KMF: ಕೆಎಂಎಫ್ ಎಮ್ಮೆ ಹಾಲು ಶೀಘ್ರ ಮಾರುಕಟ್ಟೆಗೆ
Team Udayavani, Dec 19, 2023, 10:41 AM IST
ಬೆಂಗಳೂರು: ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಕೆಎಂಎಫ್ ಬ್ರ್ಯಾಂಡ್‌ನ ಎಮ್ಮೆ ಹಾಲು ಅರ್ಧ ಲೀಟರ್ ಪ್ಯಾಕ್‌ನಲ್ಲಿ ಗ್ರಾಹಕರಿಗೆ ದೊರೆಯಲಿದೆ.
ಎಮ್ಮೆ ಹಾಲಿಗೆ ಬೇಡಿಕೆಯಿರುವ ಹಿನ್ನೆಲೆ ಯಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಶೀಘ್ರದಲ್ಲೆ ಮಾರು ಕಟ್ಟೆಗೆ ಪರಿಚಯಿ ಸಿದಲಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಆಡಳಿತ ಮಂಡಳಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈಗಾಗಲೇ ಕೆಎಂಎಫ್ನ ವಿವಿಧ ಮಾದರಿಯ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಅದೇ ರೀತಿ ಎಮ್ಮೆ ಹಾಲನ್ನೂ ಮಾರಾಟ ಮಾಡುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಈಗ ಕೆಎಂಎಫ್ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಕೆಲವು ವರ್ಷಗಳ ಹಿಂದೆ ಕೆಎಂಎಫ್ಎಮ್ಮೆ ಹಾಲನ್ನು ಮಾರಾಟಕ್ಕೆ ಮುಂದಾ ಗಿತ್ತು. ಆರಂಭದಲ್ಲಿ ನಾಲ್ಕು ಸಾವಿರ ದಿಂದ ಐದು ಸಾವಿರ ಲೀಟರ್ ಹಾಲನ್ನು ಕರ್ನಾಟಕ ಹಾಲು ಮಹಾಮಂಡಳ ಮಾರಾಟ ಮಾಡುತ್ತಿತ್ತು. ಆದರೆ, ನಂತರ ದಿನಗಳಲ್ಲಿ ಹಾಲಿನ ಪೂರೈಕೆ ಕೊರತೆಯಿಂದಾಗಿ ಸ್ಥಗಿತ ಮಾಡಲಾಗಿತ್ತು. ಈಗ ಹಾಸುವಿನ ಹಾಲು ಮತ್ತದರ ಉತ್ಪನ್ನ ಗಳ ಜತೆಯಲ್ಲಿ ಎಮ್ಮೆ ಹಾಲಿಗೂ ಬೇಡಿಕೆ ಯಿರು ವುದರಿಂದ ಮಾರುಕಟ್ಟೆಗೆ ಪರಿಚಯಿ ಸುವ ಕೆಲಸ ಮಾಡಲಾಗುತ್ತಿದೆ ಎಂದು ಕೆಎಂಎಫ್ನ ಮಾರಾಟ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗ ಎಮ್ಮೆ ಹಾಲಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ತರ ಕರ್ನಾಟದ ಜನರು ಎಮ್ಮೆ ಸಾಕಿ ಹಾಲು ಮಾರಾಟ ಮಾಡುತ್ತಾರೆ. ಆದರೆ ಅದಕ್ಕೆ ಹೋಲಿಸಿದರೆ ದಕ್ಷಿಣ ಭಾಗದಲ್ಲಿ ಕಡಿಮೆ. ಹಳೇ ಮೈಸೂರು ಭಾಗದಲ್ಲಿ ರಾಸು ಹಸುಗಳನ್ನು ಹೈನುಗಾರಿಕೆಗಾಗಿ ಸಾಕಲಾಗುತ್ತದೆ. ಆ ಹಿನ್ನೆಲೆ ಯಲ್ಲಿ ರಾಜಧಾನಿ ಬೆಂಗ ಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಕೆಎಂಎಫ್ ಎಮ್ಮೆ ಹಾಲಿನ ಮಾರಾಟದ ಹೊಸ ಪ್ರಯೋಗಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.
