ನೆರೆ ಸಂತ್ರಸ್ತರ ಬಾಳಲ್ಲಿ ಬೆಳಕು ತನ್ನಿ


Team Udayavani, Oct 25, 2019, 11:53 AM IST

bng-tdy-3

ಬೆಂಗಳೂರು: ನೀವೂ ಪಟಾಕಿ ಹೊಡೆಯುವುದರಿಂದ ಆಕಸ್ಮಿಕವಾಗಿ ಮತ್ತೂಬ್ಬರ ಜೀವನವೇ ಕತ್ತಲಾಗಬಹುದು. ಆದರೆ, ನೀವು ಮನಸ್ಸು ಮಾಡಿದರೆ ಕೆಲವರ ಜೀವನಕ್ಕೆ ಬೆಳಕಾಗಬಹುದು. ಇದಕ್ಕಾಗಿ ನೀವು ಮಾಡಬೇಕಾಗಿದ್ದಿಷ್ಟೇ ಒಂದಿಷ್ಟು ಮಾನವೀಯ ಆಲೋಚನೆಗಳ ಮೂಲಕ ಹಬ್ಬದ ಆಚರಣೆಗೆ ಆದ್ಯತೆ ನೀಡಬೇಕು.

ದೀಪಾವಳಿ ಎಂದರೆ ಬೆಳಕಿನ ಹಬ್ಬ. ನೆರೆ ಸಂತ್ರಸ್ತರಿಗೆ ನೆರವಾಗುವ ಹಾಗೂ ಕುಂಬಾರರ ಬದುಕಿಗೆ ಬೆಳಕಾಗುವಂತಹ ಮಾನವೀಯ, ಮಣ್ಣಿನ ಹಣತೆ ಬಳಕೆಯ ಮೂಲಕ ದೀಪಾವಳಿ ಆಚರಣೆ ಮಾಡಬಹುದಾಗಿದೆ. ಪಟಾಕಿ ಸುಡುವುದನ್ನು ನಿಯಂತ್ರಿಸ ಬಹುದಾಗಿದೆ.

ನೆರೆ ಸಂತ್ರಸ್ತರಿಗೆ ನೆರವಾಗಿ: ನೆರೆ ಹಾವಳಿಯಿಂದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ 15 ಜಿಲ್ಲೆಗಳು ನೆರೆಯಿಂದ ಸಂಕಷ್ಟ ಎದುರಿಸುತ್ತಿವೆ. ಹಿಂಗಾರು ಮಳೆಗೆ ಹೀಗಾಗಲೇ 13 ಜನ ಸಾವಿಗೀಡಾಗಿದ್ದು, ಅಪಾರ ಮಂದಿ ಸಂತ್ರಸ್ತರಾಗಿದ್ದಾರೆ. ಸದ್ಯ ನೆರೆ ಸಂತ್ರಸ್ತರಿಗೆ ನೆರವು ಬೇಕಿದ್ದು, ಸರ್ಕಾರದ ಜತೆ ಕೈಜೋಡಿಬಹುದು. ಈ ಬಾರಿಯ ದೀಪಾವಳಿ ಪಟಾಕಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಅಳಿಲು ಸೇವೆ ಸಲ್ಲಿಸಬಹುದಾಗಿದೆ. ಕೆಲ ಉತ್ತರ ಕರ್ನಾಟಕದ ಸಂಘ ಸಂಸ್ಥೆಗಳು ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ಸಂಗ್ರಹಿಸುತ್ತಿದ್ದು, ಅವರ ಜತೆ ಕೈಜೋಡಿಸಬಹುದಾಗಿದೆ.

ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ವಿಧಾನಸೌಧ ಶಾಖೆ)

ಖಾತೆ ಸಂಖ್ಯೆ: 37887098605. ಅಥವಾ ಗೂಗಲ್‌ ಪೇನಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯ ಆಯ್ಕೆ ಈಗಾಲೇ ಇದ್ದು, ಅಲ್ಲಿಯೂ ಸುಲಭವಾಗಿ ಕೈಲಾದಷ್ಟು ಹಣ ಸಂದಾಯ ಮಾಡಬಹುದು.

