ಬಸ್‌ಗಳಲ್ಲಿದ್ದ ಲಗೇಜುಗಳ ಸೌಕರ್ಯ ತೆರವು


Team Udayavani, Nov 29, 2018, 6:00 AM IST

bmtc.jpg

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬಂದು-ಹೋಗುವ ಪ್ರಯಾಣಿಕರ ಲಗೇಜುಗಳಿಗಾಗಿ ಬಿಎಂಟಿಸಿ ಬಸ್‌ಗಳ ವಿನ್ಯಾಸವನ್ನೇ ಬದಲಾಯಿಸಿದೆ. 

ಹೈಟೆಕ್‌ ಬಸ್‌ಗಳಲ್ಲೂ ಲಗೇಜು ಇಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಯಾಕೆ, ಪ್ರತಿಷ್ಠಿತರಿಗಾಗಿ ಬಸ್‌ಗಳಲ್ಲೇ ಪ್ರಾಯೋಗಿಕವಾಗಿ ಕೆಎಸ್‌ಆರ್‌ಟಿಸಿ ಶೌಚಾಲಯ ಪರಿಚಯಿಸಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಇದ್ದ ಲಗೇಜುಗಳ ಸೌಕರ್ಯವನ್ನೂ ತೆರವುಗೊಳಿಸಲಾಗಿದೆ!

ಈ ಹಿಂದೆ ಸರ್ಕಾರಿ ಬಸ್‌ಗಳ ಮೇಲೆ ಲಗೇಜು ಹಾಕಲು ಏಣಿಸಹಿತ ವ್ಯವಸ್ಥೆ ಇತ್ತು. ಇದರಿಂದ ಗ್ರಾಮೀಣ ಭಾಗದ ಜನ ಬಸ್‌ ಮೇಲೆ ಲಗೇಜುಗಳನ್ನು ಇಟ್ಟು, ಒಳಗಡೆ ಕುಳಿತು ಆರಾಮದಾಯಕ ಪ್ರಯಾಣ ಮಾಡುತ್ತಿದ್ದರು. ಪ್ರಯಾಣಿಕರ ಸ್ನೇಹಿಯಾಗಿದ್ದ ಈ ವ್ಯವಸ್ಥೆಯನ್ನು ಈಗ ತೆಗೆದು ಹಾಕಲಾಗಿದೆ. ಅಷ್ಟೇ ಅಲ್ಲ, ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಸಾಕುಪ್ರಾಣಿಗಳಿಗೂ ಟಿಕೆಟ್‌ ಕಡ್ಡಾಯಗೊಳಿಸಲಾಗಿದೆ.

ಇದಕ್ಕೆ ಪರ್ಯಾಯವಾಗಿ ಖಾಸಗಿ ಬಸ್‌ಗಳು ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರ ಆಗುತ್ತಿವೆ. ಬಸ್‌ಗಳ ಮೇಲೆ ಮಾತ್ರವಲ್ಲ; ಒಳಗಡೆ ಕೂಡ ಲಗೇಜು ಕೊಂಡೊಯ್ಯಲು ಅವಕಾಶ ಕಲ್ಪಿಸಿವೆ. ಅದೂ ಉಚಿತ ವ್ಯವಸ್ಥೆ! ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಬೇಕಾಗಿರುವ ಸಾರಿಗೆ ವ್ಯವಸ್ಥೆ ಈ ಮಾದರಿಯದ್ದು. ಯಾಕೆಂದರೆ, ಬೆಳಗಾದರೆ ತರಕಾರಿ, ಹಣ್ಣು-ಹಂಪಲು ಸೇರಿದಂತೆ ಮತ್ತಿತರ ವಸ್ತುಗಳನ್ನು ಹತ್ತಿರದ ಪಟ್ಟಣಗಳಿಗೆ ತೆಗೆದುಕೊಂಡು ಹೋಗುವುದು ಹಾಗೂ ಹಿಂತಿರುಗುವಾಗ ಸಂತೆ, ಊರಲ್ಲಿನ ದಿನಸಿ ಅಂಗಡಿಗಳಿಂದ ಬೇಕಾದ ವಸ್ತುಗಳೊಂದಿಗೆ ತೆರಳಲು ಪೂರಕವಾದ ಸಾರಿಗೆ ಸೇವೆಯನ್ನು ಹಳ್ಳಿಯ ಜನ ಬಯಸುತ್ತಾರೆ. ನಗರಕ್ಕೆ ಬೇಕಾದ ಸಾರಿಗೆ ವ್ಯವಸ್ಥೆಯನ್ನು ನಾವು ಕೊಡುವುದಾದರೆ, ಹಳ್ಳಿಗೆ ಬೇಕಾದ ವ್ಯವಸ್ಥೆಯನ್ನೂ ಕಲ್ಪಿಸುವುದು ಕರ್ತವ್ಯ ಅಲ್ಲವೇ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್‌ನ ಸಹ ಪ್ರಾಧ್ಯಾಪಕ ಡಾ.ಆಶಿಶ್‌ ವರ್ಮ ಪ್ರತಿಪಾದಿಸುತ್ತಾರೆ.

