ಬಸ್ ಚಾಲಕರು ಮೊಬೈಲ್ ಬಳಸಬಹುದು!
Team Udayavani, Oct 19, 2019, 10:33 AM IST
ಬೆಂಗಳೂರು: ಪ್ರತ್ಯೇಕ ಪಥದಲ್ಲಿ ಕಾರ್ಯಾಚರಣೆ ಮಾಡುವ ಬಸ್ ಚಾಲನಾ ಸಿಬ್ಬಂದಿಗೂ ವಿಶೇಷ ಆದ್ಯತೆ ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಮೊಬೈಲ್ ಫೋನ್ ಬಳಕೆಗೆ ಅವಕಾಶ ಕಲ್ಪಿಸಿದೆ.
ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ಮೊಬೈಲ್ ಬಳಕೆ ನಿಷೇಧವಿದೆ. ಆದರೆ, ಪ್ರತ್ಯೇಕ ಪಥದಲ್ಲಿ ಬಸ್‌ಗಳ ಸಂಚಾರಕ್ಕೆ ಯಾವುದೇ ರೀತಿ ಸಮಸ್ಯೆ ಆಗದಿರಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಬಿಎಂಟಿಸಿ, ಈ ನಿಟ್ಟಿನಲ್ಲಿ ಸೇವೆಯ ವೇಳೆ ಅಗತ್ಯಕ್ಕೆ ಅನುಗುಣವಾಗಿ ಮೊಬೈಲ್ ಬಳಕೆಗೆ ಅವಕಾಶ ನೀಡುತ್ತಿದೆ. ಶೀಘ್ರದಲ್ಲೇ ಈ ಸಂಬಂಧ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಆಕಸ್ಮಿಕವಾಗಿ ಬಸ್‌ಗಳು ಮಾರ್ಗಮಧ್ಯೆ ಕೆಟ್ಟುನಿಂತರೆ ತ್ವರಿತವಾಗಿ ಸಂಬಂಧಪಟ್ಟ ಸಿಬ್ಬಂದಿಗೆ ಮಾಹಿತಿ ನೀಡುವುದು, ಆ ಮೂಲಕ ಅಡತಡೆ ರಹಿತ ಸೇವೆ ಕಲ್ಪಿಸುವ ಉದ್ದೇಶದಿಂದ ಆ ಮಾರ್ಗದ ಚಾಲನಾ ಸಿಬ್ಬಂದಿ (ನಿರ್ವಾಹಕರಿಗೆ ಮಾತ್ರ)ಗೆ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗುತ್ತಿದೆ. ಸಿಬ್ಬಂದಿ ಮುಂಚಿತವಾಗಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡು, ಮೊಬೈಲ್ ತೆಗೆದುಕೊಂಡು ಹೋಗಲು ಅನುಮತಿ ಪತ್ರ ಪಡೆಯಬೇಕಾಗುತ್ತದೆ. ಹಾಗಂತ, ಬೇಕಾಬಿಟ್ಟಿ ಬಳಕೆ ಮಾಡು ವಂತಿಲ್ಲ. ಬಸ್‌ಗಳಲ್ಲಿ ಅಳವಡಿಸಿದ ಸಿಸಿಟಿವಿ ಯಲ್ಲಿ ಎಲ್ಲವೂ ರೆಕಾರ್ಡ್ ಆಗುವುದರಿಂದ ಒಂದು ವೇಳೆ ಹೀಗೆ ಅನ ಗತ್ಯ ಬಳಕೆ ಕಂಡುಬಂದರೆ ಕ್ರಮ ಕೈಗೊಳ್ಳಲಿಕ್ಕೂ ಅವಕಾಶ ಇರು ತ್ತದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್. ಪುರ ನಡುವೆ ಸುಮಾರು 700ಕ್ಕೂ ಅಧಿಕ ಬಸ್‌ಗಳು ನಿತ್ಯ ಸಂಚರಿಸುತ್ತವೆ. ಸಾವಿರಕ್ಕೂ ಅಧಿಕ ನಿರ್ವಾಹಕರು ಸೇವೆ ಸಲ್ಲಿಸುತ್ತಾರೆ. ಅವರೆಲ್ಲರಿಗೆ ಈ ಸೌಲಭ್ಯ ದೊರೆಯಲಿದೆ. ಸುರಕ್ಷಿತ ಸಾರಿಗೆ ಸೇವೆ ದೃಷ್ಟಿಯಿಂದ ಪ್ರಸ್ತುತ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ ಚಾಲನಾ ಸಿಬ್ಬಂದಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಬಸ್‌ಗಳು ಕೆಟ್ಟುನಿಂತರೆ ಪ್ರಯಾಣಿಕರ ಮೊಬೈಲ್‌ನಿಂದ ಮಾಹಿತಿ ನೀಡಬಹುದು. ಅಥವಾ ನಗರ ಸಾರಿಗೆ ವ್ಯಾಪ್ತಿಯಲ್ಲಿ ಸಾರಥಿಯಂತಹ ಗಸ್ತು ವಾಹನಗಳಿರುತ್ತವೆ. ಅವುಗಳ ಮೂಲಕವೂ ಮಾಹಿತಿ ರವಾನಿಸಲಾಗುತ್ತದೆ ಎಂದೂ ಅವರು ತಿಳಿಸಿದರು.
“ಚಾಲನಾ ಸಿಬ್ಬಂದಿಗೆ ಅಧಿಕೃತವಾಗಿ ಮೊಬೈಲ್ ಬಳಕೆ ನಿಷೇಧಿಸ ಲಾಗಿದ್ದರೂ, ಕೆಲವರು “ಎಮರ್ಜೆನ್ಸಿ’ಗಾಗಿ ಅನಧಿಕೃತವಾಗಿ ಮೊಬೈಲ್ ಗಳನ್ನು ಇಟ್ಟುಕೊಂಡಿರುತ್ತಾರೆ. ಬಿಡುವಿನ ವೇಳೆಯಲ್ಲಿ ಮಾತ್ರ ಬಳಸುತ್ತಾರೆ. ಹೀಗೆ ಅನಧಿಕೃತವಾಗಿ ಮೊಬೈಲ್ ಹೊಂದಿರುವುದು ಕಂಡುಬಂದರೆ ಅಂತಹವರ ವಿರುದ್ಧ ಈಗಲೂ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರು ಅಥವಾ ತಪಾಸಣಾ ಸಿಬ್ಬಂದಿ ನೀಡುವ ಮಾಹಿತಿಯನ್ನು ಆಧರಿಸಿ, ಸತ್ಯಾಂಶವನ್ನು ಪರಿಶೀಲಿಸಿ ಸದ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು. ಉತ್ತಮ ಸ್ಥಿತಿಯಲ್ಲಿನ ಬಸ್‌ಗಳ ವ್ಯವಸ್ಥೆ: ಇದಲ್ಲದೆ, ಪ್ರತ್ಯೇಕ ಪಥ ದಲ್ಲಿ ಬಸ್‌ಗಳು ಕೆಟ್ಟುನಿಂತರೆ ತಕ್ಷಣ ಸ್ಪಂದಿಸಲು ನಾಲ್ಕು ಮೊಬೈಲ್ ವ್ಯಾನ್ ಗಳನ್ನು ನಿಯೋಜಿಸಲಾಗುತ್ತಿದೆ.
