ಕ್ಯಾಬ್ ಚಾಲಕರ ಮೊಬೈಲ್ ಕದಿಯುತ್ತಿದ್ದವನ ಸೆರೆ
Team Udayavani, Dec 31, 2017, 12:30 PM IST
ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಗ್ರಾಹಕನಂತೆ ಹೋಗಿ ಚಾಲಕರ ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ನಿಶಾಂತ್ (28) ಬಂಧಿತ. ಈತನಿಂದ 10 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಓಲಾ ಕ್ಯಾಬ್ ಬುಕ್ ಮಾಡಿ, ಕ್ಯಾಬ್‌ನಲ್ಲಿ ಸಂಚರಿಸುತ್ತಿದ್ದ. ಈ ವೇಳೆ ಚಾಲಕರನ್ನು ಪರಿಚಯಸಿಕೊಂಡು ನಿಮ್ಮ ಫೋನ್‌ಗೆ 1 ಜಿಬಿ ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಂಡು, ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಒಂದು ಲಕ್ಷ ರೂ. ಗೆಲ್ಲಬಹುದು ಎಂದು ನಂಬಿಸಿ ಮೊಬೈಲ್ ಪಡೆದು ಸ್ಥಳದಿಂದ ಪಾರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಮಾತು ನಂಬಿ ಮೊಬೈಲ್ ಕೊಡುತ್ತಿದ್ದ ಕ್ಯಾಬ್ ಚಾಲಕರಿಗೆ ಐದು ನಿಮಿಷ ಇಲ್ಲೇ ಇರಿ ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಂಡು ಬರುತ್ತೇನೆಂದು ಹೇಳುತ್ತಿದ್ದ. ಮೊಬೈಲ್‌ನಲ್ಲಿ ಇಂಟರ್‌ನೆಟ್ ಇದೆ ಎಂದರೂ, ಈ ಇಂಟರ್‌ನೆಟ್‌ನಿಂದ ಸಾಧ್ಯವಿಲ್ಲ ಎಂದು ಹೇಳಿ ಮೊಬೈಲ್ ಸಮೇತ ಪರಾರಿಯಾಗುತ್ತಿದ್ದ. ಎರಡು ಮೂರು ತಾಸುಗಳ ಕಾಲ ಈತನಿಗಾಗಿ ಚಾಲಕರು ಕಾದ ಬಳಿಕ ತಾವು ಮೋಸ ಹೋದ ವಿಚಾರ ತಿಳಿಯುತ್ತಿತ್ತು.
ಇದೇ ಮಾದರಿಯಲ್ಲಿ ಶನಿವಾರ ವಿಧಾನಸೌಧ ಬಳಿ ವಂಚಿಸಲು ಸಂಚು ರೂಪಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಈತನನ್ನು ಬಂಧಿಸಲಾಗಿದೆ. ನಿಶಾಂತ್ ಯಶವಂತಪುರದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದು, ಐಷಾರಾಮಿ ಜೀವನ ನಡೆಸಲು ಈ ರೀತಿಯ ಕೃತ್ಯವಸಗಿ ಕಳವು ಮೊಬೈಲ್‌ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.