ಸೇನಾ ಕ್ಯಾಂಪ್‌ನಲ್ಲಿ ಬರ್ಬರ ಕೊಲೆ
Team Udayavani, Mar 31, 2018, 6:00 AM IST
ಬೆಂಗಳೂರು: ಇಲ್ಲಿನ ಹಳೇ ವಿಮಾನ ನಿಲ್ದಾಣ ರಸ್ತೆಯ ಎಎಸ್‌ಸಿ ಸೌಥ್ ಸೆಂಟರ್ ಆ್ಯಂಡ್ ಕಾಲೇಜ್ ಕ್ಯಾಂಪಸ್‌ನಲ್ಲಿ ಯೋಧನೊಬ್ಬನನ್ನು ಸಹೋದ್ಯೋಗಿಗಳೇ ದಾರುಣವಾಗಿ ಹತ್ಯೆಗೈದು ಮೃತದೇಹ ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಗುರುತಿನ ಚೀಟಿ ಕಳವು ಮಾಡಿ ಆಂತರಿಕ ತನಿಖೆ ಎದುರಿಸುತ್ತಿದ್ದ ಯೋಧನೊಬ್ಬ ಸಹೋದ್ಯೋಗಿಯ ಜತೆ ಸೇರಿ ಈ ಕೃತ್ಯ ಎಸಗಿದ್ದು, ಸೇನಾ ಕ್ಯಾಂಪಸ್‌ನ ಅಧಿಕಾರಿಗಳಿಗೆ ಆಘಾತ ಮೂಡಿಸಿದೆ.
ಉತ್ತರ ಪ್ರದೇಶದ ಪಂಕಜ್ ಕುಮಾರ್ (26) ಎಂಬ ಯೋಧ ಹತ್ಯೆಯಾಗಿದ್ದು, ಈ ಸಂಬಂಧ ಆಂಧ್ರಪ್ರದೇಶ ಮೂಲದ ಮುರಳಿಕೃಷ್ಣ (32)ಹಾಗೂ ಧನರಾಜ್ (24)ಎಂಬುವವರನ್ನು ಬಂಧಿಸಲಾಗಿದೆ.
ಮಾ.23ರ ರಾತ್ರಿ 10.30ರ ಸುಮಾರಿಗೆ ಮಾತನಾಡಿಸುವ ನೆಪದಲ್ಲಿ ಕ್ಯಾಂಪಸ್‌ನ ಬ್ಯಾರಕ್‌ನಲ್ಲಿ ಮಲಗಿದ್ದ ಪಂಕಜ್‌ಕುಮಾರ್ ಕೊಠಡಿಗೆ ಹೋದ ಆರೋಪಿಗಳು ಹಗ್ಗದಿಂದ ಬಿಗಿದು, ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಮೃತದೇಹ ಸುಟ್ಟು ಹಾಕಿದ್ದರು.
ಮೂವರು ಯೋಧರು ಹಳೇ ವಿಮಾನ ನಿಲ್ದಾಣ ಬಳಿಯಿರುವ ಎಎಸ್‌ಸಿ ಸೌಥ್ ಸೆಂಟರ್ ಮತ್ತು ಕಾಲೇಜು ಕ್ಯಾಂಪಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಂಕಜ್ ಕುಮಾರ್ ಕರ್ತವ್ಯ ನಿರ್ವಹಿಸುವ ವಿಚಾರದಲ್ಲಿ ಮುರಳಿಕೃಷ್ಣನ ಜತೆ ಆಗಾಗ್ಗೆ ಜಗಳವಾಡಿಕೊಂಡಿದ್ದ. ಇದಕ್ಕೆ ಕೋಪಗೊಂಡಿದ್ದ ಆರೋಪಿ ಈತನನ್ನು ಕೆಲಸದಿಂದ ತೆಗೆಯಬೇಕು, ಇಲ್ಲವಾದರೆ ಪ್ರಾಣ ತೆಗೆಯಬೇಕು ಎಂದು ನಿರ್ಧರಿಸಿದ್ದ.
