Blcakmail: ವಿಡಿಯೋ ಇಟ್ಟು ಕೊಂಡು ಬ್ಲಾಕ್‌ಮೇಲ್ ಆಟೋ ಚಾಲಕನಿಗೆ ಇರಿತ: ಆರೋಪಿ ಸೆರೆ
Team Udayavani, Oct 2, 2023, 10:40 AM IST
ಬೆಂಗಳೂರು: ಪತ್ನಿಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡು ತ್ತಿದ್ದ ಆಟೋ ಚಾಲಕನಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಸಮೀಪದ ಚೊಕ್ಕನ ಹಳ್ಳಿ ನಿವಾಸಿ ನಾಗರಾಜ್(37 )ಬಂಧಿತ.
ಘಟನೆಯಲ್ಲಿ ಕಮ್ಮನಹಳ್ಳಿ ನಿವಾಸಿ, ಆಟೋ ಚಾಲಕ ಆರೋಗ್ಯ ದಾಸ್(27) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೆಲ್ಡಿಂಗ್ ಕೆಲಸ ಮಾಡುವ ನಾಗ ರಾಜ್, ಈ ಹಿಂದೆ ಕುಟುಂಬದ ಜತೆ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಆಗ ಪಕ್ಕದ ಮನೆ ನಿವಾಸಿ ಆರೋಗ್ಯದಾಸ್ ಪರಿಚಯವಾಗಿದ್ದು, ಈ ವೇಳೆ ಆರೋಗ್ಯದಾಸ್, ನಾಗರಾಜ್ ಪತ್ನಿ ಜತೆ ಆತ್ಮೀಯತೆ ಹೊಂದಿದ್ದ. ಅಲ್ಲದೆ, ಆಕೆ ಜತೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಆರೋಗ್ಯದಾಸ್ ಆಕೆಗೆ ಗೊತ್ತಾಗದ ರೀತಿಯಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಿಕೊಂಡಿದ್ದ. ಆದರೆ, ಆರೋಗ್ಯದಾಸ್ ಇತ್ತೀಚೆಗೆ ಮಹಿಳೆಗೆ ಕರೆ ಮಾಡಿ ನನಗೆ ಹಣ ಕೊಡು ಇಲ್ಲದಿದ್ದರೆ ನಿನ್ನ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅದರಿಂದ ಆತಂಕಗೊಂಡ ಮಹಿಳೆ ಈ ವಿಚಾರವನ್ನು ತನ್ನ ಪತಿ ನಾಗರಾಜ್ ತಿಳಿಸಿದ್ದಾರೆ.
ಆತನಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿದ ನಾಗರಾಜ್, ಪತ್ನಿ ಮೂಲಕ ಆರೋಗ್ಯದಾಸ್‌ಗೆ ಕರೆ ಮಾಡಿಸಿ ಮನೆಗೆ ಬರುವಂತೆ ಹೇಳಿಸಿದ್ದಾನೆ. ಅದರಂತೆ ಆರೋಗ್ಯದಾಸ್ ಸೆ.30ರ ಮಧ್ಯಾಹ್ನ 2 ಗಂಟೆಗೆ ಕಮ್ಮನಹಳ್ಳಿಯಿಂದ ಚೊಕ್ಕನ ಹಳ್ಳಿಗೆ ಬಂದಿದ್ದಾನೆ.ಮಹಿಳೆ ಮನೆ ಒಳಗೆ ಆರೋಗ್ಯ ದಾಸ್ ಹೋಗುತ್ತಿದ್ದಂತೆ ನಾಗರಾಜ್, ನನ್ನ ಪತ್ನಿಯ ಫೋಟೋ ಗಳನ್ನು ತೆಗೆದುಕೊಂಡು ಮರ್ಯಾದೆ ತೆಗೆದಿದ್ದೀಯಾ ಎಂದು ಆತನನ್ನು ಹಿಡಿದು ಕೊಳ್ಳಲು ಯತ್ನಿಸಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋದಾಗ ನಾಗರಾಜ್, ಚಾಕುವಿನಿಂದ ಆರೋಗ್ಯ ದಾಸ್ ಎದೆ, ಕಿವಿಗಳಿಗೆ ಚುಚ್ಚಿ,ಮುಂಗೈಗಳಿಗೆ ಕೊಯ್ದುಗಾಯ ಮಾಡಿದ್ದಾನೆ.
ಆರೋಗ್ಯದಾಸ್ ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನು ನಾಗರಾಜ್ ಕೂಡ ಪತ್ನಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಗ್ಯದಾಸ್ ವಿರುದ್ಧ ಪ್ರತಿದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.