ಶೆಟಲ್ ಸೇವೆ ಮೇಲೆ ಬಿಎಂಟಿಸಿ ಕಣ್ಣು
ಜ.4ರಿಂದ ಸಿಟಿ-ಏರ್‌ಪೋರ್ಟ್ ರೈಲು ಆರಂಭ | ನಿತ್ಯ ಆರು ರೈಲು ಸೇವೆಗಳು
Team Udayavani, Jan 2, 2021, 12:12 PM IST
ಬೆಂಗಳೂರು: ಇತ್ತ ಬಹುನಿರೀಕ್ಷಿತ ನಗರದ ಹೃದಯಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸೇವೆಗೆ ಮೂಹೂರ್ತ ನಿಗದಿಯಾಗಿದ್ದು, ಜ. 4ರಿಂದ ಸೇವೆ ಆರಂಭಗೊಳ್ಳಲಿದೆ. ಈ ಬೆನ್ನಲ್ಲೇ ಅತ್ತ ಹಾಲ್ಟ್ ಸ್ಟೇಷನ್‌ನಿಂದ ಏರ್‌ಪೋರ್ಟ್ ನಡುವೆ ಶೆಟಲ್ ಬಸ್ ಸೇವೆಗೆ ಬಿಎಂಟಿಸಿ ಮುಂದಾಗಿದೆ. ಈ ಸಂಬಂಧ ಬಿಐಎಎಲ್ ನೊಂದಿಗೆ ಮಾತುಕತೆ ನಡೆದಿದೆ.
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2 ಜೋಡಿ (4) ಹಾಗೂ ಯಶವಂತಪುರದಿಂದ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದು ಜೋಡಿ (2) ಉಪನಗರ ರೈಲು ಸೇವೆ ಪರಿಚಯಿಸಲು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಹೊಸ ಹಾಲ್ಟ್ ಸ್ಟೇಷನ್‌ನಿಂದ ವಿಮಾನ ನಿಲ್ದಾಣ ಟರ್ಮಿನಲ್ ನಡುವೆ ಶೆಟಲ್ ಸೇವೆಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಹಾಲ್ಟ್ ಸ್ಟೇಷನ್‌ನಿಂದ ಟರ್ಮಿ ನಲ್‌ಗೆ ಸುಮಾರು 5 ಕಿ.ಮೀ. ದೂರ ಆಗುತ್ತದೆ. ರೈಲಿನಲ್ಲಿ ಬಂದಿಳಿಯುವ ಪ್ರಯಾಣಿಕರಿಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಿಯಮಿತ (ಬಿಐಎಎಲ್) ಶೆಟಲ್ ಸೇವೆ ಆರಂಭಿ ಸಬೇಕಿದೆ. ಈ ಉದ್ದೇಶಕ್ಕೆ ಬಿಎಂಟಿಸಿ ವೋಲ್ವೊ ಬಸ್ ಪರಿಚಯಿಸಲು ಚಿಂತನೆ ನಡೆದಿದೆ. ಆದರೆ, ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ.
ಇದನ್ನೂ ಓದಿ : ಪ್ರತಿಯೊಬ್ಬ ಹಿಂದೂ ದೇಶಭಕ್ತನೇ, ಅದು ಹಿಂದೂಗಳ ಮೂಲಗುಣ: ಮೋಹನ್ ಭಾಗವತ್
ಪ್ರಾಯೋಗಿಕವಾಗಿ 6 ರೈಲುಗಳನ್ನು ಪರಿಚಯಿಸಲಾ ಗುತ್ತಿದೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ರೈಲು ಸೇವೆ ಹೆಚ್ಚಿಸುವ ಬಗ್ಗೆ ನಿರ್ಧಾರ ಆಗಲಿದೆ. ಅದಕ್ಕೆ ಅನುಗುಣವಾಗಿ ಶೆಟಲ್ ಸೇವೆ ಬೇಕಾಗುತ್ತದೆ. ಆರಂಭದಲ್ಲಿ ಕನಿಷ್ಠ 5-6 ಬಸ್ ಅವಶ್ಯಕತೆ ಇದೆ. ಖಾಸಗಿ ಮೊರೆ ಹೋಗುವ ಬದಲಿಗೆ, ತಮ್ಮ ವೋಲ್ವೋಬಸ್ ಬಳಸಿಕೊಳ್ಳಲು ಬಿಎಂ ಟಿಸಿ, ಬಿಐ ಎಎಲ್ ಮುಂದೆ ಪ್ರಸ್ತಾವನೆ ಇಟ್ಟಿದೆ. ಆದರೆ, ಗುತ್ತಿಗೆ ದರದಲ್ಲಿ ಎರಡೂ ಸಂಸ್ಥೆಗಳ ನಡುವೆ ಚೌಕಾಸಿ ನಡೆ ದಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಆದಾಯಕ್ಕಿಂತ ಸೇವೆ ಮುಖ್ಯ; ಬಿಎಂಟಿಸಿ :
