ಬಾಯ್ಲರ್ ಸ್ಫೋಟ: ಬಿಹಾರದ ಇಬ್ಬರು ಸಾವು
ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಗಂಭೀರ ಗಾಯ ; ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ
Team Udayavani, Aug 24, 2021, 2:47 PM IST
ಬೆಂಗಳೂರು: ತಿನಿಸುಗಳನ್ನು ಉತ್ಪಾದಿಸುತ್ತಿದ್ದ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇಬ್ಬರು ಮಹಿಳೆಯರು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿ ರಸ್ತೆಯ ಗೋಪಾಲಪುರದಲ್ಲಿರುವ ಎಂ.ಎಂ. ಫುಡ್ ಪ್ರಾಡಕ್ಟ್ ಉತ್ಪಾದನಾ ಘಟನೆಯಲ್ಲಿ ನಡೆದಿದೆ.
ಬಿಹಾರ ಮೂಲದ ಸೌರವ್ ಕುಮಾರ್ (21), ಮನೀಶ್ ಕುಮಾರ್ (24) ಮೃತರು. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಧನಲಕ್ಷ್ಮೀ (52), ಶಾಂತಿ (45), ಸಚಿನ್ (35) ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ.
ವಿಜಯ್ ಮೆಹ್ತಾ ಮತ್ತು ಗಾಯಗೊಂಡಿರುವ ಸಚಿನ್ ಪಾಲುದಾರಿಕೆಯಲ್ಲಿ ಮಾಗಡಿ ರಸ್ತೆಯಲ್ಲಿರುವ ಗೋಪಾಲಪುರದ 5ನೇ ಅಡ್ಡ ರಸ್ತೆಯಲ್ಲಿ ಎಂ.ಎಂ. ಫುಡ್ ಪ್ರಾಡಕ್ಟ್ ಉತ್ಪಾದನಾ ಕಾರ್ಖಾನೆ ನಡೆಸುತ್ತಿದ್ದು, ನಗರದ ಕೆಲ ಅಂಗಡಿಗಳಿಗೆ ತಿನಿಸುಗಳನ್ನು ಸಗಟು ರೂಪದಲ್ಲಿ ಮಾರಾಟ ಮಾಡುತ್ತಾರೆ. ಈ ಕಾರ್ಖಾನೆಯಲ್ಲಿ ಹತ್ತಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಸೌರವ್ ಕುಮಾರ್ ಮತ್ತು ಮನೀಶ್ ಕುಮಾರ್ 2021ರ ಜುಲೈನಿಂದ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕೆಂದರೆ ಜೈಲಿಗೆ ಹೋಗಬೇಕು: ಸಿ.ಟಿ.ರವಿ ವ್ಯಂಗ್ಯ
ಭಾರೀ ಸ್ಫೋಟ: ತಿನಿಸು ತಯಾರಿಸಲು ಫ್ಯಾಕ್ಟರಿಯಲ್ಲಿ ಬಾಯ್ಲರ್ ಇದ್ದು, ಸೋಮವಾರ ಮೃತರು ಹಾಗೂ ಗಾಯಗೊಂಡವರು ಕೆಲಸ ಮಾಡುತಿ ತ್ತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಬಾಯ್ಲರ್ ತಾಪ ಹೆಚ್ಚಾಗಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಪಕ್ಕದಲ್ಲೇ ಇದ್ದ ಮನೀಶ್ ಮತ್ತು ಸೌರವ್ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಇಬ್ಬರು ಮಹಿಳೆಯರು ಸೇರಿ ಮೂವರಿಗೆ ಬೆಂಕಿ ತಗುಲಿ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡು ಕಾರ್ಖಾನೆಯಿಂದ ಹೊರಗಡೆ ಬಂದಿದ್ದಾರೆ. ಅವರನ್ನು ಗಮನಿಸಿದ ಸ್ಥಳೀಯರು ಕೂಡಲೇ ನೀರು ಹಾಕಿ,ಗೋಣಿ ಚೀಲಗ ಳಿಂದ ಮೂವರು ದೇಹ ಮುಚ್ಚಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಕರೆಸಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಶೇ.45ರಷ್ಟು ಮೂವರಿಗೆ ಸುಟ್ಟ ಗಾಯಗ ಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸುದ್ದಿ ತಿಳಿದ ಕೂಡಲೇ ಎರಡು ಅಗ್ನಿಶಾಮಕ ವಾಹನಗಳ ಜತೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಖಾನೆಯೊಳಗೆ ಹೊತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಿದ್ದು, ಎರಡು ಮೃತದೇಹಗಳನ್ನು ಹೊರಗಡೆತೆಗೆದಿದ್ದಾರೆ. ಜತೆಗೆ ಅಲ್ಲೇ ಇದ್ದ ಹತ್ತು ಸಿಲಿಂಡರ್‌ಗಳನ್ನು ಹೊರಗಡೆ ತರಲಾಗಿದೆ. ಒಂದು ವೇಳೆ ಅವುಗಳು ಸ್ಫೋಟಗೊಂಡಿದ್ದರೆ, ಭಾರೀ ಪ್ರಮಾಣದಲ್ಲಿ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು.
ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಭೇಟಿ: ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಮಾಗಡಿ ರಸ್ತೆ ಠಾಣೆ ಅಧಿಕಾರಿ-ಸಿಬ್ಬಂದಿ, ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಎಂ.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಸ್ಫೋಟಕ್ಕೆ ಕಾರಣವೇನು?, ಕಾರ್ಖಾನೆ ಸಕ್ರಮವೇ? ಅಥವಾ ಅಕ್ರಮವೇ? ಎಂಬ ಬಗ್ಗೆ ದಾಖಲೆ ಪರಿಶೀಲಿಸುತ್ತಿದ್ದಾರೆ. ಮೇಲ್ನೋಟಕ್ಕೆ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ತಿನಿಸುಗಳ ತಯಾರಿಕೆ ಹಾಗೂ ತಾಪ ಹೆಚ್ಚಾಗಿದ್ದರಿಂದ ಬಾಯ್ಲರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
3 ದಿಕ್ಕಿಗೆ ಛಾವಣಿಗಳು!
ಬಾಯ್ಲರ್ ಸ್ಫೋಟದ ತೀವ್ರತೆಗೆಕಾರ್ಖಾನೆಯ ಛಾವಣಿಗಳು ಮೂರು ದಿಕ್ಕಿಗೆ ಹಾರಿ ಹೋಗಿವೆ. ಒಳಗಿದ್ದಕಬ್ಬಿಣದ ವಸ್ತುಗಳು, ಮತ್ತೊಂದು ಸಣ್ಣ
ಬಾಯ್ಲರ್‌ಕೂಡ ಹಾನಿಗೊಂಡಿದೆ. ಕೆಲ ವಸ್ತುಗಳು ಸುಟ್ಟುಕರಕಲಾಗಿವೆ. ಅಕ್ಕ-ಪಕ್ಕದ ಮನೆಗಳ ಗೋಡೆಗಳು ಸಣ್ಣ ಪ್ರಮಾಣದಲ್ಲಿ ಬಿರುಕು
ಬಿಟ್ಟುಗೊಂಡಿವೆ ಎಂದು ಸ್ಥಳೀಯರು ಹೇಳಿದರು
ಮಾರ್ಚ್‌ನಲ್ಲಿ ಮದುವೆ!
ಎರಡು ತಿಂಗಳಿಂದಕೆಲಸ ಮಾಡುತ್ತಿರುವ ಮನೀಶ್ ಮತ್ತು ಸೌರವ್‌ಕುಮಾರ್‌ಗೆ ಮುಂದಿನ ಮಾರ್ಚ್‌ನಲ್ಲಿ ವಿವಾಹ ನಿಶ್ಚಿಯವಾಗಿತ್ತು ಅವರ ಜತೆ ಇನ್ನೂ ನಾಲ್ವರು ಬಿಹಾರದಿಂದ ನಗರಕ್ಕೆ ಬಂದಿದ್ದು, ಎಲ್ಲರೂ ಕಾರ್ಖಾನೆ ಸಮೀಪದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿದರು
ಶಾಲೆಗೆ ಹೊಂದಿಕೊಂಡಂತೆ ಫುಡ್ ಫ್ಯಾಕ್ಟರಿ!
ನಾಲ್ಕು ತಿಂಗಳಿಂದ ಆರಂಭವಾಗಿರುವ ಕಾರ್ಖಾನೆಯನ್ನು ಟ್ಯಾಗೂರ್ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಗೋಡೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ. ಅದೃಷ್ಟಶಾತ್ ಶಾಲೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಮಕ್ಕಳು ಸುರಕ್ಷಿತವಾಗಿದ್ದಾರೆ. ಇನ್ನು ಕಾರ್ಖಾನೆ ದಾಖಲೆ ಸಲ್ಲಿಸುವಂತೆ ವಿಜಯ್ ಮೆಹ್ತಾಗೆ ಸೂಚಿಸಲಾಗಿತ್ತು. ಆದರೆ,ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಇಕ್ಕಟ್ಟಿನ ಪ್ರದೇಶದಲ್ಲಿ ಕಾರ್ಖಾನೆಗೆ ಅವಕಾಶ ಕೊಟ್ಟರುವ ಬಗ್ಗೆ ಮಾಹಿತಿ ಪಡೆಯಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.