ಬಿಎಂಟಿಸಿ: ಸಿಇಟಿ ಮಾದರಿಗೆ ಚಿಂತನೆ

ಡ್ಯೂಟಿ ರೋಟಾ ಸಿಸ್ಟ್‌ಂ ಅನುಷ್ಠಾನಕ್ಕೆ ಒಲವು | ಆರು ತಿಂಗಳಿಗೊಮ್ಮೆ ನವೀಕರಣ ವ್ಯವಸ್ಥೆ

Team Udayavani, Mar 10, 2021, 1:02 PM IST

ಬಿಎಂಟಿಸಿ: ಸಿಇಟಿ ಮಾದರಿಗೆ ಚಿಂತನೆ

ಬೆಂಗಳೂರು: ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ “ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ’ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮುಂದಾಗಿದ್ದು, ಈ ಸಂಬಂಧ “ಸಿಇಟಿ ಮಾದರಿ’ಯಲ್ಲಿ ಕರ್ತವ್ಯ ನಿಯೋಜನಾ ಪದ್ಧತಿ (ಡ್ಯೂಟಿ ರೋಟಾ ಸಿಸ್ಟ್‌ಂ)ಅನುಷ್ಠಾನಗೊಳಿಸುತ್ತಿದೆ. ನೂತನ ವ್ಯವಸ್ಥೆಯು ಮಾ. 15ರಿಂದ ಜಾರಿಗೆಬರುವ ಸಾಧ್ಯತೆ ಇದೆ. ಆದರೆ, ಆರಂಭದಲ್ಲೇ ಸ್ವತಃ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗಿದೆ.

ಹೊಸ ವ್ಯವಸ್ಥೆಗಾಗಿ ಎಲ್ಲ ಬಿಎಂಟಿಸಿ ಘಟಕಗಳಲ್ಲಿ ಈಗಾಗಲೇ ಸಿದ್ಧತೆಗಳು ನಡೆದಿದ್ದು, ಮಹಿಳೆಯರಿಗೆ ಮೊದಲ ಆದ್ಯತೆ ಮತ್ತು ಜೇಷ್ಠತೆ ಆಧಾರದ ಮೇಲೆ ಈ ಕರ್ತವ್ಯ ನಿಯೋಜನೆ ಪದ್ಧತಿ ಪರಿಚಯಿಸ ಲಾಗುತ್ತಿದೆ. ಈ ವ್ಯವಸ್ಥೆ ಅನುಷ್ಠಾನಕ್ಕಾಗಿ ಆಯಾ ವಲಯದ ವಿಭಾಗೀಯ ನಿಯಂತ್ರಣಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಕೌನ್ಸೆಲಿಂಗ್‌ ಸಮಿತಿ ರಚಿಸಲಾಗಿದೆ. ವಿಭಾಗೀಯ ಸಂಚಾರ ಅಧಿಕಾರಿ ಅಥವಾ ತಾಂತ್ರಿಕ ಶಿಲ್ಪಿ, ಘಟಕ ವ್ಯವಸ್ಥಾಪಕರು, ಸಿಬ್ಬಂದಿ ಮೇಲ್ವಿಚಾರಕ ಮತ್ತು ಸಂಚಾರ ಮೇಲ್ವಿಚಾರಕರನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿರುತ್ತದೆ.

