ಶೌಚಾಲಯಕ್ಕೋಗಿ ಬರುವಷ್ಟರಲ್ಲಿ ಬಾಂಬ್ ವದಂತಿ ಸೃಷ್ಟಿ
Team Udayavani, Nov 5, 2019, 3:07 AM IST
ಬೆಂಗಳೂರು: ಉದ್ಯೋಗ ಅರಸಿ ಬಂದ ತಮಿಳುನಾಡು ಮೂಲದ ಯುವಕನೊಬ್ಬ ಶೌಚಾಲಯಕ್ಕೆ ಹೋಗುವ ಆತುರದಲ್ಲಿ ಪೊಲೀಸ್ ಚೌಕಿ ಸಮೀಪದಲ್ಲಿ ಸೂಟ್‌ಕೇಸ್ ಇಟ್ಟು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದಿದೆ. ತಮಿಳುನಾಡು ಮೂಲದ ರವಿ (28) ಆತಂಕ ಸೃಷ್ಟಿಸಿದ ಯುವಕ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ರವಿ ಭಾನುವಾರ ಮೆಜೆಸ್ಟಿಕ್‌ನಲ್ಲೇ ಕಾಲ ಕಳೆದು, ಸೋಮವಾರ ನಗರದ ವಿವಿಧೆಡೆ ಹೋಟೆಲ್‌ಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾನೆ. ಎಲ್ಲಿಯೂ ಕೆಲಸ ಸಿಕ್ಕಿಲ್ಲ.
ಈ ಮಧ್ಯೆ ಸಂಜೆ ಆರು ಗಂಟೆ ಸುಮಾರಿಗೆ ಮಾಗಡಿ ರಸ್ತೆ ಕಡೆ ಬಂದ ರವಿ, ಶೌಚಕ್ಕೆ ಹೋಗಲು ಶೌಚಾಲಯ ಹುಡುಕಾಡಿದ್ದಾನೆ. ಸಮೀಪದಲ್ಲಿ ಕಂಡು ಬಂದಿಲ್ಲ. ಅದರಿಂದ ವಿಚಲಿತನಾದ ರವಿ, ತನ್ನೊಂದಿಗೆ ಶೌಚಾಲಯಕ್ಕೆ ಸೂಟ್‌ಕೇಸ್ ಕೊಂಡೊಯ್ದರೆ ಯಾರಾದರೂ ಅಪಹರಿಸಬಹುದು ಎಂದು ಭಾವಿಸಿ ಪ್ರಸನ್ನ ಚಿತ್ರಮಂದಿರದ ಬಳಿ ಇರುವ ಪೊಲೀಸ್ ಚೌಕಿ ಪಕ್ಕದ ಪಾದಚಾರಿ ಮಾರ್ಗದಲ್ಲಿ ಸೂಟ್‌ಕೇಸ್ ಇಟ್ಟು ಸುಲಭ ಶೌಚಾಲಯಕ್ಕೆ ಹೋಗಿದ್ದಾನೆ.
ಆತಂಕಗೊಂಡ ಸಾರ್ವಜನಿಕರು: ಪಾದಚಾರಿ ಮಾರ್ಗದಲ್ಲಿ ಅಪರಿಚಿತ ಸೂಟ್‌ಕೇಸ್ ಕಂಡ ಸಾರ್ವಜನಿಕರು ಗಾಬರಿಗೊಂಡು ಕೂಡಲೇ ಪೊಲೀಸ್ ಸಹಾಯವಾಣಿ ಹಾಗೂ ಮಾಗಡಿ ರಸ್ತೆ ಠಾಣೆಗೆ ಕರೆ ಮಾಡಿ, ಯಾರು ಅಪರಿಚಿತರು ಮಾರ್ಗ ಮಧ್ಯೆ ಸೂಟ್‌ಕೇಸ್ ಇಟ್ಟಿದ್ದು, ಬಾಂಬ್ ಇಟ್ಟಿರುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಆತಂಕದಿಂದಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕೂಡಲೇ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳದೊಂದಿಗೆ ಪರಿಶೀಲಿಸಿದರು. ಆದರೆ, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಬಳಿಕ ನಿರಾಳರಾದ ಪೊಲೀಸರು, ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರಿಗೆ ಧೈರ್ಯ ಹೇಳಿ ಗುಂಪು ಚದುರಿಸಿದರು.
