ಮೇಲ್ಸೇತುವೆ, ಅಂಡರ್‌ಪಾಸ್ ಪರಿಶೀಲನೆ ಚುರುಕು
Team Udayavani, Feb 20, 2022, 8:31 AM IST
ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್ ಶಿಥಿಲಗೊಂಡಿರುವುದು ಬೆಳಕಿಗೆ ಬಂದಬೆನ್ನಲ್ಲೇ ನಗರದ ಇತರೆ ಮೇಲ್ಸೇತುವೆಗಳು ಹಾಗೂಅಂಡರ್‌ಪಾಸ್‌ಗಳ ಪರಿಶೀಲನೆಗೆ ಸ್ಥಳೀಯ ಸಂಸ್ಥೆಗಳು ಮುಂದಾಗಿವೆ.
ತುಮಕೂರು ಮೇಲ್ಸೇತುವೆ ಮೇಲೆ ವಾಹನ ಸಂಚಾರ ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತವಾಗಿದೆ.ಈ ಮಧ್ಯೆ ಗೊರಗುಂಟೆಪಾಳ್ಯದ ಎಂಇಎಸ್ ಮೇಲ್ಸೇತುವೆ ಹಾಗೂ ಜಾಲಹಳ್ಳಿ ಬಳಿಯ ಐಒಸಿ ಜಂಕ್ಷನ್‌ನಲ್ಲಿಯ ಮೇಲ್ಸೇತುವೆಯಲ್ಲಿ ತಾಂತ್ರಿಕಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ಇದರ ಪರಿಣಾಮ ಬೆಂಗಳೂರಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಇದನ್ನು ಹೋಗಲಾಡಿಸುವ ಪ್ರಯತ್ನ ವಾಗಿಯೋ ಅಥವಾ ಮೇಲ್ಸೇತುವೆಗಳವಸ್ತು ಸ್ಥಿತಿ ತಿಳಿಯಲೆಂದೋ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರುಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧಸ್ಥಳೀಯ ಸಂಸ್ಥೆಗಳು ತಮ್ಮ ಸುಪರ್ದಿಯಲ್ಲಿಬರುವ ಎತ್ತರಿಸಿದ ರಸ್ತೆಗಳ ಪರಿಶೀಲನಾ ಕಾರ್ಯವನ್ನು ಸದ್ದಿಲ್ಲದೆ ಚುರುಕುಗೊಳಿಸಿವೆ. ತುಮಕೂರು ರಸ್ತೆಯ ಫ್ಲೈಓವರ್‌ನಲ್ಲಿ ದೋಷ ಕಂಡುಬಂದಿದ್ದರಿಂದ ಪರಿಶೀಲನೆ ನಡೆಸುವುದಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 42 ಮೇಲ್ಸೇತುವೆ ಮತ್ತು 24 ಅಂಡರ್‌ಪಾಸ್‌ಗಳಿದ್ದು, ಇವುಗಳನ್ನುನಿಯಮಿತ ವಾಗಿ ಪರಿಶೀಲನೆ ನಡೆಯುತ್ತಲೇ ಇರುತ್ತದೆ ಹಾಗೂ ಈಗಲೂ ನಡೆದಿದೆ. ಅಲ್ಲದೆ, ಸಾರ್ವಜನಿಕರಿಂದ ದೂರು ಗಳು ಬಂದ ವೇಳೆಯೂ ಪರಿಶೀಲನೆ ನಡೆಸಲಾಗುತ್ತದೆ. ನಾಗರಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ನಿರಾತಂಕವಾಗಿ ವಾಹನಗಳಲ್ಲಿ ಸಂಚರಿಸಬಹುದು ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಭರವಸೆ ನೀಡಿದ್ದಾರೆ.
ಯಾವುದೇ ಸೇತುವೆ, ಮೇಲ್ಸೇತುವೆ, ಅಂಡರ್ ಪಾಸ್‌ಗಳನ್ನು ವರ್ಷಕ್ಕೆ ಕನಿಷ್ಠ ಒಂದು ಬಾರಿ ತಾಂತ್ರಿಕವಾಗಿ ಪರಿಶೀಲನೆಗೆ ಒಳಪಡಿಸಬೇಕು. ಆದರೆ, ತುಮಕೂರು ಮೇಲ್ಸೇತುವೆ ನಿರ್ಮಾಣವಾಗಿ 10 ವರ್ಷ ಕಳೆದರೂ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ನಿರ್ವಹಣೆ ವಿಚಾರದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಗಳು ಕೂಡ ನಿರ್ಲಕ್ಷ್ಯ ಮಾಡುತ್ತಿವೆ. ಆಗಾಗ್ಗೆ ಪರಿಶೀಲನೆಗೆ ಒಳಪಡಿಸುವ ಅಥವಾ ಮೇಲ್ಸೇತುವೆ ನಿರ್ಮಿಸಿದ ಕಂಪನಿ ಗಳಿಂದ ನಿರ್ವಹಣೆಮಾಡಿಸುವ ಕೆಲಸ ಮಾಡದಿರುವುದೇ ಶಿಥಿಲಗೊಳ್ಳಲು ಕಾರಣ ಎಂದು ರಸ್ತೆ ಸಂಚಾರ ತಜ್ಞ ಎಂ.ಎನ್.ಶ್ರೀಹರಿ ಆರೋಪಿಸಿದರು.