ಆಡಂಬರ ಬದಿಗಿಟ್ಟು; ಅವರ ಬದುಕು ಕಟ್ಟಲು ಕೈಜೋಡಿಸಿ: ಉತ್ತರ ಕರ್ನಾಟಕ ಮೂಲದ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂದು ತನ್ನೂರಿನವರು ನೆರೆಯಿಂದ ಎಲ್ಲವನ್ನು ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ದೀಪಾವಳಿ ಹಬ್ಬಕ್ಕಿಂತ ದಿನದ ಬದುಕಿನ ಚಿಂತೆಯಿದೆ. ಹೀಗಾಗಿ ರಾಜಧಾನಿಯಲ್ಲಿ ಒಂದಿಷ್ಟು ಆಡಂಬರ ಕಡಿಮೆ ಮಾಡಿ, ನೆರೆ ಸಂತ್ರಸ್ತರ ನೆರವಿಗೆ ಬರಬೇಕಿದೆ. ನೆರೆ ಸಂತ್ರಸ್ತರ ಬಹುಮುಖ್ಯ ಸಮಸ್ಯೆ ಎಂದರೆ ವಸ್ತ್ರ, ಒಳವಸ್ತ್ರಗಳ ಕೊರತೆ. ಅವುಗಳು ಬೇಕೆಂದು ಕೇಳಲು ಪುರುಷರು, ಹೆಚ್ಚಾಗಿ ಮಹಿಳೆಯರು ಮುಜುಗರಪಡುತ್ತಿದ್ದಾರೆ. ಆದರೆ, ಈ ಸಮಸ್ಯೆ ಮನಗಂಡ ಸಂಘ ಸಂಸ್ಥೆಗಳು ಹೊಸ ಒಳವಸ್ತ್ರಗಳನ್ನು ಖರೀದಿಸಿ ಸಂತ್ರಸ್ತರಿಗೆ ನೀಡಬಹುದು. ರಾಜಾಜಿನಗರ ಬಾಷ್ಯಂ ವೃತ್ತದ ಬಳಿಯ ಉತ್ತರ ಕರ್ನಾಟಕದ ಸಂಘ-ಸಂಸ್ಥೆಗಳ ಮಹಾ ಸಂಸ್ಥೆಯು ಪರಿಹಾರ ಸಾಮಗ್ರಿ ಸಂಗ್ರಹಿಸುತ್ತಿದ್ದು, ಇವರ ಜತೆ ಕೈಜೋಡಿಸಬಹುದು.

ನಿಮ್ಹಾನ್ಸ್‌ ದೀಪಾವಳಿ ವಿಶೇಷ ಕಿಟ್‌ : 

ನಿಮ್ಹಾನ್ಸ್‌ನ ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರದ ರೋಗಿಗಳು ಈ ಬಾರಿ ದೀಪಾವಳಿ ಗೆಂದು ವಿಶೇಷ ಉಡುಗೊರೆ ಕಿಟ್‌ ಸಿದ್ಧಪಡಿಸಿ ದ್ದಾರೆ. ಇದರಲ್ಲಿ ಎರಡು ಆಕರ್ಷಕ ದೀಪಗಳು, ಎರಡು ವಿಶೇಷ ರಂಗೋಲಿ ವಿನ್ಯಾಸದ ಮಣೆ ಗಳು, ನಾಲ್ಕು ಬಣ್ಣದ ರಂಗೋಲಿ ಪುಡಿಗಳ ಪೊಟ್ಟಣಗಳಿವೆ. ಇವುಗಳನ್ನು ನಿಮ್ಹಾನ್ಸ್‌ ಆವರಣದ ನಂದಿನಿ ವಿಲ್ಕ್ಬೂ ತ್‌ ಪಕ್ಕದ ಒಪಿಸಿ ಸೇಲ್ಸ್‌ ಕೌಂಟರ್‌ನಲ್ಲಿ
ಮಾರಾಟಕ್ಕಿಡಲಾಗಿದೆ. ಕಿಟ್‌ ಒಂದಕ್ಕೆ 300 ರೂ. ನಿಗದಿ ಪಡೆಸಿದ್ದು, ಮಾರಾಟ ದಿಂದ ಬರುವ ಸಂಪೂರ್ಣ ಹಣವನ್ನು ನಿಮ್ಹಾನ್ಸ್‌ ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕೆ ಬಳಸಿಕೊಳ್ಳಲಿದೆ. ಮಾಹಿತಿಗೆ 080 26995336 ಸಂಪರ್ಕಿಸಬಹುದು.

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬೆಂಗಳೂರು ನಿವಾಸಿಗಳ ನೆರವು ಅಗತ್ಯವಿದೆ. ಈ ಬಾರಿ ಹಬ್ಬದ ಖರ್ಚು ಕಡಿಮೆ ಮಾಡಿ ಆ ಹಣದಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗಬಹುದು. ಆಹಾರ ಪದಾರ್ಥ ಹೊರತುಪಡೆಸಿ ಹೊಸ ಬಟ್ಟೆಗಳು, ದಿನನಿತ್ಯ ಸಾಮಗ್ರಿಗಳನ್ನು ನೀಡಿದರೆ ತಲುಪಿಸುವ ಕೆಲಸ ಮಾಡುತ್ತೇವೆ.
●ಶಿವಕುಮಾರ ಮೇಟಿ, ಅಧ್ಯಕ್ಷರು,ಉತ್ತರ ಕರ್ನಾಟಕದ ಸಂಘ-ಸಂಸ್ಥೆಗಳು

 

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.