ಬಜೆಟ್ ಜನಾಭಿಪ್ರಾಯ
Team Udayavani, Jul 6, 2018, 11:57 AM IST
ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಯೋಜನೆಗಳನ್ನು ನೀಡದಿರುವುದು ಬೇಸರದ ಸಂಗತಿ. ಹಾಸನ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ನೀಡಿರುವುದು ಸಂತಸ ತಂದಿದೆ.
-ಲಕ್ಷ್ಮೀ, ಗೃಹಿಣಿ
ಮಹಿಳೆಯರು ಆರಂಭಿಸುವ ಉದ್ಯಮ ಕ್ಷೇತ್ರಕ್ಕೆ ಪ್ರಾಶಸ್ತ್ಯ ನೀಡಿಲ್ಲ. ಕೇವಲ ರೈತರ ಸಾಲ ಮ್ನನಾಗೆ ಆದ್ಯತೆ ನೀಡಲಾಗಿದೆ. ಮಹಿಳೆಯರ ಕಲ್ಯಾಣ ಕ್ಷೇತ್ರಕ್ಕೆ ಮೀಸಲಿಟ್ಟ ಹಣ ಕಡಿಮೆಯಾಗಿದೆ.
-ಶ್ರೀದೇವಿ, ಗೃಹಿಣಿ
ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಆರಂಭಿಸಿರುವುದು ತ್ತಮ ಬೆಳವಣಿಗೆ. ಗರ್ಭೀಣಿಯರು, ಬಾಣಂತಿಯರಿಗೆ ಒಂದು ಸಾವಿರ ರೂ. ನೀಡುವುದು ಕೂಡ ಉತ್ತಮ ಯೋಚನೆ.
-ಶಾಂತಿ, ಗೃಹಿಣಿ
ವ್ಯಾಪಾರಿಗಳಿಗೆ ಈ ಬಜೆಟ್ ಯಾವುದೇ ದೃಷ್ಟಿಯಿಂದಲೂ ಪೂರಕವಾಗಿಲ್ಲ. ಅಸಂಘಟಿತ ವಲಯದ ಕಾರ್ಮಿಕರತ್ತ ಗಮನ ಹರಿಸಿಲ್ಲ. ಸಣ್ಣ, ಬೀದಿ ಬದಿ ವ್ಯಾಪಾರಿಗಳಿಗೆ ಆದ್ಯತೆ ನೀಡಬೇಕಿತ್ತು.
-ನಂಜುಡ, ವ್ಯಾಪಾರಿ
ರೈತರ ಸಾಲ ಮನ್ನಾಗಾಗಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದ್ದು ಸರಿಯಲ್ಲ. ಇದು ಕೇವಲ ರೈತರಿಗಾಗಿ ಮಂಡಿಸಿರುವ ಬಜೆಟ್. ರೈತರ ಹೊರತು ಯಾವ ವರ್ಗಕ್ಕೂ ಬಜೆಟ್‌ನಿಂದ ಪ್ರಯೋಜನ ದೊರೆತಿಲ್ಲ.
-ಕುಳ್ಳೇಗೌಡ, ವ್ಯಾಪಾರಿ
ಬಜೆಟ್‌ನಲ್ಲಿ ಮೆಟ್ರೋ ಯೋಜನೆ ಪ್ರಸ್ತಾಪವಿದ್ದರೂ ಸ್ಪಷ್ಟನೆಯಿಲ್ಲ. ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ಹಣ ಬೇಕಿತ್ತು. ರಾಸಾಯನಿಕ ತ್ಯಾಜ್ಯ ಶುದ್ಧೀಕರಣ ಘಟಕ ತೆರೆಯಲಿರುವುದು ಉತ್ತಮ ಬೆಳವಣಿಗೆ.
-ರಂಜಿತ್, ಖಾಸಗಿ ಉದ್ಯೋಗಿ
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಶಿಕ್ಷಣ ಸೇರ್ಪಡೆ ಹಾಗೂ ಹಾಸನದಲ್ಲಿ ಸ್ಯಾನಿಟರಿ ಉಪಕರಣ ಉತ್ಪಾದನೆ ಘಟಕಗಳನ್ನು ತೆರೆಯಲು ನಿರ್ಧರಿಸಿರುವುದು ಸ್ವಾಗತಾರ್ಹ ನಿಲುವುಗಳು.
-ಅಶ್ವಿನಿ, ವಿದ್ಯಾರ್ಥಿನಿ
ವಿಕಲಚೇತನರು ವಿದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನ ನೀಡುತ್ತಿರುವುದು ಸ್ವಾಗತಾರ್ಹ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸಬೇಕಿತ್ತು.
-ಮಹೇಶ್, ವಿದ್ಯಾರ್ಥಿ
ಹಳೆಯ ವಿದ್ಯಾರ್ಥಿಗಳ ನೆರವಲ್ಲಿ ಶಾಲೆಗಳ ಅಭಿವೃದ್ಧಿ ಹಾಗೂ ಸಿಎಸ್‌ಆರ್ ಅನುದಾನ ಬಳಸಿಕೊಳ್ಳುವುದು ಒಳ್ಳೆಯ ಯೋಚನೆ. ಇದರಿಂದ ಹಲವು ಹಳೆಯ ಶಾಲೆಗಳು ಪುನರುಜ್ಜೀವನಗೊಳ್ಳಲಿವೆ.
-ರವಿಕಿರಣ್, ವಿದ್ಯಾರ್ಥಿ
ಕಿದ್ವಾಯಿ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿಗೆ ಪ್ರತ್ಯೇಕ ಘಟಕ, ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿಗಾಗಿ ಬಡರೋಗಿಗಳಿಗೆ ಪ್ರತ್ಯೇಕ ಯೋಜನೆ ಸಿದ್ಧಪಡಿಸುವುದು ಒಳ್ಳೆಯ ನಿರ್ಧಾರ.
-ಟಿ.ಪದ್ಮಾ, ಉಪನ್ಯಾಸಕಿ
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಮುಂದಾಗಿರುವುದಿಂದ ಹಳ್ಳಿಯ ಬಡ ವರ್ಗದ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ದೊರೆಯಲಿದೆ. ಬಾಲ ಸ್ನೇಹಿ ಕೇಂದ್ರಗಳಿಂದಲೂ ಅನುಕೂಲವಾಗಲಿದೆ.
-ಶಿವರಾಜ್, ಆಟೋ ಚಾಲಕ
ಕೆಳವರ್ಗಕ್ಕೆ ಆದ್ಯತೆ ನೀಡಿಲ್ಲ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರಿಗೆ ಬಜೆಟ್‌ನಲ್ಲಿ ಹೊಸ ಅಂಶಗಳನ್ನು ಸೇರಿಸಿಲ್ಲ. ಎಲ್ಲವೂ ಹಿಂದಿನಂತೆಯೇ ಇವೆ. ಹಿಂದಿನ ಸರ್ಕಾರದ ಬಜೆಟ್ ಚೆನ್ನಾಗಿತ್ತು.
-ಸಿದ್ದು, ಭದ್ರತಾ ಸಿಬ್ಬಂದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.