ಹೊಸ ಪ್ರಯಾಣಿಕರ ಹುಡುಕಿ ಹೊರಟ ಬಿಎಂಟಿಸಿ


Team Udayavani, May 10, 2017, 11:54 AM IST

bmtc-bus.jpg

ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಅದರಿಂದ ಆಗಬಹುದಾದ ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಲು ಬಿಎಂಟಿಸಿ ಹೊಸ ಪ್ರಯಾಣಿಕರ ಹುಡುಕಾಟ ನಡೆಸಿದ್ದು, ಈ ಉದ್ದೇಶಕ್ಕಾಗಿ ನಿಗಮದಲ್ಲಿ ಪ್ರತ್ಯೇಕ ಮಾರುಕಟ್ಟೆ ವಿಭಾಗ ರಚನೆಗೆ ಚಿಂತನೆ ನಡೆಸಿದೆ.

42.3 ಕಿ.ಮೀ. ಉದ್ದದ ಮೊದಲ ಹಂತದ ಕಾಮಗಾರಿ ಶೀಘ್ರವೇ ಸಾರ್ವಜನಿಕ ಸೇವೆಗೆ ಮುಕ್ತಗೊಳ್ಳಲಿದೆ. ಇದರಿಂದ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಬರುವ ಲಕ್ಷಾಂತರ ಜನ ಬಿಎಂಟಿಸಿ ಬಸ್‌ ಬಿಟ್ಟು ಮೆಟ್ರೋ ರೈಲು ಏರಲಿದ್ದಾರೆ. ಇದರಿಂದ ಬಿಎಂಟಿಸಿಗೆ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ರಿಯಾಯ್ತಿ ದರದಲ್ಲಿ ಶಾಲೆ, ಕಾಲೇಜು, ಐಟಿ-ಬಿಟಿ ಕಂಪನಿಗಳಿಗೆ ಸೇವೆ ನೀಡುವ ಮೂಲಕ ಆರ್ಥಿಕ ಸ್ಥಿತಿಯನ್ನು ಯಥಾವತ್ತಾಗಿ ಕಾಯ್ದುಕೊಳ್ಳಲು ಮುಂದಾಗಿದೆ.

ಬಿಎಂಟಿಸಿ ಬಸ್‌ಗಳ ಸೇವೆ ಬಗ್ಗೆ ಕಂಪನಿಗಳು, ಶಾಲೆ, ಕಾಲೇಜುಗಳಿಗೆ ತಿಳಿಸಿ, ಸೇವೆ ಬಳಸುವಂತೆ ಸೆಳೆಯಲು ನಿಗಮದಲ್ಲಿ ಪ್ರತ್ಯೇಕ ಮಾರುಕಟ್ಟೆ ವಿಭಾಗ ರಚನೆಗೆ ಚಿಂತನೆ ನಡೆಸಿದೆ. ಈಗಾಗಲೇ ಇರುವ ವಾಣಿಜ್ಯ ವಿಭಾಗದ ಕೆಲ ತಜ್ಞರನ್ನು ಮಾರುಕಟ್ಟೆ ವಿಭಾಗದಲ್ಲಿ ಬಳಸಿಕೊಂಡು, ನಿಗಮದ ವ್ಯಾಪ್ತಿ ವಿಸ್ತರಿಸಲು ಉದ್ದೇಶಿಸಲಾಗಿದೆ. 

ಈಗಾಗಲೇ ಈ ನಿಟ್ಟಿನಲ್ಲಿ ಬಿಎಂಟಿಸಿ ಅಧಿಕಾರಿಗಳು ಕೆಲ ಕಂಪನಿಗಳ ಜತೆ ಚರ್ಚಿಸುತ್ತಿದ್ದು, ಮತ್ತೂಂದೆಡೆ ಖಾಸಗಿ ಸಂಸ್ಥೆ ಹಾಗೂ ನಿಗಮದ ತಂಡಗಳು ಮೆಟ್ರೋ ಮಾರ್ಗದುದ್ದಕ್ಕೂ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಎಷ್ಟು ಪ್ರಯಾಣಿಕರು ಸಂಚರಿಸಬಹುದು? ಎಷ್ಟು ಬಸ್‌ಗಳ ಸೇವೆ ನೀಡಬಹುದು? ಪ್ರಯಾಣಿಕರ ಸಂಖ್ಯೆ ಎಷ್ಟು ಇಳಿಕೆಯಾಗಲಿದೆ ಎಂದು ಅಧ್ಯಯನ ನಡೆಸಿದೆ.  

ಬಿಎಂಟಿಸಿ ಬಸ್‌ 300: ಖಾಸಗಿ ವಾಹನ 30 ಸಾವಿರ!: ನಗರದಲ್ಲಿ 300-500 ಐಟಿ-ಬಿಟಿ ಕಂಪನಿಗಳಿದ್ದು, ಅಲ್ಲಿನ ನೌಕರರನ್ನು ಕೊಂಡೊಯ್ಯಲು ನಿತ್ಯ ಅಂದಾಜು 25 ಸಾವಿರ ಮ್ಯಾಕ್ಸಿಕ್ಯಾಬ್‌ಗಳು (12 ಸೀಟುಗಳಿಗಿಂತ ಅಧಿಕ ಸಾಮರ್ಥ್ಯದ) ಕಾರ್ಯಾಚರಣೆ ಮಾಡುತ್ತಿವೆ. ಅದೇ ರೀತಿ, ಸಾವಿರಕ್ಕೂ ಅಧಿಕ ಖಾಸಗಿ ಶಾಲೆ ಕಾಲೇಜುಗಳಿಗೆ ಐದು ಸಾವಿರಕ್ಕೂ ಅಧಿಕ ಮ್ಯಾಕ್ಸಿಕ್ಯಾಬ್‌ಗಳ ಸೇವೆ ಸಲ್ಲುತ್ತಿದೆ.

