ಕ್ಯಾಮೆರಾ ಕಣ್ಗಾವಲಲ್ಲಿ ಯಲಹಂಕ
Team Udayavani, Jan 26, 2017, 11:48 AM IST
ಯಲಹಂಕ: ಯಲಹಂಕ ಕ್ಷೇತ್ರದ ಬಿಬಿಎಂಪಿ ವಾರ್ಡ್ಗಳ ವ್ಯಾಪ್ತಿಯ 400 ಆಯಕಟ್ಟಿನ ಸ್ಥಗಳಲ್ಲಿ ಸಿಸಿಕ್ಯಾಮರಾ ಅಳವಡಿಸಲಾಗುತ್ತಿದೆ. ಕೋಗಿಲು ವೃತ್ತದಲ್ಲಿ ಸಿಸಿಕ್ಯಾಮರಾ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಧ್ಯಮಗಳಿಗೆ ಈ ಬಗ್ಗೆ ವಿವರಣೆ ನೀಡಿದ ಶಾಸಕ ವಿಶ್ವನಾಥ್ “ಪೊಲೀಸ್ ಇಲಾಖೆ ಸೂಚಿಸುವ ಕಡೆಯಲ್ಲಿ ಕ್ಯಾಮರಾ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಇವು ಹೈ ಡೆಫಿನೇಷನ್ ಕ್ಯಾಮರಾಗಳಾಗಿದ್ದು, ರಾತ್ರಿ ವೇಳೆಯಲ್ಲೂ ಸ್ವಷ್ಟವಾಗಿ ಅರ್ದ ಕಿ.ಮೀ.ದೂರದವರೆಗೂ ಚಿತ್ರ ಸೆರೆಹಿಡಿಯುತ್ತದೆ. ಅಲ್ಲದೆ, 360ಡಿಗ್ರಿ ತಿರುಗುವ ಮೂಲಕ ಎಲ್ಲಾ ಕಡೆಗಳ ಚಿತ್ರಗಳನ್ನು ಸೆರೆಹಿಡಿಯಬಲ್ಲದು. ವಾಚ್ಡಾಗ್ ರೀತಿಯಲ್ಲಿ 24ಗಂಟೆ ಕೆಲಸ ಮಾಡಬಲ್ಲದು. ಕ್ಯಾಮೆರಾ ಅಳವಡಿಕೆಗೆ 40 ಲಕ್ಷ ರೂ ಅನುದಾನ ಮೀಸಲಿಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಬಿಬಿಎಂಪಿ ಪ್ರಾಯೋಜಿತರನ್ನು ತೊಡಗಿಸಲಾಗುವುದು,” ಎಂದು ಹೇಳಿದರು.
“ಕ್ಯಾಮೆರಾ ಅಳವಡಿಕೆಯಿಂದ ದುಷ್ಕೃತ್ಯ, ಕಳ್ಳತನ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಿ ಮಹತ್ವದ ಸಾಕ್ಷ್ಯ ಲಭ್ಯವಾಗಲಿದೆ. ರಾತ್ರಿ ಕಸ ಎಸೆಯುವುದು, ಲಾರಿಗಳಲ್ಲಿ ಕಸ ಸುರಿಯುವುದು, ಅನೈತಿಕ ಚಟುವಟಿಕೆ ಕಡಿವಾಣ ಹಾಕಲು ಇದರಿಂದ ಸಹಕಾರಿಯಾಗಲಿದೆ. ಯಲಹಂಕವನ್ನು ಅಪರಾಧರಹಿತ ಸ್ವಚ್ಚವಾದ ಸುಂದರ ನಗರವನ್ನಾಗಿ ಮಾಡಲಾಗುವುದು,” ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ ಬಿಜೆಪಿ ಯುವಮೋರ್ಚಾ ಸದಸ್ಯ ಕಡತನಮಲೆ ಸತ್ತಿಶ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.