ಮ್ಯಾಂಗೋ ಪಿಕ್ಕಿಂಗ್ನಲ್ಲಿ 3 ಟನ್ ಮಾವು ಖರೀದಿ
Team Udayavani, Apr 30, 2017, 12:20 PM IST
ಬೆಂಗಳೂರು: “ಮ್ಯಾಂಗೋ ಪಿಕ್ಕಿಂಗ್ ಟೂರಿಸಂ’ ಕಾರ್ಯಕ್ರಮದಡಿ ಶ್ರೀನಿವಾಸಪುರ ಹಾಗೂ ಕನಕಪುರದ ಮಾವಿನ ತೋಟಗಳಿಗೆ ಭೇಟಿ ನೀಡಿದ ಬೆಂಗಳೂರಿನ ಗ್ರಾಹಕರು ಮೊದಲ ದಿನವೇ ಬರೋಬ್ಬರಿ 3 ಟನ್ಗಿಂತಲೂ ಹೆಚ್ಚು ಮಾವು ಖರೀದಿಸಿದ್ದಾರೆ.
ಮಾವಿನ ತೋಟಗಳಿಗೆ ಭೇಟಿ ನೀಡಿದ ಗ್ರಾಹಕರು ಅಲ್ಫಾನ್ಸೋ, ಸೇಂದೂರ, ಮಲ್ಲಿಕಾ, ದಶೇರಿ ಸೇರಿದಂತೆ ನಾನಾ ತಳಿಯ ಮಾವುಗಳಿಗೆ ಮುಗಿಬಿದ್ದರು. ರಸಾಯನಿಕ ಮುಕ್ತ ಮಾವು ಖರೀದಿಗೆ ಪೈಪೋಟಿಗೆ ಬಿದ್ದವರಂತೆ 8, 10, 12 ಕೆ.ಜಿ. ಖರೀದಿಸಿದ ಗ್ರಾಹಕರು, ತೋಟದಲ್ಲಿಯೇ ಮಾಗಿದ್ದ ಮಾವಿನ ಹಣ್ಣು ಸವಿದು ಸಂತೃಪ್ತರಾದರು.
ಇದಕ್ಕೂ ಮೊದಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಕಬ್ಬನ್ಪಾರ್ಕ್ನ ಬ್ಯಾಂಡ್ ಸ್ಟಾಂಡ್ ಸಮೀಪ ಶನಿವಾರ ಹಮ್ಮಿಕೊಂಡಿದ್ದ “ಮ್ಯಾಂಗೋ ಪಿಕ್ಕಿಂಗ್ ಟೂರಿಸಂ’ ಕಾರ್ಯಕ್ರಮಕ್ಕೆ ಮೇಯರ್ ಜಿ.ಪದ್ಮಾವತಿ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಅವರು, ಗ್ರಾಹಕರು ಮತ್ತು ಮಾವು ಬೆಳೆಗಾರರು ನೇರ ಸಂಪರ್ಕ ವ್ಯವಸ್ಥೆ ಕಲ್ಪಿಸಲು ನಿಗಮ ಆಯೋಜಿಸಿರುವ “ಮ್ಯಾಂಗೋ ಪಿಕ್ಕಿಂಗ್ ಟೂರಿಸಂ’ ಕಾರ್ಯಕ್ರಮ ಗ್ರಾಹಕರು ಮತ್ತು ರೈತರಿಬ್ಬರಿಗೆ ಅನುಕೂಲಕರವಾಗಿದೆ. ಈ ಉದ್ದೇಶದಿಂದಲೇ ನಿಗಮ ಜಾರಿಗೆ ತಂದಿರುವ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಮತ್ತಿತರರು ಇದ್ದರು.
ಬಣ್ಣ ನೋಡಿ ಮರುಳಾಗಿ ಹೆಚ್ಚು ದುಡ್ಡುಕೊಟ್ಟು ಖರೀದಿಸಿದರೂ ಉತ್ತಮ ರುಚಿಕರ ಮಾವು ಸಿಗುತ್ತಿಲ್ಲ. ಮಾವನ್ನು ಹಣ್ಣು ಮಾಡಲು ರಸಾಯನಿಕ ಬಳಸುತ್ತಿದ್ದು, ಆರೋಗ್ಯಕ್ಕೆ ಹಾನಿಕರವೂ ಹೌದು. ಮಾವು ಅಭಿವೃದ್ಧಿ ನಿಗಮದ ಈ ಯೋಜನೆ ತುಂಬಾ ಇಷ್ಟ ಆಯ್ತು. ಆರೋಗ್ಯಕರ ಹಣ್ಣು ತಿನ್ನಲು ಅವಕಾಶ ಸಿಕ್ಕಂತಾಗಿದೆ.
-ಸುರೇಖಾ, ಗೃಹಿಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.