ಜನರಿಂದಲೂ ಬೇಡಿಕೆ ಬರಬೇಕು: ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಬಸ್‌ಗಳು ಹತ್ತಿರವಾಗಬೇಕಾದರೆ, ಬಸ್‌ಗಳ ವಿನ್ಯಾಸ ಬದಲಾಯಿಸುವ ಅಗತ್ಯವಿದೆ. ಅಂದರೆ, ಬೇಡಿಕೆಗೆ ಅನುಗುಣವಾಗಿ ಸೀಟುಗಳನ್ನು ಕಡಿಮೆ ಮಾಡಿ ಲಗೇಜುಗಳನ್ನು ಹಾಕುವ ವ್ಯವಸ್ಥೆ ಕಲ್ಪಿಸಬೇಕು. ಜನರಿಗೆ ಆರಾಮದಾಯಕ ಪ್ರಯಾಣವೂ ಆಗಿರಬೇಕು. ಈ ನಿಟ್ಟಿನಲ್ಲಿ ಜನರಿಂದಲೂ ಬೇಡಿಕೆಗಳು ಬರಬೇಕಾಗುತ್ತದೆ. ಬೆನ್ನಲ್ಲೇ ಖಾಸಗಿ ಬಸ್‌ಗಳಲ್ಲಿ ನಿಯಮ ಉಲ್ಲಂ ಸಿ ವಿನ್ಯಾಸ ಬದಲಾಯಿಸಿಕೊಂಡಿರುತ್ತಾರೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಸಾಗಣೆ ಮಾಡಲಾಗುತ್ತದೆ. ಇದರ ವಿರುದ್ಧ ಸಾರಿಗೆ ಇಲಾಖೆಯಿಂದ ತೀವ್ರ ಕಾರ್ಯಾಚರಣೆ ನಡೆಸಬೇಕು ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ ತಿಳಿಸುತ್ತಾರೆ.

ಬಸ್‌ಗಳ ಮೇಲೆ ಈ ಹಿಂದಿದ್ದ ಕ್ಯಾರಿಯರ್‌ನಲ್ಲಿ ಲಗೇಜುಗಳನ್ನು ಹಾಕುವುದರಿಂದ ಸೇತುವೆ, ತಿರುವುಗಳಲ್ಲಿ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಮೋಟಾರು ವಾಹನ ಕಾಯ್ದೆಯಡಿ ಅದನ್ನು ತೆರವುಗೊಳಿಸಲಾಗಿದೆ. ಆದರೆ, ಅದರ ಬದಲಿಗೆ ಸೀಟುಗಳನ್ನು ಎತ್ತರಿಸಿ, ಕೆಳಗಡೆ ಲಗೇಜು ವ್ಯವಸ್ಥೆ ಮಾಡಲಾಗಿದೆ. ಇದು ಹೈಟೆಕ್‌ ಬಸ್‌ಗಳಲ್ಲಿ ಮಾತ್ರ ಇದ್ದು, ಸಾಮಾನ್ಯ ಬಸ್‌ಗಳಲ್ಲಿ ಇಲ್ಲ. ಖಾಸಗಿ ಬಸ್‌ಗಳಲ್ಲಿ ಸಾಧ್ಯವಾದದ್ದು, ಸಾರಿಗೆ ಸಂಸ್ಥೆಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಚಿಂತನೆ ಮಾಡಬೇಕು ಎಂದು ಪ್ರೊ.ಶ್ರೀಹರಿ ಹೇಳುತ್ತಾರೆ.

