ಬಗೆಹರಿದ ಬೊಮ್ಮನಹಳ್ಳಿ ಟಿಕೆಟ್‌ ಅವಾಂತರ

Team Udayavani, Apr 24, 2018, 3:46 PM IST

bageharida.jpg

ಬೆಂಗಳೂರು: ಹುಟ್ಟೂರು ತುಮಕೂರು ಜಿಲ್ಲೆ ತುರುವೇಕೆರೆಯಿಂದ ಕಾಂಗ್ರೆಸ್‌ ಟಿಕೆಟ್‌ ಸಿಗದೆ ನಿರಾಶರಾಗಿದ್ದ ಚಿತ್ರ ನಿರ್ಮಾಪಕ ಕೆ.ಮಂಜು ಜೆಡಿಎಸ್‌ ಸೇರಿದ್ದು, ಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಕೆ.ಮಂಜು ಅವರನ್ನು ಸೋಮವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸುದೀರ್ಘ‌ ಸಮಾಲೋಚನೆ ನಡೆಸಿದ್ದು, ಈ ವೇಳೆ ಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆ.ಮಂಜು ಅವರನ್ನು ಒಪ್ಪಿಸಿದ್ದಾರೆ. ಜತೆಗೆ ಪಕ್ಷದ ಬಿ ಫಾರಂ ಅನ್ನೂ ಮಂಜು ಅವರಿಗೆ ಹಸ್ತಾಂತರಿಸಿದ್ದಾರೆ. ಮಂಗಳವಾರ ಅವರು ಬೊಮ್ಮನಹಳ್ಳಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತುರುವೇಕೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದ ಕೆ.ಮಂಜು ಅವರು ಕಳೆದ ಒಂದು ವರ್ಷದಿಂದ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದರು. ಅಲ್ಲದೆ, ಕ್ಷೇತ್ರದಲ್ಲೂ ಸಂಘಟನೆ ವಿಚಾರದಲ್ಲಿ ಕೆಲಸ ಮಾಡಿದ್ದರು. ಆದರೆ, ಕಾಂಗ್ರೆಸ್‌ ಅಲ್ಲಿ ಬೇರೆಯವರಿಗೆ ಟಿಕೆಟ್‌ ನೀಡಿದ್ದರಿಂದ ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಕೆ.ಮಂಜು ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ ದೇವೇಗೌಡರು ಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗುವಂತೆ ಕೋರಿದರು. ಇದಕ್ಕೆ ಮಂಜು ಅವರು ಒಪ್ಪಿಗೆ ನೀಡಿದರು ಎನ್ನಲಾಗಿದೆ.

ಸ್ವಾಮೀಜಿಗೆ ಟಿಕೆಟ್‌- ಬಗೆಹರಿದ ಗೊಂದಲ: ಈ ಬೆಳವಣಿಗೆಯಿಂದಾಗಿ ಬೊಮ್ಮನಹಳ್ಳಿಯಿಂದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಬೊಮ್ಮನಹಳ್ಳಿ ಕ್ಷೇತ್ರದಿಂದ ಟಿಕೆಟ್‌ ನೀಡುವ ಕುರಿತಂತೆ ಇದ್ದ ಸಮಸ್ಯೆಯೂ ಬಗೆಹರಿದಂತಾಗಿದೆ. ಇತ್ತೀಚೆಗೆ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಮತ್ತಿತರರು ಕೆಂಗೇರಿಯ ಮಠಕ್ಕೆ ಭೇಟಿನೀಡಿ ಜೆಡಿಎಸ್‌ನಿಂದ ಸ್ಪರ್ಧಿಸುವ ಕುರಿತು ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಸ್ವಾಮೀಜಿಯವರೂ ಆಸಕ್ತಿ ತೋರಿಸಿದ್ದರು.

ಆದರೆ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರಿಗೆ ಟಿಕೆಟ್‌ ನೀಡಿದರೆ ಆದಿಚುಂಚನಗಿರಿ ಪೀಠದ ಭಕ್ತರು ಅಸಮಾಧಾನಗೊಳ್ಳಬಹುದು ಎಂಬ ಕಾರಣಕ್ಕೆ ಜೆಡಿಎಸ್‌ ವರಿಷ್ಠ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಗೊಂದಲಕ್ಕೆ ಸಿಲುಕಿದ್ದರು. ಈ ಕಾರಣಕ್ಕಾಗಿಯೇ ಕೆ.ಮಂಜು ಅವರನ್ನು ಕರೆಸಿ ದೇವೇಗೌಡರು ಚರ್ಚಿಸಿದ್ದರು. ಮಂಜು ಒಪ್ಪಿದ್ದರಿಂದ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಅಭ್ಯರ್ಥಿಯೂ ಸಿಕ್ಕಿದಂತಾಗಿದೆ. ಸ್ವಾಮೀಜಿಯವರನ್ನು ಚುನಾವಣಾ ಕಣಕ್ಕಿಳಿಸುವುದರಿಂದ ಉಂಟಾಗುವ ಗೊಂದಲಕ್ಕೂ ತೆರೆ ಎಳೆದಿದ್ದಾರೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

BJP FLAG

BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!

Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

bantwal news

Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ

Udupi: ಕೆಲಸ ಕಾರ್ಯಗಳಿಗೆ ಕಚೇರಿಗೆ ಸಾರ್ವಜನಿಕರು ಬಂದಾಗ ಸ್ಪಂದಿಸಿ: ಸಚಿವೆ ಹೆಬ್ಬಾಳಕರ್

Udupi: ಕೆಲಸ ಕಾರ್ಯಗಳಿಗೆ ಕಚೇರಿಗೆ ಸಾರ್ವಜನಿಕರು ಬಂದಾಗ ಸ್ಪಂದಿಸಿ: ಸಚಿವೆ ಹೆಬ್ಬಾಳಕರ್

Scissor: ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟ ವೈದ್ಯ, ವಿಚಾರ ಗೊತ್ತಾಗಿದ್ದು 2 ವರ್ಷದ ಬಳಿಕ

Scissor: ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟ ವೈದ್ಯ, ವಿಚಾರ ಗೊತ್ತಾಗಿದ್ದು 2 ವರ್ಷದ ಬಳಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆ- ಮಕ್ಕಳ ಆರೋಗ್ಯದ ಚಿಕಿತ್ಸೆಯನ್ನು ಸೇವೆ ಎಂಬಂತೆ ಮಾಡಬೇಕು: ಮಾಜಿ ಸಚಿವ ಅರವಿಂದ ಲಿಂಬಾವಳಿ

ಮಹಿಳೆ- ಮಕ್ಕಳ ಆರೋಗ್ಯದ ಚಿಕಿತ್ಸೆಯನ್ನು ಸೇವೆ ಎಂಬಂತೆ ಮಾಡಬೇಕು: ಅರವಿಂದ ಲಿಂಬಾವಳಿ

8-cubbon-park-3

Bengaluru: ಕಬ್ಬನ್‌ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶನ

7-wedding

Wedding Story: ಕಂಕಣ ಕಾಲ-3: ವಿವಾಹ ಭೋಜನವಿದು.. ನಾರ್ತ್‌ ಭಕ್ಷ್ಯಗಳಿವು…

6-bng

Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ

BJP FLAG

BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!

Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

bantwal news

Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.