ಬೋರ್‌ಗಳಲ್ಲಿ ನೀರಿದೆ, ಆದರೆ…

Team Udayavani, Apr 11, 2017, 12:43 PM IST

borewell.jpg

ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯ ಗಳಲ್ಲಿ ಬೆಂಗಳೂರಿಗೆ ಸಾಕಾಗುಷ್ಟು ನೀರಿನ ಸಂಗ್ರಹವಿಲ್ಲ. ಹೀಗಾಗಿ ಸಾರ್ವಜನಿಕ ಕೊಳವೆಬಾವಿಗಳ ಮೂಲಕವಾದರೂ ನೀರು ಪೂರೈಸಿ ಸದ್ಯದ ವಿಷಮ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶ ಹೊಂದಿದ್ದ ಜಲಮಂಡಳಿ ಮತ್ತು ಬಿಬಿಎಂಪಿಗೆ ಹೊಸ ತಲೆನೋವು ಕಾಣಿಸಿಕೊಂಡಿದೆ. 

ಹೌದು, ಬೆಂಗಳೂರಿನಾದ್ಯಂತ ಜಲ ಮಂಡಳಿ ಮತ್ತು ಬಿಬಿಎಂಪಿಯ ಒಟ್ಟಾರೆ 12,986 ಬೋರ್‌ವೆಲ್‌ಗ‌ಳು ಸುಸ್ಥಿತಿಯ ಲ್ಲಿದ್ದು ಈ ಪೈಕಿ 850ರಲ್ಲಿ ಮಾತ್ರ ಕುಡಿಯಲು ಯೋಗ್ಯವಾದ ನೀರು ಲಭ್ಯವಾಗುತ್ತಿದೆ. ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಮಂಡನೆ ಯಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಕೊಳವೆಬಾವಿ ಅವಲಂಬಿತ ಪ್ರದೇಶಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅನಿ ವಾರ್ಯತೆ ಎದುರಾಗಿದೆ. 

ಹೊರೆ ಹೇಗೆ?: ಸದ್ಯ 12,8986 ಈ ಕೊಳವೆ ಬಾವಿಗಳಿಂದ ನಗರದ 40ರಿಂದ 50 ಸಾವಿರ ಕುಟುಂಬಗಳಿಗೆ ನೀರು ಪೂರೈಕೆ ಆಗುತ್ತಿದ್ದು, ಅದರ ಪ್ರಮಾಣ ಸರಿಸುಮಾರು ನಿತ್ಯ 4ರಿಂದ 5 ಲಕ್ಷ ಲೀಟರ್‌. ಅಷ್ಟು ಪ್ರಮಾಣದ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದಾದರೆ, ಅಷ್ಟೇ ಪ್ರಮಾಣದ ಶುದ್ಧ ನೀರನ್ನು ಬೇರೆ ಮೂಲಗಳಿಂದ ಹೊಂದಿಸಿ ತರಬೇಕಾದ ಹೊರೆ ಜಲಮಂಡಳಿ ಮತ್ತು ಬಿಬಿಎಂಪಿ ಮೇಲೆ ಬಿದ್ದಂತಾಗಿದೆ.

ಒಂದೆಡೆ ನೀರಿನ ಲಭ್ಯತೆಯೇ ಕಡಿಮೆ ಇದೆ. ಮತ್ತೂಂದೆಡೆ ಇದ್ದ ನೀರು ಕುಡಿಯು ವಂತಿಲ್ಲ. ಇದರಿಂದ ಮತ್ತಷ್ಟು ಒತ್ತಡಕ್ಕೆ ಸಿಲುಕಿದಂತಾಗಿದೆ ಎಂದು ಜಲಮಂಡಳಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊಳವೆಬಾವಿಗಳ ನೀರನ್ನು ಬಳಸದೆ ವಿಧಿ ಇಲ್ಲ. ಅದು ಕುಡಿ ಯಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ.

ಹೀಗಾಗಿ ಕುಡಿಯಲು ಹೊರತುಪಡಿಸಿ, ಇನ್ನಿತರ ಚಟುವಟಿಕೆಗಳಿಗೆ ಉಪಯೋಗಿಸ ಬಹುದಾಗಿದೆ. ಆದ್ದರಿಂದ ವಿಜಯನಗರ, ಚಾಮರಾಜಪೇಟೆ, ಕಾಮಾಕ್ಷಿಪಾಳ್ಯ ಸೇರಿ ದಂತೆ ನಾನಾ ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ 200ಕ್ಕೂ ಹೆಚ್ಚು ಕೊಳವೆಬಾವಿಗಳ ಮುಂದೆ “ಕುಡಿಯಲು ಬಳಸಬಾರದು’ ಎಂದು ಫ‌ಲಕಗಳನ್ನು ಹಾಕಲಾಗಿದೆ. ಆದರೂ ಜನ ಈ ಫ‌ಲಕಗಳನ್ನು ತೆಗೆದುಹಾಕಿ, ಎಲ್ಲದಕ್ಕೂ ನೀರನ್ನು ಉಪಯೋಗಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಫ್ಲೋರೈಡ್‌ ಅಂಶ ನಾಶಕ್ಕೆ ಕೆಮಿಕಲ್‌: ಫ‌ಲಕಗಳ ಅಳವಡಿಕೆ ಜತೆಗೆ ಫ್ಲೋರೈಡ್‌ ಅಂಶ ಕಂಡುಬಂದ ಕೊಳವೆಬಾವಿಗಳಿಗೆ ಸೋಡಿಯಂ ಹೈಪೋಕ್ಲೋರೈಟ್‌ ಸೇರಿಸುವ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ 15ಕ್ಕೂ ಹೆಚ್ಚು ಕಡೆಗಳಲ್ಲಿ ಈ ಘಟಕಗಳನ್ನು ತೆರೆಯಲಾಗಿದೆ. ಈ ಅಂಶವನ್ನು ಸೇರ್ಪಡೆ ಮಾಡುವುದರಿಂದ ನೀರನ್ನು ಕುಡಿಯಲಿಕ್ಕೂ ಬಳಸಬಹುದಾಗಿದೆ. ಆದರೆ, ಸಿಬ್ಬಂದಿ ಕೊರತೆ ಇರುವುದರಿಂದ ಪ್ರತಿ ಬೋರ್‌ವೆಲ್‌ಗೆ ಇದು ಕಷ್ಟಸಾಧ್ಯ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಆರ್‌. ಮಂಜುನಾಥ್‌ ತಿಳಿಸುತ್ತಾರೆ. 