“ಮೇಲ್ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರಂಭದಿಂದಲೂ ಹೇಳುತ್ತಿದ್ದೇನೆ. ಆದರೆ, ಸಂಬಂಧಪಟ್ಟ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಕಳಪೆ ಕಾಮಗಾರಿಯಿಂದ ಸಂಭವಿಸುವ ಸಾವು-ನೋವುಗಳಿಗೆಯಾರು ಹೊಣೆ. ಆದ್ದರಿಂದ ಆದ್ದರಿಂದ ಮೇಲ್ಸೇತುವೆ ಗಳ ಭದ್ರತೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನಗಳು ಯಾವುದೇ ಆಗಿರಲಿ. ಆದರೆ, ನಿರ್ವಹಣೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯ ಸಿರ್ಸಿ ಫ್ಲೈಓವರ್, ಸುಮ್ಮನಹಳ್ಳಿ ಮೇಲ್ಸೇತುವೆ ಸೇರಿದಂತೆ ಹಲವು ಮೇಲ್ಸೇತುವೆಗಳು ದುರಸ್ತಿಯಾಗಿವೆ. ಈ ಸೇತುವೆಗಳನ್ನು ನಿರ್ಮಿಸಿರುವ ಕಂಪನಿಗಳ ಮೇಲೆ ಯಾವುದೇ ಕ್ರಮ ಜರುಗಿಸದೆ ಸರ್ಕಾರವೇ ಕಳಪೆ ಕಾಮಗಾರಿಗಳಿಗೆ ಬೆಂಬಲ ನೀಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಜಾಲಹಳ್ಳಿ ರೈಲ್ವೆ ಸೇತುವೆ ಶಿಥಿಲ ನಗರ ವ್ಯಾಪ್ತಿಯಲ್ಲಿರುವ ಯಾವುದೇ ಸೇತುವೆಗಳು ಶಿಥಿಲಗೊಂಡಿಲ್ಲ. ಆದರೆ, ಗೊರಗುಂಟೆಪಾಳ್ಯದ ಎಂಇಎಸ್ ಮೇಲ್ಸೇತುವೆ ಮತ್ತು ಜಾಲಹಳ್ಳಿಯ ಐಒಸಿ ಜಂಕ್ಷನ್‌ನಲ್ಲಿ ರೈಲ್ವೆ ಇಲಾಖೆ ನಿರ್ಮಿಸಿರುವ ಮೇಲ್ಸೇತುವೆ ಯಲ್ಲಿ ತಾಂತ್ರಿಕವಾಗಿ ಕೆಲವು ಸಮಸ್ಯೆಗಳಿವೆ. ಈ ಸಂಬಂಧ ರೈಲ್ವೆ ಇಲಾಖೆ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಮೂಲಸೌಕರ್ಯ) ಪ್ರಹ್ಲಾದ್ ತಿಳಿಸಿದರು.
ದಶಪಥಕ್ಕೂ ಇದೇ ಮಾದರಿ ಸೇತುವೆ? : ತುಮಕೂರು ಮೇಲ್ಸೇತುವೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಾಗಿರುವ ಹೆಬ್ಟಾಳ ಮೇಲ್ಸೇತುವೆಯನ್ನು “ಎಕ್ಸಟರ್ನಲ್‌ಪೋಸ್ಟ್ ಟೆನ್ಷನಿಂಗ್ ಸಿಸ್ಟ್ಂ’ ತಂತ್ರಜ್ಞಾನ ಬಳಸಿನಿರ್ಮಿಸಲಾಗಿದೆ. ಇದೀಗ ಬೆಂಗಳೂರು-ಮೈಸೂರು ದಶಪಥ ರಸ್ತೆ ಕೂಡ ಇದೇ ವಿನ್ಯಾಸದಲ್ಲಿ ರೂಪುಗೊಳ್ಳುತ್ತಿದೆ. ಅಲ್ಲಿನ ಮೇಲ್ಸೇತುವೆ, ಸೇತುವೆ, ಅಂಡರ್‌ಪಾಸ್‌ಗೆ ಇದೇ ತಂತ್ರಜ್ಞಾನ ಬಳಸಲಾಗಿದೆ ಎಂದು ತಜ್ಞರೊಬ್ಬರು ತಿಳಿಸಿದರು
ನಗರದ ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲವೂ ಸುಸ್ಥಿತಿಯಲ್ಲಿದ್ದು, ಜನರು ಆತಂಕಪಡುವ ಆಗತ್ಯವಿಲ್ಲ. ಸವಾರರು ನಿರ್ಭಯದಿಂದ ವಾಹನಗಳು ಸಂಚರಿಸಬಹುದು. – ಬಿ.ಎಸ್. ಪ್ರಹ್ಲಾದ್,ಬಿಬಿಎಂಪಿ ಮುಖ್ಯ ಎಂಜಿನಿಯರ್
– ಎನ್.ಎಲ್.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.