ಕಪ್ಪುಹಣ ಹೊಂದಿದ್ದ ಕಪ್ಪುಕುಳಗಳ “ಬ್ಲ್ಯಾಕ್ ಅಂಡ್ ವೈಟ್
ದಂಧೆ’ ರಾಜಧಾನಿಯಲ್ಲೂ ಎಗ್ಗಿಲ್ಲದೆ ಗರಿಗೆದರಿಕೊಂಡಿತು. ಮೂರ್‍ನಾಲ್ಕು ದಿನಗಳ ಬಳಿಕ ಕಪ್ಪುಹಣ ಹೊಂದಿದ ಭಾರೀ
ಕುಳಗಳು ನೇರವಾಗಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣದ ಕಪ್ಪು-ಬಿಳಿ ಆಟ ನಡೆಸಲು ಶುರು
ಮಾಡಿದರು. ಇದ್ದಕ್ಕಿದ್ದಂತೆ ನೂರಾರು ಮಂದಿ ಕಮಿಷನ್ ದಲ್ಲಾಳಿಗಳು ಹುಟ್ಟಿಕೊಂಡರು. ಈ ಕಾಳದಂಧೆಯ
ಜಾಡುಹಿಡಿದು ಸಿಬಿಐ, ಜಾರಿನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಬೇಟೆ ಆರಂಭಿಸಿ ಆರ್‌ಬಿಐ ಸಿಬ್ಬಂದಿ, ಖಾಸಗಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿ ಹಾಗೂ ದಂಧೆಯಲ್ಲಿ ಭಾಗಿಯಾಗಿದ್ದ ಹಲವು ಮಂದಿಗೆ ಬಲೆ ಬೀಸಿ ಕಾನೂನು ಕ್ರಮಜರುಗಿಸಿದವು.
ಈ ಬೆನ್ನಲ್ಲೇ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿದ್ದ
ಇದುವರೆಗೂ 233 ಮಂದಿಯನ್ನು ಹೆಡೆಮುರಿಕಟ್ಟಿ, 55 ಪ್ರಕರಣಗಳನ್ನು ದಾಖಲಿಸಿಕೊಂಡು 65 ಕೋಟಿ ರೂ
ಅಮಾನ್ಯಗೊಂಡ ರೂಪದಲ್ಲಿರುವ ಹಣ ಹಾಗೂ ಹೊಸನೋಟುಗಳಲ್ಲಿರುವ 82 ಲಕ್ಷ ರೂ.ಗಳಿಗೂ ಅಧಿಕ
ಮೊತ್ತವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಪ್ಪು ಹಣ¨ ಭೂತ ದಹನ
ಕೇಂದ್ರ ಸರ್ಕಾರ 1000 ಮತ್ತು 500 ರೂ.ನೋಟುಗಳನ್ನು ಅಮಾನ್ಯಗೊಳಿಸಿ ಹೊರಡಿಸಿದ ನಿರ್ಧಾರಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ನಗರದಲ್ಲಿ ಕಪ್ಪು ಹಣದ ಭೂತ ದಹನ ಮತ್ತು ಸಿಹಿ ಹಂಚಿಕೆ ಮಾಡಲಾಯಿತು. ಮಲ್ಲೇಶ್ವರದ ಕುವೆಂಪು ವೃತ್ತದಲ್ಲಿ ನೋಟು ಅಮಾನ್ಯ ಬೆಂಬಲಿಸಿ ಕಪ್ಪು ಹಣ ವಿರೋಧಿ ದಿನ ಆಚರಿಸಿದರು. ಅಲ್ಲದೆ, ಕಪ್ಪು ಹಣದ ಭೂತದಹನ ಮಾಡಿದರು. ಜತೆಗೆ ನೋಟು ಅಮಾನ್ಯ ಬೆಂಬಲಿಸಿ ಬೃಹತ್ ಫ್ಲೆಕ್ಸ್ ಮೇಲೆ ಸಾರ್ವಜನಿಕ ರಿಂದ ಸಹಿ ಸಂಗ್ರಹ ಮಾಡಿದರು. ಈ ವೇಳೆ ನೋಟು ಅಮಾನ್ಯದ ಅನುಕೂಲಗಳ ಬಗ್ಗೆ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಲಾಯಿತು. ಇನ್ನೊಂದೆಡೆ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ನೇತೃತ್ವದಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರು ಮಂತ್ರಿಮಾಲ್ ಮೆಟ್ರೋ ನಿಲ್ದಾಣ ದಿಂದ ಮೆಜೆಸ್ಟಿಕ್ ನಿಲ್ದಾಣದವರೆಗೆ ಪ್ರಯಾಣಿಕರಿಗೆ ಸಿಹಿ ಹಂಚಿದರು. ನೋಟು ಅಮಾನ್ಯ ನಿರ್ಧಾರದಿಂದ ಆಗಿರುವ ಅನುಕೂಲಗಳ ಬಗ್ಗೆ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.