ಸಾಮಾನ್ಯವಾಗಿ ಬಡವರು ವಾಸವಿರುವ ಪ್ರದೇಶಗಳಲ್ಲಿ ಈ ಕೊಳವೆಬಾವಿಗಳಿವೆ. ಅಲ್ಲೆಲ್ಲಾ ಒಂದು ದಿನ ಕಾವೇರಿ ಮತ್ತೂಂದು ದಿನ ಕೊಳವೆಬಾವಿ ನೀರು ಪೂರೈಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ. ಅಲ್ಲದೆ, ಕೆಲವೆಡೆ ಶುದ್ಧಕುಡಿಯುವ ನೀರಿನ ಘಟಕಗಳಿರುವುದರಿಂದ ಇದು ಗಂಭೀರ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. 

ಫ್ಲೋರೈಡ್‌ ಇದ್ದಲ್ಲಿ ಟ್ಯಾಂಕರ್‌ ನೀರು: ಅದೇ ರೀತಿ, ಪಾಲಿಕೆಗೆ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಕೊಳವೆಬಾವಿಗಳೊಂದೇ ನೀರಿನ ಮೂಲ. ಈ ಭಾಗಗಳಲ್ಲಿ ಗುರುತಿಸಲಾಗಿರುವ ಆಯ್ದ ಕೊಳವೆ ಬಾವಿಗಳಿಂದ ಕುಡಿಯುವ ಉದ್ದೇಶಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ. ಗುಣಮಟ್ಟ  ಖಾತ್ರಿಪಡಿಸಿಕೊಂಡ ನಂತರವೇ ಜನರಿಗೆ ಒದಗಿಸಲಾಗುತ್ತಿದೆ. ಒಂದು ವೇಳೆ ಫ್ಲೋರೈಡ್‌ಯುಕ್ತ ನೀರು ಎಂಬುದು ಕಂಡುಬಂದರೆ, ತಕ್ಷಣ ಸ್ಥಗಿತಗೊಳಿಸಬೇಕು. ಅಂತಹ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲು ಸೂಚಿಸಲಾಗಿದೆ.

ಸದ್ಯಕ್ಕಂತೂ ಹೊರೆಯಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಸಮಜಾಯಿಷಿ ನೀಡುತ್ತಾರೆ. ಈ ಮಧ್ಯೆ ಪಾಲಿಕೆ ಸದಸ್ಯರ ಬಳಿ ತಲಾ 40 ಲಕ್ಷ ಅನುದಾನ ಇದೆ. ಅನಿವಾರ್ಯತೆ ಇರುವ ಕಡೆ ಬೋರ್‌ವೆಲ್‌ ಕೊರೆಯಲಿಕ್ಕೂ ಸೂಚನೆ ನೀಡಲಾಗಿದೆ. ಇದಲ್ಲದೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನೂ ನಿರ್ಮಿಸಲಾಗಿದೆ. ಈ ಮೂಲಕ ಹೊರೆ ಯನ್ನು ನಿಭಾಯಿಸಲಾಗುತ್ತಿದೆ ಎಂದು ಅವರು ತಿಳಿಸುತ್ತಾರೆ. 

ಹೊರೆ ಆಗದು: ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ ವರದಿಯಲ್ಲಿ ಎಲ್ಲ ಕೊಳವೆಬಾವಿಗಳೂ ಫ್ಲೋರೈಡ್‌ನಿಂದ ಕೂಡಿವೆ ಎಂದು ಹೇಳಿಲ್ಲ. ಕೆಲ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಹೇಳಿದೆ. ಹಾಗಾಗಿ, ಉಳಿದ ಉದ್ದೇಶಗಳಿಗೆ ಈ ನೀರನ್ನು ಬಳಸಬಹುದಾಗಿದೆ. ಇನ್ನು ಕುಡಿಯಲಿಕ್ಕೆ ಕಾವೇರಿ ನೀರು ಒದಗಿಸಲಾಗುವುದು. ಈ ಹಿನ್ನೆಲೆಯಲ್ಲಿ ಹೊರೆಯಾಗುವುದಿಲ್ಲ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ವಿಶ್ವಾಸ ವ್ಯಕ್ತಪಡಿಸುತ್ತಾರೆ. 

* ವಿಜಯಕುಮಾರ್‌ ಚಂದರಗಿ 

ಟಾಪ್ ನ್ಯೂಸ್

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.