ಫೀಡರ್ ಸೇವೆ ಒದಗಿಸಿದ ಬಿಎಂಟಿಸಿ
Team Udayavani, Jun 17, 2017, 12:42 PM IST
ಬೆಂಗಳೂರು: ನಾಗಸಂದ್ರ-ಯಲಚೇನಹಳ್ಳಿ ನಡುವಿನ ಮೆಟ್ರೋ ಸಾರ್ವಜನಿಕ ಸಂಚಾರ ಸೇವೆಗೆ ಪೂರಕವಾಗಿ ಜೂನ್ 19ರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) “ಸಂಪರ್ಕ ಸೇವೆ’ಗಳನ್ನು ಆರಂಭಿಸಲಿದೆ. ಒಟ್ಟು 13 ವಿವಿಧ ಮಾರ್ಗಗಳಿಂದ 120 ಅನುಸೂಚಿ (ಶೆಡ್ಯುಲ್)ಗಳೊಂದಿಗೆ 1,918 ಏಕಮುಖ ಟ್ರಿಪ್‌ಗ್ಳನ್ನು ಪ್ರತಿ 10ರಿಂದ 15 ನಿಮಿಷಗಳ ಅಂತರದಲ್ಲಿ ನೀಡಲಾಗುತ್ತಿದೆ.
ಎಲ್ಲಿಂದ ಎಲ್ಲಿ ಸೇವೆ?: ಶಾಂತಿನಗರ ಟಿಟಿಎಂಸಿಯಿಂದ ವಿಜಯನಗರ ಮೆಟ್ರೋ ನಿಲ್ದಾಣ ನಡುವೆ 13 ಶೆಡ್ಯುಲ್‌ಗಳು, ಗೊಟ್ಟಿಗೆರೆಯಿಂದ ನಾಯಂಡಹಳ್ಳಿ ಮೆಟ್ರೋ ನಿಲ್ದಾಣ 15 ಶೆಡ್ಯುಲ್, ಜಯನಗರ ಬಸ್ ನಿಲ್ದಾಣದಿಂದ ನಾಯಂಡಹಳ್ಳಿ 11 ಶೆಡ್ಯುಲ್, ಹುಳಿಮಾವು-ಯಲಚೇನಹಳ್ಳಿ-ಜೆ.ಪಿ.ನಗರ-ಹುಳಿಮಾವು ನಡುವೆ ಎರಡು ಮಾರ್ಗಗಳಲ್ಲಿ ತಲಾ 7, ಜಯನಗರದಿಂದ ನಾರಾಯಣನಗರ 3ನೇ ಹಂತದ ನಡುವೆ 2, ಜಾಲಹಳ್ಳಿ-ವಿದ್ಯಾರಣ್ಯಪುರ 6, ನಾಗಸಂದ್ರ-ಚಿಕ್ಕಬಾಣಾವರ 5, ನಾಗಸಂದ್ರ-ಬ್ಯಾಡರಹಳ್ಳಿ 7, ಬೈಯಪ್ಪನಹಳ್ಳಿ-ಕೆಂಗೇರಿ 6, ನಾಗಸಂದ್ರ-ನಾಗಸಂದ್ರ ಮೆಟ್ರೋ ನಿಲ್ದಾಣ 9, ನಾಗಸಂದ್ರ-ಕಾಚೋಹಳ್ಳಿ 7 ಶೆಡ್ಯುಲ್‌ಗಳು ಸೇರಿದಂತೆ 101 ಶೆಡ್ಯುಲ್‌ಗಳು ಉದ್ದೇಶಿತ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ.
ಈ ಸೇವೆ ಆರಂಭಿಸುವ ಮುನ್ನ ಈ ಸಂಬಂಧ ಸಾರ್ವಜನಿಕರಿಂದ, ಸಾಮಾಜಿಕ ಜಾಲತಾಣ (ಟ್ವಿಟರ್, ಫೇಸ್ ಬುಕ್), ವೆಬ್‌ಸೈಟ್ ಹಾಗೂ ನೇರವಾಗಿ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳನ್ನು ಸಾರಿಗೆ ಪರಿಣಿತರೊಂದಿಗೆ ವಿಶ್ಲೇಷಿಸಿ ನಂತರ ರೂಪಿಸಲಾಗಿದೆ.
ಈಗಾಗಲೇ ಪೂರ್ವ-ಪಶ್ಚಿಮ ಮೆಟ್ರೋ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) ರೈಲು ಮಾರ್ಗಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸೆಯಿಂದ 16 ಮಾರ್ಗಗಳಿಂದ 85 ಅನುಸೂಚಿಗಳೊಂದಿಗೆ 1,224 ಏಕಮುಖ ಸುತ್ತುವಳಿಗಳನ್ನು 10 ರಿಂದ 15 ನಿಮಿಷಗಳ ಅಂತರದಲ್ಲಿ ಸಂಪರ್ಕ ಸೇವೆಯನ್ನು ಒದಗಿಸಲಾಗುತ್ತಿದೆ. ಅಂದರೆ ಒಟ್ಟಾರೆ 42.3 ಕಿ.ಮೀ. ಮೆಟ್ರೋ ಮಾರ್ಗದಲ್ಲಿ 29 ಮಾರ್ಗಗಳಿಂದ 205 ಅನುಸೂಚಿಗಳೊಂದಿಗೆ 3,142 ಏಕಮುಖ ಸುತ್ತುವಳಿಗಳಿಂದ ಮೆಟ್ರೋ ಸಂಪರ್ಕ ಸೇವೆಯನ್ನು ಒದಗಿಸಿದಂತಾಗುತ್ತದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ
Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ
Atul Subhash: ಟೆಕಿ ಅತುಲ್ ಪತ್ನಿ ಬೇಲ್ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.