ಬ್ರಿಟಿಷ್ ಬಯೋಲಾಜಿಕಲ್ಸ್‌ಗೆ ಪ್ರಶಸ್ತಿ
Team Udayavani, Mar 16, 2018, 11:42 AM IST
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತೀಯ ಮೂಲದ ನ್ಯೂಟ್ರಿಸ್ಯೂಟಿಕಲ್ ಕಂಪನಿ ಬ್ರಿಟಿಷ್ ಬಯೋಲಾಜಿಕಲ್ಸ್ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ.
ಯುಕೆ ಅಸಿಯಾನ್ ಬಿಸಿನೆಸ್ ಕೌನ್ಸಿಲ್ ಸಹಯೋಗದಲ್ಲಿ ವೈಟ್ ಪೇಜ್ ಇಂಟರ್‌ನ್ಯಾಷನಲ್ ಆಯೋಜಿಸಿದ್ದ ವಿಶ್ವದ ಶ್ರೇಷ್ಠ ಬ್ರಾಂಡ್‌ಗಳು ಮತ್ತು ಅಸಾಮಾನ್ಯ ನಾಯಕತ್ವವುಳ್ಳ ಸಂಸ್ಥೆಗಳಿಗೆ ನೀಡುವ “ಏಷಿಯಾಸ್ ಮೋಸ್ಟ್ ಅಡೆರ್ ಬ್ರಾಂಡ್’, “ಏಷಿಯಾಸ್ ಮೋಸ್ಟ್ ಅಡೆರ್ ಬಿಸಿನೆಸ್ ಲೀಡರ್’ ಮತ್ತು “ಲೈಫ್ ಟೈಂ ಅಚೀವ್‌ಮೆಂಟ್ ಅವಾರ್ಡ್’ ಈ ಮೂರೂ ಪ್ರಶಸ್ತಿಗಳನ್ನು ಬ್ರಿಟಿಷ್ ಬಯೋಲಾಜಿಕಲ್ಸ್ ಮತ್ತು ಕಂಪನಿಯ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ವಿ.ಎಸ್. ರೆಡ್ಡಿ ಅವರಿಗೆ ದೊರೆತಿದೆ.
ಇತೀ¤ಚೆಗೆ ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಮತ್ತು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಬ್ರಿಟಿಷ್ ಬಯೋಲಾಜಿಕಲ್ಸ್ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ರೆಡ್ಡಿ ಅವರ ಪರವಾಗಿ ಸಂಸ್ಥೆಯ ಕಾರ್ಪೊರೇಟ್ ಕಮ್ಯೂನಿಕೇಷನ್ಸ್ ಮುಖ್ಯಸ್ಥ ಎಸ್.ಕೆ.ಅಜಿತ್ ಪ್ರಶಸ್ತಿಗಳನ್ನು ಸೀಕರಿಸಿದರು. ಕಂಪನಿ ಮತ್ತು ತಮಗೆ ದೊರೆತ ಜೀವಮಾನ ಸಾಧನೆ ಪ್ರಶಸ್ತಿ ಕುರಿತು ಮಾತನಾಡಿದ ವಿ.ಎಸ್.ರೆಡ್ಡಿ ಅವರು, ಸಂಸ್ಥೆಗೆ ಒಂದೇ ಬಾರಿಗೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರೆತಿರುವುದು ಹೆಮ್ಮೆಯ ಸಂಗತಿ.
ಸಮಾಜದ ಒಳಿತಿಗಾಗಿ, ಜನರ ಯೋಗಕ್ಷೇಮಕ್ಕಾಗಿ ನವೀನ ಪೌಷ್ಠಿಕ ಔಷಧಾಹಾರ ಉತ್ಪನ್ನಗಳನ್ನು ಹಾಗೂ ನಮ್ಮ ಸ್ಥಿರವಾದ ಪ್ರಯತ್ನಕ್ಕಾಗಿ ದೊರೆತ ಬಹುದೊಡ್ಡ ಪುರಸ್ಕಾರಗಳಿವು. ಪ್ರಶಸ್ತಿಗಳು ನಮ್ಮ ಬ್ರಾಂಡ್, ಗುಣಮಟ್ಟ, ಶ್ರೇಷ್ಠತೆ, ನಾಯಕತ್ವ ಮತ್ತು ಉದ್ಯಮಶೀಲತೆಯನ್ನು ಗುರುತಿಸುತ್ತವೆ. ಈ ಸಾಧನೆಯನ್ನು ನಮ್ಮ ಎಲ್ಲ ವೈದ್ಯಕೀಯ ಬಂಧುಗಳು ಹಾಗೂ ಸಹಯೋಗಿಗಳೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.