ಬಿಗಿದರು, ಇರಿದರು,ಸುಟ್ಟರು ಮಾ.23ರಂದು ರಾತ್ರಿ 10.30ರಲ್ಲಿ ಆಗ ತಾನೇ ಪಾಳಿ ಮುಗಿಸಿ ಅತಿಥಿಗಳ ಬ್ಯಾರಕ್‌ನಲ್ಲಿ ಮಲಗಿದ್ದ ಪಂಕಜ್‌ನನ್ನು ಮನವೊಲಿಸಲು ಆರೋಪಿಗಳಿಬ್ಬರು ಆತನ ಕೊಠಡಿಗೆ ಹೋಗಿದ್ದಾರೆ. ಪ್ರಕರಣದಿಂದ ಹಿಂದೆ ಸರಿಯುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಪಂಕಜ್ ನಿರಾಕರಿಸಿದಾಗ ಆರೋಪಿಗಳು, ಪಂಕಜ್‌ನ ಕಾಲು ಮತ್ತು ಕೈ ಹಿಡಿದು ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಪಂಕಜ್, ಮುರಳಿಕೃಷ್ಣನ ಪ್ಯಾಂಟ್ ಜೇಬಿನಲ್ಲಿದ್ದ ಚಾಕುವಿನಿಂದ ಧನರಾಜ್‌ನ ತೊಡೆ ಮತ್ತು ಎರಡು ಕೈಗಳಿಗೆ ಇರಿದ. ಇದರಿಂದ ಮತ್ತಷ್ಟು ಕೋಪಗೊಂಡ ಇಬ್ಬರು ಆರೋಪಿಗಳು ಅಲ್ಲೇ ಇದ್ದ ಹಗ್ಗದಿಂದ ಪಂಕಜ್‌ನ ಕುತ್ತಿಗೆ ಬಿಗಿದು ನಂತರ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾರೆ.
ಟ್ರಕ್‌ನಲ್ಲಿ ಹೆಣ ಸಾಗಿಸಿದರು
ಕೊಂದ ಬಳಿಕ ಕೊಠಡಿಯ ಪಕ್ಕದಲ್ಲೇ ಇದ್ದ ನೀರಿನ ಟ್ರಕ್‌ನಲ್ಲಿ ಪಂಕಜ್ ಮೃತ ದೇಹ ಸಾಗಿಸಿ ಕ್ಯಾಂಪಸ್‌ನ ಗಾಲ್ಫ್ ಸ್ಟೇಡಿಯಂ ಪಕ್ಕದಲ್ಲಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಬಳಿಕ ಮುರಳಿಕೃಷ್ಣ ಸಾûಾ$Â ನಾಶ ಪಡಿಸುವ ಉದ್ದೇಶದಿಂದ ಮತ್ತೆ ಪಂಕಜ್ ಕೊಠಡಿಗೆ ಬಂದು ಆತನಿಗೆ ಸೇರಿದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಕೊಂಡೊಯ್ದು ನಾಶ ಮಾಡಿದ್ದಾನೆ. ಆದರೆ ನಿರೀಕ್ಷೆಯಂತೆ ಬೇಗನೇ ದೇಹ ಸುಟ್ಟಿಲ್ಲ. ಅರೆಬರೆ ಬೆಂದ ದೇಹವನ್ನು ಕ್ಯಾಂಪಸ್ ತುದಿಯಲ್ಲಿರುವ ಕಸವಿಲೇವಾರಿ ರಾಶಿಯಲ್ಲಿ ಬಿಸಾಡಿ, ಎಲೆ ಹಾಗೂ ಸೌದೆ ಹಾಕಿ ಬೆಂಕಿ ಇಟ್ಟು ಕೆಲ ಹೊತ್ತು ಅಲ್ಲೇ ಇದ್ದು ವಾಪಸ್ ಆಗಿದ್ದಾರೆ.
ಪೊಲೀಸರಿಗೆ ಅಚ್ಚರಿ
ವಿಚಾರಣೆ ವೇಳೆ ಈ ರೀತಿಯ ದಾರುಣ ಕೃತ್ಯವೆಸಗಲು ಹೇಗೆ ಧೈರ್ಯ ಬಂತು ಎಂದು ಪ್ರಶ್ನಿಸಿದ ತನಿಖಾಧಿಕಾರಿಗಳಿಗೆ ಆರೋಪಿ ಮುರಳಿಕೃಷ್ಣ ಅಚ್ಚರಿಯ ಉತ್ತರ ನೀಡಿದ್ದಾನೆ. ನಮ್ಮದು ಆಂಧ್ರಪ್ರದೇಶ ಶ್ರೀಕಾಕುಲಂ ಜಿಲ್ಲೆಯ ಪಾಸಿಗಂಗುಪೇಟಾ ಗ್ರಾಮ, ಸುತ್ತಲು ಅರಣ್ಯ ಪ್ರದೇಶ. ಇಲ್ಲಿ ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿದ್ದ ಕಳ್ಳರು ಅರಣ್ಯ ಅಧಿಕಾರಿಗಳನ್ನು ಇದೇ ರೀತಿ ಕೊಲ್ಲುತ್ತಿದ್ದರು. ಆದರೆ, ಎಂದಿಗೂ ಬಂಧನವಾಗುತ್ತಿರಲಿಲ್ಲ. ಈ ಬಗ್ಗೆ ಓದಿ, ಕೇಳಿ ತಿಳಿದುಕೊಂಡಿದ್ದ ನಾನು ಅದೇ ರೀತಿಯ ಕೃತ್ಯವೆಸಗಿದೆ ಎಂದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.