ಆದರೆ, ಐಟಿ-ಬಿಟಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ 226 ವೋಲ್ವೊ ಮತ್ತು 868 ಸಾಮಾನ್ಯ ಬಸ್‌ಗಳನ್ನು ಮಾತ್ರ ಬಿಎಂಟಿಸಿ ಗುತ್ತಿಗೆ ನೀಡಿದೆ. ಬಿಎಂಟಿಸಿ ಬಸ್‌ ಸೇವೆ ಬಳಸುವ ಕುರಿತು ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆಯಲಿರುವ ಬಿಎಂಟಿಸಿ ಅಧಿಕಾರಿಗಳು, ಸೇವೆ ಬಳಸಿದರೆ ರಿಯಾಯ್ತಿ ನೀಡಲು ಕೂಡ ಸಿದ್ಧರಾಗಿದ್ದಾರೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಶೇ. 10-20ರಷ್ಟು ಆದಾಯ ಕುಸಿತ: ಪ್ರಸ್ತುತ ಮೈಸೂರು ರಸ್ತೆಯಿಂದ ಬೈಯಪ್ಪನ ಹಳ್ಳಿ ನಡುವಿನ (18.3 ಕಿ.ಮೀ.) ಮೆಟ್ರೋ ಸಂಚಾರದಿಂದ ಬಿಎಂಟಿಸಿಗೆ ನಿತ್ಯ ಶೇ.20ರಷ್ಟು ಆದಾಯ ಕುಸಿದಿದೆ. ಈ ಮಧ್ಯೆ ಸದ್ಯವೇ ಆರಂಭವಾಗುವ ಉತ್ತರ-ದಕ್ಷಿಣ (24 ಕಿ.ಮೀ.) ಮೆಟ್ರೋ ಮಾರ್ಗದಲ್ಲಿ ಜನ ವಸತಿ ಪ್ರದೇಶ ಹೆಚ್ಚಿದೆ. ಕೆಂಪೇಗೌಡ ಬಸ್‌ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ಪರಿಣಾಮ ಬಿಎಂಟಿಸಿಯಿಂದ ಜನ ವಿಮುಖರಾಗುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಮೆಟ್ರೋ ರೈಲು ಹಾದುಹೋಗುವ ಮಾರ್ಗದುದ್ದಕ್ಕೂ ಬೇರೆ ಬೇರೆ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು 150 ಮಿಡಿ ಬಸ್‌ಗಳನ್ನು ಪರಿಚಯಿಸಲಾಗುತ್ತಿದೆ.

ದರ ಕಡಿಮೆ; ಹೆಚ್ಚಿದ ದಟ್ಟಣೆ
ಸಾಮಾನ್ಯ ಬಸ್‌ಗಳಲ್ಲಿ ಎರಡನೇ ಹಂತದ ಪ್ರಯಾಣ ದರವನ್ನು 2 ರೂ. ಇಳಿಸಿದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ 20 ಸಾವಿರದಷ್ಟು ಹೆಚ್ಚಾಗಿದೆ. ಆದರೆ, ಆದಾಯದಲ್ಲಿ ಅಷ್ಟೇನೂ ಏರಿಕೆ ಆಗಿಲ್ಲ. ಇದಲ್ಲದೆ, ವೋಲ್ವೊ ಬಸ್‌ ಸೇವೆಯಲ್ಲೂ ಬದಲಾವಣೆ ತರಲು ಚಿಂತನೆ ನಡೆದಿದೆ.

ಪೀಕ್‌ ಅವರ್‌ ಹೊರತುಪಡಿಸಿ, ಉಳಿದ ಅವಧಿಯನ್ನು “ಲೀನ್‌ ಅವರ್‌’ ಎಂದು ಪ್ರತ್ಯೇಕಿಸಲಾಗುವುದು. ಈ ಅವಧಿಯಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ನೀಡಲಾಗುವುದು. ಇದರಿಂದ ಸಾಮಾನ್ಯರಿಗೆ ವೋಲ್ವೊ ಸೇವೆ ಜತೆಗೆ ನಿಗಮಕ್ಕೂ ಆದಾಯ ಹೆಚ್ಚಲಿದೆ ಎಂದು ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜು ತಿಳಿಸಿದ್ದಾರೆ.

ಐಟಿ-ಬಿಟಿ, ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಸೇವೆ ಒದಗಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಪ್ರಸ್ತುತ ಈ ಸೇವೆ ವಿಸ್ತರಿಸಲು ಮಾರುಕಟ್ಟೆ ವಿಭಾಗ ರಚಿಸಲಾಗುತ್ತಿದೆ. ಈ ಸೇವೆ ಪಡೆಯಲಿಚ್ಛಿಸುವ ಕಂಪನಿ, ಶೈಕ್ಷಣಿಕ ಸಂಸ್ಥೆಗಳು ಮೊ: 77609 91026 ಸಂಪರ್ಕಿಸಬಹುದು.
-ನಾಗರಾಜು, ಅಧ್ಯಕ್ಷರು, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ 

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.