ಕೆಲವೊಮ್ಮೆ ಸ್ಥಳದಲ್ಲೇ ರಿಪೇರಿ ಮಾಡ ಬಹುದಾಗಿರುತ್ತದೆ. ಈ ಬಗ್ಗೆ ಚಾಲನಾ ಸಿಬ್ಬಂದಿರೆ ಕರೆ ಮಾಡುತ್ತಿದ್ದಂತೆ ಅಂತಹ ಕಡೆಗಳಲ್ಲಿ ಇವು ನೆರವಿಗೆ ಧಾವಿಸಲಿವೆ. ಜತೆಗೆ ಉದ್ದೇಶಿತ ಮಾರ್ಗದಲ್ಲಿ ರೆಕ್ಕರ್ ಗಳನ್ನು ಕೂಡ ಅಳ ವಡಿಸಲಾಗುತ್ತಿದೆ. ಇವು ಕೂಡ ಒಂದು ಕಡೆಯಿಂದ ಮೊತ್ತೂಂದು ಕಡೆಗೆ ಕೊಂಡೊಯ್ಯು
ವಂತಹ ವ್ಯವಸ್ಥೆ ಹೊಂದಿದ್ದು, ಪ್ರತಿ ಐದು ಕಿ.ಮೀ.ಗೊಂದರಂತೆ ಐದು ಕಡೆ ಇಡಲಾಗುತ್ತಿದೆ. ಇದರಿಂದ ದುರಸ್ತಿಗೆ ಬಂದ ಬಸ್‌ಗಳನ್ನು ಸ್ಥಳಾಂತರಿಸಲು ಅನುಕೂಲ ಆಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಹಾಗಂತ, ದುರಸ್ತಿಗೆ ಬಂದಿ ರುವ ಬಸ್‌ಗಳನ್ನು ಇಲ್ಲಿಗೆ ನೀಡುತ್ತಿಲ್ಲ. ಎರಡು ಲಕ್ಷ ಕಿ.ಮೀ.ಗಿಂತ ಕಡಿಮೆ ಕಾರ್ಯಾಚರಣೆ ಮಾಡಿರುವ ವಾಹನಗಳನ್ನು ನಿಯೋಜಿಸ ಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಪ್ರತ್ಯೇಕ ಪಥದಲ್ಲಿ ಸಂಚಾರಕ್ಕೆ ತೊಂದರೆ ಆಗದರಿಲು ಈ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಪ್ರತ್ಯೇಕ ಪಥದ ಬಸ್‌ಗೆ ವಿಶಿಷ್ಟ ಸ್ಟಿಕ್ಕರ್? : ಪ್ರತ್ಯೇಕ ಪಥದಲ್ಲಿ ಸಂಚರಿಸುವ ಬಸ್‌ಗಳನ್ನು ಗುರುತಿಸಲು ವಿಶೇಷ ಸ್ಟಿಕರ್‌ಗಳನ್ನು ಕೂಡ ಅಂಟಿಸಲು ಬಿಎಂಟಿಸಿ ಸಿದ್ಧತೆ ನಡೆದಿದೆ. ಸಾರ್ವಜನಿಕ ಸಾರಿಗೆ ಹಾಗೂ ಅದಕ್ಕೆ ಪ್ರತ್ಯೇಕ ಪಥ ಕಲ್ಪಿಸುವುದು ಪರಿಸರ ಸ್ನೇಹಿ ಸಾರಿಗೆಗೆ ಪೂರಕವಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ಬಸ್‌ನ ಹೊರಭಾಗದಲ್ಲಿ ಪ್ರಯಾಣಿಕರಿಗೆ ಎದ್ದುಕಾಣುವಂತೆ ಹಸಿರು ಬಣ್ಣದ ಸ್ಟಿಕ್ಕರ್m ಅಂಟಿಸಲು ಉದ್ದೇಶಿಸಲಾಗಿದೆ. ವಾಯುವಜ್ರ, ಬಿಗ್ ಟ್ರಂಕ್, ಚಕ್ರದಂತೆಯೇ ಇದಕ್ಕೂ ನಾಮಕರಣ ಮಾಡುವ ಉದ್ದೇಶ ಇದ್ದು, ಇನ್ನೂ ಹೆಸರು ಅಂತಿಮಗೊಂಡಿಲ್ಲ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.
ಪ್ರತ್ಯೇಕ ಪಥದಲ್ಲಿ ಬಸ್‌ಗಳು ಕೆಟ್ಟುನಿಂತಾಗ ತ್ವರಿತವಾಗಿ ಸ್ಪಂದಿಸಲು ಆ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಚಾಲನಾ ಸಿಬ್ಬಂದಿಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಉಳಿದ ಮಾರ್ಗಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಇರಲಿದೆ. –ಸಿ.ಶಿಖಾ, ಬಿಎಂಟಿಸಿ ಎಂಡಿ
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.