ಕಟ್ಟಡ ಕುಸಿತ ಪ್ರಕರಣ: ಮೃತ ಸಂಜನಾ ಅಂತ್ಯಕ್ರಿಯೆ
Team Udayavani, Oct 21, 2017, 11:42 AM IST
ಬೆಂಗಳೂರು: ಇತ್ತೀಚೆಗೆ ಈಜಿಪುರದ ಕಟ್ಟಡ ಕುಸಿತ ಪ್ರಕರಣದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟ ಮಗು ಸಂಜನಾ ಅಂತ್ಯಸಂಸ್ಕಾರ ಶುಕ್ರವಾರ ನೀಲಸಂದ್ರದ ರುದ್ರಭೂಮಿಯಲ್ಲಿ ನಡೆಯಿತು.
ಘಟನೆಯ ವೇಳೆ ಮೃತಪಟ್ಟ ಮಗುವಿನ ತಂದೆ ಶರವಣ ಮತ್ತು ತಾಯಿ ಅಶ್ಚಿನಿ ಅವರ ಅಂತ್ಯಕ್ರಿಯೆ ಜಾಗದ ಸಮೀಪವೆ ಮಗುವಿನ ಅಂತ್ಯಸಂಸ್ಕಾರವನ್ನು ಕುಟುಂಬ ಸದಸ್ಯರು ನೆರವೇರಿಸಿದರು. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮಗುವಿನ ಮೃತದೇಹ ಹಸ್ತಾಂತರಿಸಲಾಯಿತು. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಪರಿಹಾರಕ್ಕಾಗಿ ಜಗಳ: ಈ ಮಧ್ಯೆ, ಮೃತರ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ ಘೋಷಿಸಿರುವ ಪರಿಹಾರ ಹಣ ಹಂಚಿಕೆ ವಿಚಾರ ಕುಟುಂಬ ಸದಸ್ಯರ ಜಗಳಕ್ಕೆ ಕಾರಣವಾಯಿತು. ಮೃತ ದಂಪತಿ ಶರವಣ ಮತ್ತು ಅಶ್ವಿನಿ ಹಾಗೂ ಅವರ ಮಗಳು ಸಂಜನಾಗೆ ಪಾಲಿಕೆಯ 15 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಪರಿಹಾರ ಹಣಕ್ಕಾಗಿ ಶರವಣ ಹಾಗೂ ಅಶ್ವಿನಿ ಕುಟುಂಬದವರು ಜಗಳವಾಡುವುದು ಕಂಡುಬಂದಿತು.
ಈ ಕುರಿತು ಮೃತ ಅಶ್ವಿನಿ ತಂದೆ ಮೂರ್ತಿ ಮಾತನಾಡಿ, ಮಗಳು ಹಾಗೂ ಮೊಮ್ಮಗಳನ್ನು ಕಳೆದುಕೊಂಡಿದ್ದೇವೆ. ಮಗಳನ್ನು ಸಾಕಲು ಕಷ್ಟಪಟ್ಟಿದ್ದು, ಇದೀಗ ಮನೆಯನ್ನು ಕಳೆದುಕೊಂಡಿದ್ದು, ಪರಿಹಾರ ಮೊತ್ತವನ್ನು ನಮಗೂ ನೀಡಬೇಕು ಎಂದು ತಿಳಿಸಿದ್ದಾರೆ. ಇನ್ನೂ ಶರವಣ ಅವರ ತಾಯಿ ಶಾಂತಮ್ಮ, ಮಗ, ಸೊಸೆ ಹಾಗೂ ಮೊಮ್ಮಗಳನ್ನು ಕಳೆದುಕೊಂಡು ದುಃಖದಲ್ಲಿರುವಾಗ ಇವರಿಗೆ ಪರಿಹಾರದ ಚಿಂತೆ. ಮೊದಲು ಮೊಮ್ಮೊಗಳ ಅಂತ್ಯಕ್ರಿಯೆ ಆಗಲಿ, ಆನಂತರ ಆ ಕುರಿತು ಮಾತನಾಡೋಣ ಎಂದು ಹೇಳಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.