ಪ್ರಿಯಕರ ಕೊಲೆ: ನೊಂದ ಪ್ರಿಯತಮೆ ಆತ್ಮಹತ್ಯೆ
Team Udayavani, Jan 6, 2017, 11:30 AM IST
ಬೆಂಗಳೂರು: ಇತ್ತೀಚೆಗೆ ತನ್ನ ಪ್ರಿಯಕರ ಕೊಲೆಯಾಗಿದ್ದರಿಂದ ನೊಂದಿದ್ದ ಯುವತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಸರ್ಕಲ್ನ ಶಂಕರಮಠ ಬಳಿ ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಗಚುಕುಪ್ಪೆ ಗ್ರಾಮದ ಉಮಾದೇವಿ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಹೆಗ್ಗನಹಳ್ಳಿಯ ಗ್ಯಾಸ್ ಏಜೆನ್ಸಿ ಮಾಲೀಕ ಪುನೀತ್ ನಾಯಕ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಕಳೆದ ಡಿಸೆಂಬರ್ 25ರಂದು ದುಷ್ಕರ್ಮಿಗಳ ತಂಡ ಹಣಕಾಸಿನ ವಿಚಾರವಾಗಿ ಶಂಕರಮಠದ ಬಳಿ ಪುನೀತ್ ನಾಯಕ್ನನ್ನು ಹತ್ಯೆ ಮಾಡಿತ್ತು. ಪ್ರಿಯಕರನ ಸಾವಿನಿಂದ ನೊಂದಿದ್ದ ಉಮಾದೇವಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ಊರಿನವರು: ಪುನೀತ್ ನಾಯಕ್ ಮತ್ತು ಉಮಾದೇವಿ ಒಂದೇ ಗ್ರಾಮದವರಾಗಿದ್ದು, ಅಕ್ಕಪಕ್ಕದ ನಿವಾಸಿಗಳಾಗಿದ್ದರು. ಚಿಕ್ಕಂದಿನಿಂದಲೇ ಇವರಿಬ್ಬರಿಗೆ ಪರಿಚಯವಿದ್ದು, ಕ್ರಮೇಣ ಅದು ಪ್ರೀತಿಗೆ ತಿರುಗಿತ್ತು. ಈ ವಿಚಾರ ತಿಳಿದ ಪೋಷಕರು ವಿರೋಧಿಸಿದ್ದರಲ್ಲದೆ, ಇಬ್ಬರಿಗೂ ಬುದ್ಧಿ ಹೇಳಿದ್ದರು. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಪುನೀತ್, ಹೆಗ್ಗನಹಳ್ಳಿಯಲ್ಲಿ ಗ್ಯಾಸ್ ಏಜೆನ್ಸಿ ಆರಂಭಿಸಿದ್ದ. ಅಲ್ಲದೆ, ಮೋದಿ ವೃತ್ತದ ಬಳಿ ಮನೆ ಮಾಡಿದ್ದ.
ಬಿಕಾಂ ಪದವಿ ಮುಗಿಸಿದ್ದ ಉಮಾದೇವಿ ಎಂಕಾಂ ವ್ಯಾಸಂಗಕ್ಕಾಗಿ ನಗರದ ಖಾಸಗಿ ಕಾಲೇಜಿಗೆ ಪ್ರವೇಶ ಪಡೆದಿದ್ದಳು. ಕಾಲೇಜು ಸೇರಿದ ಬಳಿಕ ತನ್ನ ಸ್ನೇಹಿತೆ ಜತೆ ನೆಲೆಸಿರುವುದಾಗಿ ಮನೆಯಲ್ಲಿ ತಿಳಿಸಿದ್ದ ಉಮಾದೇವಿ, ತನ್ನ ಪ್ರಿಯಕರ ಪುನೀತ್ನೊಂದಿಗೆ ಮೋದಿ ವೃತ್ತದ ಬಳಿಯ ಮನೆಯಲ್ಲಿಯೇ ಇದ್ದಳು. ಇಬ್ಬರೂ ದಂಪತಿಯಂತೆ ವಾಸವಿದ್ದರು ಎಂದು ಸ್ಥಳೀಯರು ತಿಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆಗಾಗ್ಗೆ ಊರಿಗೆ ಹೋಗಿ ಬರುತ್ತಿದ್ದ ಮಗಳನ್ನು ನಂಬಿದ್ದ ಪೋಷಕರು ಆಕೆಯ ವಾಸ್ತವ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಇತ್ತೀಚೆಗೆ ಉಮಾದೇವಿ ತನ್ನ ಊರಿಗೆ ಹೋಗಿದ್ದು, ಅದೇ ಸಂದರ್ಭದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪುನೀತ್ನನ್ನು ಆತನ ಪರಿಚಯಸ್ಥರೇ ಡಿಸೆಂಬರ್ 25ರಂದು ಹತ್ಯೆ ಮಾಡಿದ್ದರು. ಇದರಿಂದ ನೊಂದಿದ್ದ ಉಮಾದೇವಿ ಕಾಲೇಜಿಗೆ ಹೋಗುವುದಾಗಿ ಹೇಳಿ ಊರಿನಿಂದ ಬಂದು ಪುನೀತನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪುನೀತ್ ಹತ್ಯೆಯಾಗಿದ್ದರಿಂದ ಆತ ವಾಸವಿದ್ದ ಮನೆ ಖಾಲಿಮಾಡಿಕೊಂಡು ಹೋಗಲು ಆತನ ಪೋಷಕರು ಬುಧವಾರ ನಗರಕ್ಕೆ ಬಂದಿದ್ದು, ಮನೆಯ ಬಾಗಿಲು ಬಳಿ ಹೋಗುತ್ತಿದ್ದಂತೆ ಒಳಗಡೆಯಿಂದ ದುರ್ವಾಸನೆ ಬಂದಿದೆ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಮೂರ್ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ನಡೆದಿರುವ ಶಂಕೆಯಿದ್ದು, ದೇಹ ಕೊಳೆತ ಸ್ಥಿತಿಯಲ್ಲಿತ್ತು. ಆತ್ಮಹತ್ಯೆಗೂ ಮುನ್ನ ಯುವತಿ ಡೆತ್ನೋಟ್ ಬರೆದಿಟ್ಟಿದ್ದು, “ಪ್ರಿಯಕರ ಪುನೀತ್ ಸಾವಿನಿಂದ ನೋವಾಗಿದೆ. ಪುನೀತ್ ಇಲ್ಲದೆ ಬದುಕಲು ಬೇಜಾರಿಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.