![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 13, 2021, 3:27 PM IST
ಬೆಂಗಳೂರು: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದ್ದು, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮಊರುಗಳಿಗೆ ಹೋಗಲು ಸರ್ಕಾರಿ ಬಸ್‌ಗಳನ್ನುನಂಬಿಕೊಂಡಿದ್ದ ಪ್ರಯಾಣಿಕರು ಸೋಮವಾರವೂಪರದಾಡಿದರು. ದುಪ್ಪಟ್ಟು ಹಣ ನೀಡಿ ಖಾಸಗಿ ಬಸ್‌ಗಳನ್ನು ಏರಿ ಊರಿನತ್ತ ಮುಖ ಮಾಡಿದರು.
ಆದರೆ ಸುಮಾರು 452ಬಿಎಂಟಿಸಿ ಬಸ್‌ಗಳು ಸೋಮವಾರ ಮೆಜೆಸ್ಟಿಕ್ ಮತ್ತು ಕೆ.ಆರ್.ಮಾರುಕಟ್ಟೆಯಿಂದ ನಗರದ ಬೇರೆ-ಬೇರೆ ಮಾರ್ಗಗಳಿಗೆ ಸಂಚರಿಸಿದವು.ಹೀಗಾಗಿ ಹಬ್ಬದ ತಯಾರಿಯಲ್ಲಿ ತೊಡಗಿದ್ದ ಜನರುಬಿಎಂಟಿಸಿ ಬಸ್ ಏರಿ ತಾವು ತಲುಪಬೇಕಾದ ಸ್ಥಳ ಸೇರಿದರು.ವಿಜಯನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ,ಯೂನಿವರ್ಸಿಟಿ ಕ್ವಾಟ್ರಸ್, ಮಲತ್ತಹಳ್ಳಿ, ಚಂದ್ರಾಲೇಔಟ್,ಜಂಬೂಸವಾರಿ ದಿಣ್ಣೆ, ಕೊಟ್ಟಿಗೆಪಾಳ್ಯ, ಪೀಣ್ಯಾ, ಕೆ.ಆರ್.ಪುರ, ಶಿವಾಜಿನಗರ ಸೇರಿದಂತೆ ಹಲವು ಮಾರ್ಗಗಳತ್ತ ಕೆ.ಆರ್.ಮಾರುಕಟ್ಟೆಯಿಂದ ಬಿಎಂಟಿಸಿ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ತೆರಳಿದವು.
ಹಾಗೆಯೇ ಜಯನಗರದ ನಾಲ್ಕನೇ ಹಂತದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಜಂಬೂಸವಾರಿ ದಿಣ್ಣೆ, ಮಾರೇನಹಳ್ಳಿ, ಜೆಪಿ ನಗರ, ಪುಟ್ಟೇನಹಳ್ಳಿ, ಕೆ.ಬಿ.ಸರ್ಕಲ್‌ಮಾರ್ಗವಾಗಿ ಕೆಲವು ಬಸ್‌ಗಳು ಸಂಚರಿಸಿದವು. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಚಂದ್ರಾ ಲೇಔಟ್,ವಿಜಯನಗರ, ಸುಜಾತ, ಅಂಬೇಡ್ಕರ್ ಕಾಲೇಜು,ಯೂನಿವರ್ಸಿಟಿ ಕ್ವಾಟ್ರಾಸ್, ಯಲಹಂಕ, ಕಾರ್ಪೋರೇಷನ್,ಮೆಯೋಹಾಲ್, ಕೆ.ಆರ್.ಪುರ ಹಾಗೂ ಟಿನ್ ಫ್ಯಾಕ್ಟರಿಮಾರ್ಗವಾಗಿ ಬಿಎಂಟಿಸಿಗಳು ರಸ್ತೆಗಿಳಿದವು.
