ಮಹಿಳೆಯರಿಗೆ ಚಾಲನೆ ತರಬೇತಿ ನೀಡಲು ಬಿಎಂಟಿಸಿ ತಯಾರಿ
Team Udayavani, Dec 9, 2017, 12:39 PM IST
ಬೆಂಗಳೂರು: ಬಿಎಂಟಿಸಿ ಬಸ್ ಚಾಲನೆ ಮಾಡಲು ಮಹಿಳೆಯರಿಗೂ ಚಾಲನೆ ತರಬೇತಿ ನೀಡುವುದಾಗಿ ಘೋಷಿಸಿದ್ದ ಬಿಬಿಎಂಪಿ, ಇದೀಗ ತರಬೇತಿ ಪಡೆಯಲು ಸಕ್ತಿ ತೋರುವ ನಗರ ಅಥವಾ ರಾಜ್ಯದ ತ್ಸಾಹಿ ಮಹಿಳೆಯರಿಗೆ ಭಾರಿ ಹಾಗೂ ಲಘು ವಾಹನಗಳ ಚಾಲನೆ ಕುರಿತು ತರಬೇತಿ ನೀಡಲು ಸಿದ್ಧತೆ ನಡೆಸಿದೆ. ಅಲ್ಲದೆ ಹೀಗೆ ತರಬೇತಿ ಪಡೆದ ಮಹಿಳೆಯರಿಗೆ ಸಂಸ್ಥೆಯಲ್ಲೇ ಉದ್ಯೋಗ ನೀಡುವ ಚಿಂತನೆ ನಡೆಸಿದೆ.
ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಪಿಂಕ್ ಆಸನ, ಸುರಕ್ಷತಾ ಆ್ಯಪ್ ಹಾಗೂ ಸ್ತ್ರೀಯರ ಸಮಸ್ಯೆಗಳಿಗೆ ಸ್ಪಂದಿಸಲು “ಪಿಂಕ್ ಸಾರಥಿ’ ಎಂಬ ಪೆಟ್ರೋಲಿಂಗ್ ವಾಹನ ಪರಿಚಯಿಸಲು ಮುಂದಾಗಿರುವ ಸಂಸ್ಥೆ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗೆ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಲು ಯೋಜನೆ ರೂಪಿಸಿದೆ.
ನಗರದ ಸಾರಿಗೆಯಲ್ಲಿ ಮಹಿಳೆಯ ಸುರಕ್ಷತೆ ಸೇರಿ ಮಹಿಳೆಯರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ “ನಿರ್ಭಯಾ ಯೋಜನೆ’ ಅಡಿಯಲ್ಲಿ ಬಿಎಂಟಿಸಿಗೆ 56 ಕೋಟಿ ರೂ. ಅನುದಾನ ನೀಡಿದೆ. ಅದರಂತೆ ಈಗಾಗಲೇ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವ ಸಂಸ್ಥೆ, ಮಹಿಳೆಯರಿಗೆ ಚಾಲನೆ ತರಬೇತಿ ನೀಡಲು ಕೂಡ ನಿರ್ಭಯಾ ಅನುದಾನ ಬಳಸಿಕೊಂಡು ಯೋಜನೆ ರೂಪಿಸಿದೆ. ವಿಪರ್ಯಾಸವೆಂದರೆ ಇಷ್ಟು ವರ್ಷ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಮಹಿಳೆಯರು ಅರ್ಜಿ ಸಲ್ಲಿಸುವ ಆಸಕಿಯನ್ನೂ ತೋರಿಲ್ಲ.
ಆಸಕ್ತಿ ತೋರದ ಸ್ತ್ರೀಶಕ್ತಿ: ಬಿಎಂಟಿಸಿ ವತಿಯಿಂದ ಚಾಲಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ಮಹಿಳೆಯರಿಗಾಗಿಯೇ ಇಂತಿಷ್ಟು ಹುದ್ದೆಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಸಂಸ್ಥೆಯಿಂದ ನಡೆಸಿದ ಚಾಲಕರ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಭಾಗವಹಿಸಿಲ್ಲ. ಹೀಗಾಗಿ ಸಂಸ್ಥೆಯಲ್ಲಿ ಮಹಿಳಾ ಚಾಲಕಿಯರ ಸಂಖ್ಯೆ ಕಡಿಮೆಯಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಚಿತ ಚಾಲನಾ ತರಬೇತಿ: ನಿರ್ಭಯಾ ಯೋಜನೆಯಡಿ ಬಿಎಂಟಿಸಿ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನಿಸಲಿದ್ದು, ಅರ್ಜಿ ಸಲ್ಲಿಸುವ ಆಸಕ್ತ ಮಹಿಳೆಯರಿಂದ ಉಚಿತವಾಗಿ ಸಂಸ್ಥೆಯಿಂದ ತರಬೇತಿ ನೀಡಲಾಗುತ್ತದೆ. ಜತೆಗೆ ಭಾರಿ ಮತ್ತು ಲಘು ವಾಹನ ಚಾಲನಾ ಪರವಾನಗಿ ಸಹ ವಿತರಿಸಲಾಗುತ್ತದೆ. ಪರವಾನಗಿ ಪಡೆದ ಮಹಿಳೆಯರು ವಿವಿಧ ಇಲಾಖೆಗಳಲ್ಲಿನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ಸ್ವಯಂ ಉದ್ಯೋಗ ಆರಂಭಿಸಬಹುದಾಗಿದೆ.