“ನನ್ನದೇ ಸೂಟ್‌ಕೇಸ್ ಸರ್’: ಈ ಬೆಳವಣಿಗೆಗಳ ನಡುವೆ ಸ್ಥಳಕ್ಕೆ ಬಂದ ರವಿ, ತಾನು ಸೂಟ್‌ಕೇಸ್ ಇಟ್ಟಿದ್ದ ಜಾಗದಲ್ಲಿ ಸೇರಿದ್ದ ಸಾರ್ವಜನಿಕರನ್ನು ಕಂಡ ಗಾಬರಿಗೊಂಡಿದ್ದಾನೆ. ಬಳಿಕ ಇಲ್ಲಿ ಇಟ್ಟಿದ್ದ ಸೂಟ್‌ಕೇಸ್ ಎಲ್ಲಿ? ಅದು ನನ್ನದೇ ಸೂಟ್‌ಕೇಸ್ ಸರ್‌ಎಂದಿದ್ದಾನೆ. ಅದರಿಂದ ಒಂದು ಕ್ಷಣ ಪೊಲೀಸರು ಹಾಗೂ ಸಾರ್ವಜನಿಕರು ಅಚ್ಚರಿಗೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ, ಸೂಟ್‌ಕೇಸ್ ಯಾಕೆ ಇಲ್ಲಿ ಇಟ್ಟಿದ್ದಿಯಾ? ಯಾರು ನೀನು? ಎಂದೆಲ್ಲ ಪ್ರಶ್ನಿಸಿದ್ದಾರೆ.
ಪ್ರತಿಕ್ರಿಯಿಸಿದ ರವಿ, ತಮಿಳುನಾಡಿನಿಂದ ಉದ್ಯೋಗ ಅರಸಿ ಬಂದಿದ್ದು, ಯಾವುದೇ ಕೆಲಸ ಸಿಗಲಿಲ್ಲ. ಶೌಚಾಲಯಕ್ಕೆ ಕೊಂಡೊಯ್ದರೆ, ಯಾರಾದರೂ ಸೂಟ್‌ಕೇಸ್ ಕಳವು ಮಾಡಬಹುದು ಎಂದು ಭಾವಿಸಿ, ಇಲ್ಲಿಯೇ ಇಟ್ಟಿದ್ದೆ. ಶೌಚಾಲಯದಲ್ಲಿ ಬಹಳಷ್ಟು ಮಂದಿ ಇದರಿಂದ ವಾಪಸ್ ಬರುವುದು ತಡವಾಯಿತು. ಅಷ್ಟರಲ್ಲಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ದಯವಿಟ್ಟು ಕ್ಷಮಿಸಿ ಎಂದು ಸ್ಥಳದಲ್ಲೇ ಮನವಿ ಮಾಡಿದ್ದಾನೆ.
ಅನಂತರ ಆತನ ಪೂರ್ವಾಪರ ವಿಚಾರಣೆ ಮಾಡಲು ಠಾಣೆಗೆ ಕರೆದೊಯ್ದು ಆತನ ಹಿನ್ನೆಲೆ ಪರಿಶೀಲಿಸಲಾಗಿದೆ. ಆತ ಅಮಾಯಕ ಎಂಬುದು ಗೊತ್ತಾಗಿದೆ. ಆತನ ಸಂಬಂಧಿಕರು ಬೆಂಗಳೂರಿನಲ್ಲಿದ್ದು, ಅವರ ಮೊಬೈಲ್ ನಂಬರ್ ಕೂಡ ಕೊಟ್ಟಿದ್ದಾನೆ. ಅವರನ್ನು ಸಂಪರ್ಕಿಸಿ, ಠಾಣೆಗೆ ಬರುವಂತೆ ಸೂಚಿಸಿದ್ದೇವೆ. ಅನಂತರ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿಕೊಡುತ್ತೇವೆ. ಸೂಟ್‌ಕೇಸ್ ತೆರೆದು ನೋಡಿದಾಗ ಅದರಲ್ಲಿ ರವಿಗೆ ಸಂಬಂಧಿಸಿದ ಬಟ್ಟೆ ಹಾಗೂ ಇತರೆ ವಸ್ತುಗಳು ಸಿಕ್ಕಿವೆ. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.