ಮೆಯೋಹಾಲ್‌ನಿಂದ ಕೋರಮಂಗಲ ಮಾರ್ಗವಾಗಿ, ಸಿಲ್ಕ್ ಬೋರ್ಡ್ ನಿಂದ ಬನಶಂಕರಿ ಮಾರ್ಗವಾಗಿ ಬಿಎಂಟಿಸಿಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಂಚರಿಸಿದವು.ಸಂಸ್ಥೆ ನಂಬಿ ಬದುಕುತ್ತಿದ್ದೇನೆ. ಸಂಸ್ಥೆ ನೀಡುವಸಂಬಳದಿಂದಲೇ ಸಂಸಾರ ಸಾಗಿಸಬೇಕು. ಹೀಗಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೆಸರು ಹೇಳಲು ಇಚ್ಛಿಸಿದ ಬಿಎಂಟಿಸಿ ನಿರ್ವಾಹಕ ತಿಳಿಸಿದರು.
ಖಾಸಗಿ ಬಸ್ ಸಂಚಾರ: ಖಾಸಗಿ ಸಂಸ್ಥೆಗಳ ಬಸ್‌ಗಳ ನಡುವೆ ಬಿಎಂಟಿಸಿ ಬಸ್‌ಗಳೂ ರಸ್ತೆಗಿಳಿದ ಹಿನ್ನೆಲೆಯಲ್ಲಿಜನರು ಅಲ್ಪ ನಿರಾಳರಾಗಿದ್ದರು. ಆದರೂ ಕೆಲವುಮಾರ್ಗಗಳಿಗೆ ಸರ್ಕಾರಿ ಬಸ್‌ಗಳು ರಸ್ತೆ ಗಿಳಿಯದಹಿನ್ನೆಲೆಯಲ್ಲಿ ಜನರು ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆಯನ್ನುನೆನಪಿಸಿಕೊಂಡರು. ಮಾರ್ಕೆಟ್‌ನಿಂದ ಟೌನ್‌ಹಾಲ್,ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ಬಸ್ ನಿಲ್ದಾಣ,ಮಲ್ಲೇಶ್ವರ, ಯಶವಂತಪುರ, ಪೀಣ್ಯಾ ಮಾರ್ಗವಾಗಿಹಸಿರುಘಟ್ಟ ಮತ್ತು ನೆಲಮಂಗಳ ಮಾರ್ಗವಾಗಿ ಖಾಸಗಿಬಸ್‌ಗಳು ಸಂಚರಿಸಿದವು.
ಹಾಗೆಯೇ ಕೆ.ಆರ್.ಪುರಂ, ಹೊಸಕೋಟೆ, ಚಿಕ್ಕಬಳ್ಳಾಪುರ, ಜಿಗಣಿ, ಅನೇಕಲ್, ಯಲಹಂಕ ಮಾರ್ಗವಾಗಿ ಖಾಸಗಿ ಬಸ್‌ಗಳು ಸಾಗಿದವು. ಜಿಗಣಿ ನಿವಾಸಿಸಂತೋಷ್ ಪ್ರತಿಕ್ರಿಯಿಸಿ, ಖಾಸಗಿ ಬಸ್‌ಗಳ ಸೇವೆ ಸರ್ಕಾರಿಬಸ್‌ಗಳಂತಲ್ಲ. ಯಾವಾಗ ನಮ್ಮ ಸ್ಥಳ ತಲುಪಿತ್ತೇವೆ ಎಂದು ಹೇಳಲಾಗದು ಎಂದರು.
ಯುಗಾದಿ ಬಸ್ ನಿಲ್ದಾಣದಲ್ಲಿ ಹೆಚ್ಚಿದ ಪ್ರಯಾಣಿಕರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಯಿತ್ತು. ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಜನರು ಖಾಸಗಿ ಬಸ್‌ಗಳನ್ನು ಏರುತ್ತಿದ್ದ ದೃಶ್ಯ ಕಂಡು ಬಂತು.ಶಿವಮೊಗ್ಗ, ಮೈಸೂರು, ಕೊಡಗು, ಬಳ್ಳಾರಿ ದಾವಣಗೆರೆ,ಬೀದರ್ ಸೇರಿದಂತೆ ಹಲವು ಕಡೆಗಳಿಗೆ ಖಾಸಗಿ ಬಸ್‌ಗಳು ಸಂಚರಿಸಿದವು. ಹಾಸನ, ಮಂಗಳೂರು ಮಾರ್ಗವಾಗಿ ವೋಲ್ವೊ ಬಸ್‌ಗಳು ಸಾಗಿದವು.
You seem to have an Ad Blocker on.
To continue reading, please turn it off or whitelist Udayavani.