Help Line: “ಇ-ಖಾತಾ ಬಗ್ಗೆ ಲಂಚ ಕೇಳಿದ್ರೆ 9480683695ಕ್ಕೆ ಕರೆ ಮಾಡಿ’
Team Udayavani, Dec 8, 2024, 11:28 AM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ)ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಇ-ಖಾತಾ ಪಡೆಯಲು ಅನುಕೂಲ ವಾಗುವ ನಿಟ್ಟಿನಲ್ಲಿ, ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಇ-ಖಾತಾ ಪಡೆ ಯುವ ವಿಚಾರದಲ್ಲಿ ಯಾರೇ ಲಂಚ ಕೇಳಿದರೆ ಅಥವಾ ವಿಳಂಬ ವಾದರೆ ನಾಗರಿಕ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಸಂಖ್ಯೆ 9480683695 ಪ್ರಾರಂಭಿಸಲಾಗಿದೆ. ಇ-ಖಾತಾ ಸಂಬಂಧಿಸಿದ ಗೊಂದಲಗಳನ್ನು ನಿವಾರಣೆ ಮಾಡಲು ಇದು ಸಹಾಯವಾಗಲಿದೆ. ಸಾರ್ವಜನಿಕರಲ್ಲಿ ಇ-ಖಾತಾ ಕುರಿತು ಯಾವುದೇ ರೀತಿಯ ಸಮಸ್ಯೆಗಳು ಇದ್ದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ. ಜತೆಗೆ ನಾಗರಿಕರು ತಾವೇ
ಆನ್ಲೈನ್ನಲ್ಲಿ ಇ-ಖಾತಾವನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ. ಆಂಗ್ಲ ಭಾಷೆ: :https://youtu.be/GL8CWs dn3woವೆಬ್ಸೈಟ್ ಸಂಪರ್ಕದ ಮೂಲಕ ವೀಕ್ಷಣೆ ಮಾಡಬಹುದಾಗಿದೆ ಎಂದರು.
200ಕ್ಕೂ ಅಧಿಕ ಕಂದಾಯ ಅಧಿಕಾರಿಗಳ ನಿಯೋಜನೆ: ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳನ್ನು ನಾಗರಿಕರಿಗೆ ಸುಗಮವಾಗಿ ಇ-ಖಾತಾ ನೀಡಲು ವಿಸ್ತರಿಸಲಾಗಿದೆ. 1000ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್ಗಳನ್ನು ನೀಡಲಾಗಿದೆ. 200ಕ್ಕೂ ಅಧಿಕ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾರಿಂದಾದರೂ ಅನಗತ್ಯ ವಿಳಂಬವಾದಲ್ಲಿ, ಪಾಲಿಕೆಯು ಕ್ರಮ ಕೈಗೊಳ್ಳಲಿದೆ. ಜತೆಗೆ ನಾಗರಿಕರು ಬದಲಿ ಸಹಾಯಕ ಕಂದಾಯ ಅ ಧಿಕಾರಿ ಇಲ್ಲವೆ ಕೇಸ್ ವರ್ಕರ್ಗಳನ್ನು ಸಹ ಭೇಟಿ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.