ವೋಲ್ವೋ ಬಸ್‌ ಚಾಲನಾ ಸಿಬ್ಬಂದಿ ಹಾಗೂ ಡಿಪೋಗಳಲ್ಲಿ ಇರುವ ಹೆಚ್ಚುವರಿ ಚಾಲಕರು (ಡಿಪೋ ಸ್ಪೇರ್‌) ಸಹ ಡ್ನೂಟಿ ರೋಟಾ ವ್ಯಾಪ್ತಿಗೆ ಒಳಪಡುತ್ತಿದ್ದು, ಸೇವಾ ಹಿರಿತನದ ಆಧಾರದಲ್ಲೇ ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಪ್ರತಿ ಪಾಳಿಗೆ ಒಂದು ವಾಹನವನ್ನು ನಿಗದಿಪಡಿಸಲಾಗುತ್ತದೆ. ಸಿಬ್ಬಂದಿ ಹಿರಿತನದ ಜತೆಗೆ ಪಾಳಿ, ವಾಹನ, ವಾರದ ರಜೆಯ ಆಧಾರ ಮೇಲೆ ಅನುಸೂಚಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತಿದೆ. ಆಯ್ಕೆ ಪ್ರಕ್ರಿಯೆ ನಿರ್ವಹಿಸುವಾಗ ಪಾರದರ್ಶಕತೆ ಕಾಪಾಡಿಕೊಳ್ಳುತ್ತಿದ್ದು, ಮಾನವ ಹಸ್ತಕ್ಷೇಪ ಇರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂಬಂಧ ನಮೂನೆ-5ರ ಅನ್ವಯ ಅನುಸೂಚಿಗಳನ್ನು ಪಾಳಿವಾರು ಪ್ರತ್ಯೇಕಿಸಿ, ಆಡಳಿತ ಇಲಾಖೆಯಿಂದ ಚಾಲನಾ ಸಿಬ್ಬಂದಿಯ ಸೇವಾ ಹಿರಿತನದ ಪಟ್ಟಿಯನ್ನು ತರಿಸಿಕೊಳ್ಳಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಕರ್ತವ್ಯ ನಿಯೋಜನೆ ಹಾಗೂ ರಜೆ ಮಂಜೂರಾತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ. ಹೊಸ ವ್ಯವಸ್ಥೆ ಜಾರಿಗಾಗಿ ಈಗಾಗಲೇ ಹಲವು ಘಟಕಗಳಲ್ಲಿ ಕೌನ್ಸೆಲಿಂಗ್‌ ಕೂಡ ಆರಂಭವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ (ಜನವರಿ-ಜುಲೈ) ಡ್ಯೂಟಿ ರೋಟಾ ಪದ್ಧತಿಯನ್ನು ನವೀಕರಿಸಲಾಗುತ್ತದೆ. ಮಾನದಂಡಗಳ ಉಲ್ಲಂಘನೆ ಅಥವಾ ನಿರ್ಲಕ್ಷ್ಯತನ ಕಂಡುಬಂದರೆ, ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸುವುದಾಗಿ ಬಿಎಂಟಿಸಿ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅನುಕೂಲವೇ ಹೆಚ್ಚು: ಶೇ. 30ರಷ್ಟು ಸಿಬ್ಬಂದಿ ತುಸು ಅನನುಕೂಲವಾದರೂ, ಪಾರದರ್ಶಕ ವ್ಯವಸ್ಥೆ ಇದಾಗುವುದರಿಂದ ಬಹುತೇಕರಿಗೆ ಅನುಕೂಲವೇ ಆಗಲಿದೆ. ಹಾಗಾಗಿ, ಜಾರಿಗೊಳಿಸುವುದು ಸೂಕ್ತ. ಈ ಅನನುಕೂಲಗಳು ತಾತ್ಕಾಲಿಕ ಮಾತ್ರ. ಸಿಬ್ಬಂದಿ ಹಿತದೃಷ್ಟಿಯಿಂದ ರೋಟಾ ಪದ್ಧತಿ ಅತ್ಯಗತ್ಯ. ಅಷ್ಟಕ್ಕೂ ಕೆಎಸ್‌ಆರ್‌ಟಿಸಿಯಲ್ಲಿ ಹಲವು ವರ್ಷಗಳ ಹಿಂದೆಯೇ ಇದನ್ನು ಜಾರಿಗೊಳಿಸಿದ್ದು, ಅಲ್ಲಿ ಕಿರುಕುಳ ಬಹುತೇಕ ತಗ್ಗಿದೆ ಎಂಬ ಪ್ರತಿಪಾದನೆ ಸಾರಿಗೆ ನೌಕರರದ್ದಾಗಿದೆ.

ಬಿಎಂಟಿಸಿ ನೌಕರರ ಸಿಬ್ಬಂದಿಯಲ್ಲೇ ಅಪಸ್ವರ! :

ಕರ್ತವ್ಯ ನಿಯೋಜನೆಯಲ್ಲಿ ಕಿರುಕುಳ ತಪ್ಪಿಸಿ, ಪಾರದರ್ಶಕತೆ ತರಬೇಕು ಎನ್ನುವುದು ಸಾರಿಗೆ ನೌಕರರ ಒಂಬತ್ತು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಆದರೆ, ಇದಕ್ಕಾಗಿ ಬಿಎಂಟಿಸಿ ಪರಿಚಯಿಸುತ್ತಿರುವ ಡ್ನೂಟಿ ರೋಟಾ ವ್ಯವಸ್ಥೆಗೆ ಸ್ವತಃ ಅದೇ ಸಾರಿಗೆ ನೌಕರರಿಂದ ಅಪಸ್ವರ ಹಾಗೂ ಆಕ್ಷೇಪಗಳು ಕೇಳಿಬರುತ್ತಿವೆ!