ನೇಮಕಾತಿಯಲ್ಲಿ ಆದ್ಯತೆ: ಸಂಸ್ಥೆಯಿಂದ ನೀಡಲಾಗುವ ಭಾರಿ ಹಾಗೂ ಲಘು ವಾಹನ ತರಬೇತಿಯಲ್ಲಿ ಪಾಲ್ಗೊಳ್ಳುವಂತಹ ಮಹಿಳಾ ಅಭ್ಯರ್ಥಿಗಳಿಗೆ ಬಿಎಂಟಿಸಿ ನೇಮಕಾತಿಯಲ್ಲಿ ಆದ್ಯತೆ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಚಾಲಕರ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಹೆಚ್ಚಿನ ಅರ್ಜಿಗಳು ಬರದ ಹಿನ್ನೆಲೆಯಲ್ಲಿ ತರಬೇತಿ ಪಡೆದ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದವರಿಗೆ ಆದ್ಯತೆ ನೀಡುವ ಮೂಲಕ ಸಂಸ್ಥೆಯಲ್ಲಿ ಮಹಿಳಾ ಚಾಲಕರ ಸಂಖ್ಯೆ ಹೆಚ್ಚಿಸುವ ಗುರಿಯನ್ನು ಬಿಎಂಟಿಸಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಬಿಎಂಟಿಸಿಯಲ್ಲಿ ಮಹಿಳಾ ಚಾಲಕಿಯರ ಸಂಖ್ಯೆ ತುಂಬಾ ಕಡಿಮೆಯಿದೆ. ಚಾಲಕರ ಹುದ್ದೆ ನೇಮಕಾತಿ ವೇಳೆ ಮಹಿಳೆಯರು ಪಾಲ್ಗೊಳ್ಳುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸಂಸ್ಥೆಯಿಂದಲೇ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿ ನೀಡಲು ತೀರ್ಮಾನಿಸಿದ್ದು, ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಸಂಸ್ಥೆಯ ನೇಮಕಾತಿಯಲ್ಲಿ ಆದ್ಯತೆ ನೀಡುವ ಕುರಿತು ಚಿಂತಿಸಲಾಗಿದೆ.
-ವಿ.ಪೊನ್ನುರಾಜು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ
ನಿರ್ಭಯಾ ಯೋಜನೆಯಡಿಯಲ್ಲಿ ಈಗಾಗಲೇ ಬಿಬಿಎಂಪಿ ಸಿಸಿಟಿವಿ ಕ್ಯಾಮೆರಾ, ಪಿಂಕ್ ಸಾರಥಿ ಹಾಗೂ ಮಹಿಳಾ ಸುರಕ್ಷತಾ ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಭಾರಿ ಹಾಗೂ ಲಘು ವಾಹನ ಚಾಲನಾ ತರಬೇತಿ ನೀಡಲು ಮುಂದಾಗಿದ್ದೇವೆ.
-ಎಂ.ನಾಗರಾಜ ಯಾದವ್, ಬಿಎಂಟಿಸಿ ಅಧ್ಯಕ್ಷ
ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ: ಮಹಿಳಾ ಸುರಕ್ಷತೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಬಿಎಂಟಿಸಿ, ಮಹಿಳೆಯರಿಗೆ ಚಾಲನಾ ತರಬೇತಿಯೊಂದಿಗೆ, ಸಾವಿರ ಬಿಎಂಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಿದೆ. ಅದರಂತೆ ಈಗಾಗಲೇ ಕ್ಯಾಮೆರಾಗಳ ಅಳವಡಿಕೆಗೆ ಟೆಂಡರ್ ಕರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್ ಆಹ್ವಾನಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ತರಬೇತಿ ಅವಧಿ ಕುರಿತು ಚರ್ಚೆ: ಮಹಿಳೆಯರಿಗೆ ಎಷ್ಟು ದಿನ ಚಾಲನೆ ತರಬೇತಿ ನೀಡಬೇಕು, ತರಬೇತಿಯ ಒಂದು ಬ್ಯಾಚ್‌ನಲ್ಲಿ ಎಷ್ಟು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು, ಆಸಕ್ತ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡಗಳೇನು ಎಂಬುದೂ ಸೇರಿದಂತೆ ಹಲವು ವಿಷಯಗಳು ಈಗಿನ್ನೂ ಚರ್ಚೆ ಹಂತದಲ್ಲಿವೆ. ಈ ಎಲ್ಲವೂ ಅಂತಿಮವಾದ ನಂತರ ತರಬೇತಿ ಆರಂಭಿಸಲಾಗುವುದು ಎಂದು ಬಿಎಂಟಿಸಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
* ವೆಂ. ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.