ಶೇ. 99.9ರಷ್ಟು ಸೇವೆ; ಎಂಡಿ ಖಾಸಗಿ ಬಸ್‌ಗಳಿಗೆ ಹೋಲಿಸಿದರೆ, ಕೆಎಸ್‌ಆರ್‌ಟಿಸಿ ಅತಿ ಹೆಚ್ಚು ಗ್ರಾಮಗಳನ್ನು ತಲುಪಿದೆ. ರಾಷ್ಟ್ರೀಕರಣಗೊಂಡ ಮಾರ್ಗಗಳಲ್ಲಿ ನಮ್ಮ ಸೇವೆ ಶೇ.99.9ರಷ್ಟಿದೆ. ರಾಷ್ಟ್ರೀಕರಣಗೊಳ್ಳದ ಮಾರ್ಗಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಇಬ್ಬರ ಜವಾಬ್ದಾರಿಯೂ ಇರುತ್ತದೆ. ಅಲ್ಲಿ ಆಯಾ ಜಿಲ್ಲಾಮಟ್ಟದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಇರುತ್ತವೆ. ಅವು ಯಾವ್ಯಾವ ಮಾರ್ಗಗಳಲ್ಲಿ ಎಷ್ಟು ವಾಹನಗಳಿಗೆ ಪರ್ಮಿಟ್‌ಗಳನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತವೆ. ಇನ್ನು ಬಸ್‌ ಮೇಲಿನ ಲಗೇಜು ವ್ಯವಸ್ಥೆ ಅಪಾಯಕಾರಿ ಎಂಬ ಕಾರಣಕ್ಕೆ ಮೋಟಾರು ವಾಹನ ಕಾಯ್ದೆ ಅಡಿ ತೆರವುಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ ಸಮಜಾಯಿಷಿ ನೀಡುತ್ತಾರೆ.

4,699 ಹಳ್ಳಿಗಳಿಗೆ ಬಸ್‌ ಸಂಪರ್ಕ ಇಲ್ಲ
ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಬರುವ ಇನ್ನೂ 4,699 ಹಳ್ಳಿಗಳಿಗೆ ಬಸ್‌ ಸಂಪರ್ಕ ವ್ಯವಸ್ಥೆಯೇ ಇಲ್ಲ!
ನಿಗಮದ ವ್ಯಾಪ್ತಿಯಲ್ಲಿ 17 ಜಿಲ್ಲೆಗಳು ಬರುತ್ತವೆ. ಅದರಲ್ಲಿ ರಾಷ್ಟ್ರೀಕರಣಗೊಂಡ 7,326 ಹಾಗೂ ರಾಷ್ಟ್ರೀಕರಣಗೊಳ್ಳದ 13,466 ಹಳ್ಳಿಗಳು ಸೇರಿ ಒಟ್ಟಾರೆ 20,792 ಹಳ್ಳಿಗಳಿವೆ. ಆ ಪೈಕಿ 16,093 ಹಳ್ಳಿಗಳಿಗೆ ಬಸ್‌ ಸೌಲಭ್ಯ ಒದಗಿಸಲಾಗಿದೆ. ಉಳಿದ 4,699 ಹಳ್ಳಿಗಳಿಗೆ ಬಸ್‌ ಸಂಪರ್ಕ ಕಲ್ಪಿಸಬೇಕಿದೆ. ರಾಷ್ಟ್ರೀಕರಣಗೊಂಡ ಹಳ್ಳಿಗಳಿಗೆ ಬಸ್‌ ಸೇವೆ ನೀಡುವುದು ನಿಗಮದ ಹೊಣೆಯಾಗಿದ್ದು, ಶೇ. 99.9ರಷ್ಟು ಹಳ್ಳಿಗಳಿಗೆ ಅದು ಸೇವೆ ನೀಡುತ್ತಿದೆ. ಕೇವಲ ಏಳು ಹಳ್ಳಿಗಳು ಮಾತ್ರ ಈ ಸೇವೆಯಿಂದ ಹೊರಗುಳಿದಿವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಬಸ್‌ಗಳ ವಿನ್ಯಾಸ ಬದಲಾಯಿಸಬೇಕೆಂದರೆ ಖರ್ಚು ಹೆಚ್ಚಾಗುತ್ತದೆ. ಹೀಗೆ ಖರ್ಚು ಹೆಚ್ಚಳವಾದರೆ, ಸಂಸ್ಥೆಗೆ ಆರ್ಥಿಕ ಹೊರೆ ಆಗುತ್ತದೆ. ಆಗ, ಟಿಕೆಟ್‌ ದರ ಹೆಚ್ಚಳ ಮಾಡಬೇಕಾಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಇದು ಕಷ್ಟವಾಗುತ್ತದೆ. ಸರ್ಕಾರದ ಸಹಾಯಧನ ಸಿಕ್ಕರೆ, ಈ ನಿಟ್ಟಿನಲ್ಲಿ ಚಿಂತನೆ ಮಾಡಬಹುದು.
– ಎಸ್‌.ಆರ್‌. ಉಮಾಶಂಕರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ.

– ವಿಜಯಕುಮಾರ್‌ ಚಂದರಗ

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.