ಸಾವಿರಾರು ನೌಕರರು ಒಂದೇ ಮಾರ್ಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರು ತ್ತಾರೆ. ಸೇವೆಯಲ್ಲಿ ಅಥವಾ ಪ್ರಯಾಣಿಕರಿಂದ ಒಂದೇ ಒಂದು ದೂರು ಕೇಳಿಬಂದಿಲ್ಲ. ಇನ್ನು ಕೆಲವು ಚಾಲಕರಿಗೆ ಬಸ್‌ “ಅಡ್ಜಸ್ಟ್‌’ ಆಗಿರುತ್ತದೆ. ಉತ್ತಮ ನಿರ್ವಹಣೆ ಮಾಡಿರುತ್ತಾರೆ. ಅದೇ ರೀತಿ ಹಲವರು ಆಯಾ ಪಾಳಿಗೆ ವಿಶೇಷವಾಗಿ ರಾತ್ರಿ ಪಾಳಿಗೆ ಹೊಂದಿಕೊಂಡಿರುತ್ತಾರೆ. ಉದಾಹರಣೆಗೆ ರಾತ್ರಿ ಪಾಳಿ ಮುಗಿಸಿಕೊಂಡು ಹತ್ತಿರದ ಸಂಬಂಧಿಕರ ಮನೆ ಅಥವಾ ಸ್ನೇಹಿತರ ಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಈಗ ಡ್ನೂಟಿ ರೋಟಾ ವ್ಯವಸ್ಥೆಯಿಂದ ಅದೆಲ್ಲದರಲ್ಲೂ ಏರುಪೇರು ಆಗಲಿದೆ. ಈ ಹಿನ್ನೆಲೆಯಲ್ಲಿ ಕೆಲವರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. ಇದಕ್ಕಿಂತ ಮುಖ್ಯವಾಗಿ ತುಮಕೂರು, ರಾಮನಗರ, ಚನ್ನಪಟ್ಟಣ ಸೇರಿದಂತೆ ಹೊರವಲಯದಿಂದ ಸಾವಿರಾರು ಚಾಲನಾ ಸಿಬ್ಬಂದಿ ಬಂದು ಡ್ಯೂಟಿ ಮುಗಿಸಿಕೊಂಡು ಹೋಗುತ್ತಾರೆ. ಅವರೆಲ್ಲರಿಗೂ ರಾತ್ರಿಪಾಳಿ ಅನುಕೂಲಕರವಾಗಿದೆ. ಒಂದು ವೇಳೆ ಸಾಮಾನ್ಯ ಪಾಳಿ ಮುಗಿಸಿ, ರಾತ್ರಿ ಅವರು ಊರು ತಲುಪಲು ಸಮಸ್ಯೆ ಆಗುತ್ತದೆ. ಹೀಗಾಗಿ ಆಕ್ಷೇಪ  ವ್ಯಕ್ತಪಡಿಸಬಹುದು ಎಂದರು.

ರಜೆಗೆ ಓಎಲ್ಎಂಎಸ್ :

ಬಿಎಂಟಿಸಿ ಸಾರಿಗೆ ಸಿಬ್ಬಂದಿ ರಜೆ ಮಂಜೂರಾತಿಗೆ ಸಂಬಂಧಿ ಸಿದಂತೆ ಆನ್‌ಲೈನ್‌ ಲೀವ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಓಎಲ್‌ಎಂಎಸ್‌) ಜಾರಿಗೊಳಿಸಲಾ ಗುತ್ತಿದೆ. ಹಾಗಾಗಿ, ಇಲ್ಲಿಯೂ ಪಾರದರ್ಶಕತೆ ಬರಲಿದೆ ಎನ್ನಲಾಗಿದೆ.

ಡ್ಯೂಟಿ ರೋಟಾ ಸಿಸ್ಟಂ ಸ್ವತಃ ಸಿಬ್ಬಂದಿಯ ಬೇಡಿಕೆ ಆಗಿದೆ. ಹಾಗಾಗಿ,ಅನನುಕೂಲತೆ ಪ್ರಶ್ನೆ ಬರುವುದೇ ಇಲ್ಲ. ಆರಂಭದಲ್ಲಿ ತುಸು ಸಮಸ್ಯೆ ಆಗಬಹುದು. ಆದರೆ, ಸಿಬ್ಬಂದಿ ಹಿತದೃಷ್ಟಿಯಿಂದ ಮತ್ತು ಪಾರದರ್ಶಕತೆ ತರಲು ಇದು ಅತ್ಯವಶ್ಯಕ. ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ

ಅನುಷ್ಠಾನಕ್ಕೆ ಇದು ಸಕಾಲ ಅಲ್ಲ. ಕೋವಿಡ್ ದಿಂದಾಗಿ ಬಸ್‌ಗಳು ಸಂಪೂರ್ಣ ಕಾರ್ಯಾಚರಣೆ ಮಾಡುತ್ತಿಲ್ಲ. ವೋಲ್ವೊ ಬಸ್‌ಗಳ ಚಾಲನಾ ಸಿಬ್ಬಂದಿ ಬೇರೆ ಡಿಪೋಗಳಲ್ಲಿ ನಿಯೋಜನೆಗೊಂಡಿದ್ದಾರೆ. ಇಂಥ ವೇಳೆ ಬೇರೆ ವ್ಯವಸ್ಥೆ ಜಾರಿಗೊಳಿಸಿದರೆ, ಆ ಸಿಬ್ಬಂದಿಗೂ ಜೇಷ್ಠತೆ ನೀಡಬೇಕಾಗುತ್ತದೆ.ಇದರಿಂದ ಉಳಿದವರಿಗೆ ಅನ್ಯಾಯವಾಗಲಿದೆ. ಹೀಗಾಗಿ ತಾತ್ಕಾಲಿಕವಾಗಿ ತಡೆ ನೀಡಬೇಕು. ಚಂದ್ರಶೇಖರ್, ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ

 

ವಿಜಯಕುಮಾರ್ ಚಂದರಗಿ

ಟಾಪ್ ನ್ಯೂಸ್

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.