“ವೋಲ್ವೊ ಬಸ್‌ವೊಂದರ ದಿನದ ಬಾಡಿಗೆ 15ರಿಂದ 20 ಸಾವಿರ ರೂ. ಆಗುತ್ತದೆ. ಕನಿಷ್ಠ 5 ಬಸ್ ಗುತ್ತಿಗೆ ಪಡೆದರೂ, 1 ಲಕ್ಷ ರೂ.ಆಗುತ್ತದೆ. ಪೂರ್ಣಪ್ರಮಾಣದಲ್ಲಿ ಸೇವೆ ಒದಗಿಸಿದರೆ, ಈ ಆದಾಯ ದುಪ್ಪಟ್ಟು ಆಗಲಿದೆ. ಬಿಎಂಟಿಸಿಗೆ ಇಲ್ಲಿ ಆದಾಯಕ್ಕಿಂತ ಹೆಚ್ಚಾಗಿ ಸೇವೆ ಮುಖ್ಯವಾಗಿದ್ದು, ತಮ್ಮ ಬಸ್‌ಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಆದರೆ, ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ’ ಎಂದು ಬಿಎಂಟಿಸಿ ಹಿರಿಯಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. “ಖಾಸಗಿಯವರಿಗೆಹೋಲಿಸಿದರೆ, ಬಿಎಂಟಿಸಿ ವೋಲ್ವೊ ಬಸ್‌ಗಳ ಬಾಡಿಗೆ ತುಸು ದುಬಾರಿಅನಿಸಬಹುದು. ಆದರೆ, ಸೇವೆಗಳು ಉತ್ತಮ. ಜತೆಗೆ ಸರ್ಕಾರಿ ಸಂಸ್ಥೆಆಗಿರುವುದರಿಂದ ಜವಾಬ್ದಾರಿ ಹೆಚ್ಚಿರುತ್ತದೆ. ಒಂದು ವೇಳೆ ಬಿಐಎಎಲ್ ಒತ್ತಾಯಕ್ಕೆ ನಾವು ಬಾಡಿಗೆ ಕಡಿಮೆ ಮಾಡಲು ಆಗುವುದಿಲ್ಲ. ಹಾಗೊಂದು ವೇಳೆ ಕಡಿಮೆ ಮಾಡಿದರೆ, ಉಳಿದ ಕಡೆಗೆ ನೂರಾರು ಬಸ್‌ಗಳನ್ನು ಬಾಡಿಗೆಗೆ ನೀಡುತ್ತಿದ್ದೇವೆ. ಅವರಿಂದಲೂ ಒತ್ತಾಯ ಕೇಳಿ ಬರುತ್ತದೆ. ಆಗ, ನಿರ್ವಹಿಸುವುದು ಕಷ್ಟ ಆಗಲಿದೆ’ ಎಂದೂ ಅಧಿಕಾರಿಗಳು ತಿಳಿಸುತ್ತಾರೆ.
ಎಲೆಕ್ಟ್ರಿಕ್ ವೋಲ್ವೋ ಬಸ್ ಪೂರಕ :
ಬಿಐಎಎಲ್ ಮೊದಲಿನಿಂದಲೂ ಮಳೆನೀರು ಕೊಯ್ಲು, ಸೋಲಾರ್, ನೀರಿನ ಮರುಬಳಕೆ ಸೇರಿದಂತೆ “ಪರಿಸರ ಸ್ನೇಹಿ’ ಚಟುವಟಿಕೆಗಳಿಗೆ ಒತ್ತು ನೀಡುತ್ತಿದೆ. ಒಂದೆರಡು ತಿಂಗಳಲ್ಲಿಬಿಎಂಟಿಸಿ ಕೂಡ ಎಲೆಕ್ಟ್ರಿಕ್ ವೋಲ್ವೊ ಬಸ್‌ಗಳನ್ನು ರಸ್ತೆಗಿಳಿಸಲಿದೆ. ಆಗ, ಶೆಟಲ್ ಸೇವೆಗಳ ರೂಪದಲ್ಲಿ ಈ ವಿದ್ಯುತ್‌ಚಾಲಿತ ಬಸ್‌ಗಳನ್ನು ಕಲ್ಪಿಸಬಹುದು. ಇದು ಬಿಐಎಎಲ್ ಚಟುವಟಿಕೆಗೆ ಪೂರಕವಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಅಂತಿಮವಾಗಿಲ್ಲ: ಬಿಐಎಎಲ್ : ಬಿಐಎಎಲ್ ವಕ್ತಾರರು ಹೇಳುವ ಪ್ರಕಾರ “ರೈಲು ಸೇವೆಗಳು ಆರಂಭಗೊಂಡ ನಂತರ ಶೆಟಲ್ ಸೇವೆಗಳ ಪ್ರಶ್ನೆ ಬರುತ್ತದೆ. ಸದ್ಯಕ್ಕೆ ಶೆಟಲ್ ಸೇವೆಗಳಿಗೆ ಸಿದ್ಧತೆಯಂತೂ ನಡೆದಿದೆ. ಆದರೆ, ಅವುಗಳು ಬಿಎಂಟಿಸಿಯ ಬಸ್ ಅಥವಾಖಾಸಗಿ ಬಸ್‌ಗಳನ್ನು ಪರಿಚಯಿಸಬೇಕೋ ಎಂಬುದು ಇನ್ನೂ ಅಂತಿಮವಾಗಿಲ್ಲ’ ಎಂದಷ್ಟೇ ಮಾಹಿತಿ ನೀಡಿದರು.
–ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.