ವಿಜಯಪುರ ಭಾಗಗಳಲ್ಲಿ ಖರೀದಿ: ಈಗಾಗಲೇ ರಾಜ್ಯವ್ಯಾಪಿ ಹಲವು ಒಕ್ಕೂಟಗಳು ಕೆಎಂಎಫ್ಗೆ ಹಾಲು ಪೂರೈಸುತ್ತಿವೆ. ಆದರೆ ಎಲ್ಲ ರೈತರಲ್ಲಿ ಎಮ್ಮೆ ಹಾಲು ಪೂರೈಸುತ್ತಿಲ್ಲ. ಅಧಿಕ ಸಂಖ್ಯೆ ಯಲ್ಲಿ ರಾಸು ಹಸುಗಳ ಹಾಲನ್ನೇ ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ವಿಜಯಪುರ ಮತ್ತು ಬೆಳಗಾವಿ ಭಾಗದ ರೈತರಿಂದ ಎಮ್ಮೆಹಾಲನ್ನು ಖರೀದಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಎಮ್ಮೆಗಳಿದ್ದು, ಆ ಭಾಗದ ರೈತರಿಂದ ಹಾಲು ಸಂಗ್ರಹಿಸಲಾಗುವುದು. ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಎಮ್ಮೆ ಹಾಲು ಸಂಗ್ರಹಿಸಲಾಗುವುದು ಎಂದು ಕೆಎಂಎಫ್ನ ಅಧಿಕಾರಿಗಳು ಹೇಳಿದ್ದಾರೆ.
ಎಮ್ಮೆ ಹಾಲಿನ ದರದ ಬಗ್ಗೆ ಕೆಎಂಎಫ್ ಇನ್ನೂ ನಿರ್ಧಾರ ಮಾಡಿಲ್ಲ. ಪ್ರತಿ ಲೀಟರ್‌ಗೆ 70 ರೂ. ನಿಗದಿಪಡಿಸುವ ಸಾಧ್ಯತೆಯಿದೆ. ಅಂತಿಮ ಬೆಲೆ ನಿರ್ಧಾರವನ್ನು ಕೆಎಂಎಫ್ನ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಲಿದೆ. ಕರ್ನಾಟಕ ಮಹಾಮಂಡಲ ಈಗ ಪ್ರತಿದಿನ 46 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ. ಈ ಪೈಕಿ 10 ಲಕ್ಷ ಲೀಟರ್ ಮೊಸರನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ ಎಂದಿದ್ದಾರೆ.
ಎಮ್ಮೆ ಹಾಲು ಪೂರೈಸುತ್ತೇವೆ. ನಮಗೆ ಮಾರುಕಟ್ಟೆ ಮಾಡಿ ಕೊಡಿ ಎಂದು ಬೆಂಗಳೂರು ಹಾಲು ಒಕ್ಕೂಟಕ್ಕೆ ಕೆಎಂಎಫ್ ಮನವಿ ಮಾಡಿದೆ. ಹೀಗಾಗಿ ಎಮ್ಮೆ ಹಾಲು ಮಾರಾಟಕ್ಕೂ ಆದ್ಯತೆ ನೀಡಲಾಗುತ್ತಿದೆ. ಎಮ್ಮೆ ಹಾಲಿಗೂ ಬೆಂಗಳೂರು ವ್ಯಾಪ್ತಿಯಲ್ಲಿ ಬೇಡಿಕೆಯಿದೆ. ಕೆಎಎಫ್ಎಂ ಈಗ ಎಮ್ಮೆ ಹಾಲಿನ ಮಾರಾಟಕ್ಕೆ ಮುಂದಾಗಿರುವುದು ರೈತರಿಗೆ ಅನುಕೂಲವಾಗಲಿದೆ.-ಎಚ್.ಪಿ.ರಾಜಕುಮಾರ್, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ
ಮಾರುಕಟ್ಟೆಯಲ್ಲಿ ಎಮ್ಮೆ ಹಾಲಿಗೂ ಬೇಡಿಕೆ ಬಂದಿದೆ. ಹೀಗಾಗಿ ಕೆಎಂಎಫ್ ಶೀಘ್ರದಲ್ಲೇ ಎಮ್ಮೆ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಲಿದೆ. ವಿಜಯಪುರ ಮತ್ತು ಬೆಳಗಾವಿ ಭಾಗಗಳ ರೈತರಿಂದ ಹಾಲು ಖರೀದಿಸಲಾಗುತ್ತಿದೆ.-ಎಂ.ಕೆ.ಜಗದೀಶ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ
– ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.