ಧರ್ಮದಿಂದ ಅಜ್ಞಾನ ತೊಲಗಿಸಿ
Team Udayavani, Mar 7, 2020, 11:04 AM IST
ಬೆಂಗಳೂರು: ಧರ್ಮದಿಂದ ಮಾತ್ರ ಅಜ್ಞಾನ ತೊಲಗಿಸಲು ಸಾಧ್ಯವಿದ್ದು ಧರ್ಮ ವೈಜ್ಞಾನಿಕವಲ್ಲ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಪಂಡಿತ ರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್ ಶುಕ್ರವಾರ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಪ್ರೊ.ಕೆ.ಈ.ರಾಧಾಕೃಷ್ಣ ಅವರು ರಚಿಸಿರುವ “ಮಹಾಪುರಾಣ’ ಗ್ರಂಥ ಲೋಕಾರ್ಪಣೆಯಲ್ಲಿ ಮಾತನಾಡಿದರು. ಅಜ್ಞಾನದ ಮೇಲೆ ವಿಜ್ಞಾನ ದಾಳಿ ಮಾಡುವಷ್ಟು ಧರ್ಮವು ಮಾಡಿಲ್ಲ. ಹೀಗಾಗಿ ವಿಜ್ಞಾನದಿಂದ ಮಾತ್ರ ಅಜ್ಞಾನ ಕಳೆಯಲು ಸಾಧ್ಯ ಎಂಬ ಭ್ರಮೆಯಿಂದ ಜನ ಹೊರಬರ ಬೇಕೆಂದರು. ಮಹಾಪುರಾಣ ವಿಶ್ವಮಾನ್ಯ ಗ್ರಂಥ. ಇದನ್ನು ಜೈನ ಧರ್ಮಿಯರ ಸಂಪತ್ತು ಎಂದು ತಿಳಿದುಕೊಳ್ಳುವುದರ ಬದಲು ಕೊಡುಗೆ ಎಂದು ತಿಳಿದುಕೊಳ್ಳಬೇಕು. ಸಂಪತ್ತು ಕಪಾಟುಗಳಲ್ಲಿ ಇರುತ್ತೆ, ಜ್ಞಾನ ಪಸರುತ್ತದೆ. ಈ ಗ್ರಂಥವನ್ನು ಪ್ರೊ.ಕೆ.ಈ.ರಾಧಾಕೃಷ್ಣ ಅವರು ಕನ್ನಡದಿಂದ ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದು, ವಿಶ್ವದ ಯಾವುದೇ ವ್ಯಕ್ತಿ ಓದಲು ಅನುಕೂಲ. ಇದು ದೇಶದ ಎಲ್ಲಾ ಖ್ಯಾತ ವಿಶ್ವವಿದ್ಯಾಲಯ, ಗ್ರಂಥಾಲಯಗಳಲ್ಲಿ ಲಭ್ಯವಾಗಬೇಕೆಂದರು. ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಜೈನ ಧರ್ಮಕ್ಕೆ ರೂಪ ಕೊಡಲು ಅಗತ್ಯ ಗ್ರಂಥವನ್ನು ಸಂಸ್ಕೃತದಿಂದ ಕನ್ನಡಕ್ಕೆ ಪಂಡಿತ ರತ್ನ ಎ.ಶಾಂತಿರಾಜಶಾಸ್ತ್ರಿಗಳು ತಂದರು.
ಇದೀಗ ಅಂತಾರಾಷ್ಟ್ರಮಟ್ಟದಲ್ಲಿ ಗ್ರಂಥದ ಅಂಶ ಲಭ್ಯವಾಗಲು ಇಂಗ್ಲಿಷ್‌ಗೆ ಅನುವಾದಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಜಿನಸೇನ ಗುಣಭದ್ರಾಚಾರ್ಯರು ಹಾಗೂ ಪಂಡಿತ ರತ್ನ ಎ. ಶಾಂತಿ ರಾಜಶಾಸ್ತ್ರಿಗಳ ಭಾವಚಿತ್ರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು. ಶ್ರವಣಬೆಳಗೊಳದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮಿ, ಮುನಿಶ್ರೀ ಕಮಲಕುಮಾರಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಮತ್ತು ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಗ್ರಂಥ ಅನುವಾದಕ ಪ್ರೊ.ಕೆ.ಈ.ರಾಧಾಕೃಷ್ಣ, ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಜಿ.ಪಿ.ನಾಗೇಂದ್ರ ಪ್ರಸಾದ್ ಮತ್ತಿತರರಿದ್ದರು.
ಲೌಕಿಕ ಜೀವನಕ್ಕೆ ಜ್ಞಾನ ಸಂಪಾದನೆ ಮುಖ್ಯ : ಲೌಕಿಕ ಜೀವನಕ್ಕೆ ಜ್ಞಾನ ಸಂಪಾದನೆ ಮುಖ್ಯ. ಅಂತಹ ಜ್ಞಾನ ಸಂಗ್ರಹಿಸಲು “ಮಹಾಪುರಾಣ’ ಸಹಕಾರಿ. ಶಾಸ್ತ್ರ, ಪುರಾಣ ಓದುವುದರಿಂದ ಕೇವಲ ಸ್ವರ್ಗ, ಮೋಕ್ಷ ಪ್ರಾಪ್ತಿ ಲಭಿಸುವುದರ ಜತೆಗೆ ಬದುಕಿದ್ದಾಗಲೂ ಸಾಂಸಾರಿಕ ಸ್ವರ್ಗ ಸುಖ ಕಾಣಲು ನೆರವಾಗುತ್ತದೆ. ಜತೆಗೆ ರಾಜಕೀಯ ಆಡಳಿತಕ್ಕೆ, ಆರ್ಥಿಕ ತಜ್ಞರಿಗೆ ಹಾಗೂ ವಿಜ್ಞಾನಿಗಳಿಗೆ ಬೇಕಾದ ಅಗತ್ಯ ಅಂಶ ಈ ಗ್ರಂಥ ಒದಗಿಸಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.