ಕೈಲಾಸ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಲೈಸೆನ್ಸ್‌ ರದ್ದು


Team Udayavani, Jan 10, 2018, 12:02 PM IST

kailash-bar].jpg

ಬೆಂಗಳೂರು: ಶಾರ್ಟ್‌ ಸರ್ಕಿಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಐವರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಸಿಪಾಳ್ಯದ “ಕೈಲಾಸ್‌’ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಟ್ರೇಡ್‌ ಲೈಸೆನ್ಸ್‌ಅನ್ನು ಬಿಬಿಎಂಪಿ ರದ್ದುಗೊಳಿಸಿದೆ.

ಬಹುಮಹಡಿ ಕಟ್ಟಡದಲ್ಲಿ ಇರಬೇಕಾದ ಸುರಕ್ಷತಾ ಕ್ರಮಗಳು ಇಲ್ಲದಿರುವುದು ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಅಗ್ನಿ ಸುರಕ್ಷತಾ ಸಾಧನ ಅಳವಡಿಸಿಕೊಂಡಿಲ್ಲದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪರವಾನಗಿ ರದ್ದು ಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೂಂದೆಡೆ ಪ್ರಕರಣದ ತನಿಖೆ ಮುಂದುವರಿಸಿರುವ ಕಲಾಸಿಪಾಳ್ಯ ಪೊಲೀಸರು ಮಂಗಳವಾರ ಬಿಬಿಎಂಪಿ, ಅಬಕಾರಿ, ಕಾರ್ಮಿಕ ಇಲಾಖೆ, ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಹಾಗೂ ಬೆಸ್ಕಾಂಗೆ ಪತ್ರ ಬರೆದಿದ್ದು, ಕಟ್ಟಡದಲ್ಲಿ ನಿಯಮಾವಳಿ ಪಾಲಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾಹಿತಿ ಕೋರಿದ್ದಾರೆ.

ಕೈಲಾಸ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಇದ್ದ ಕಟ್ಟಡಕ್ಕೆ ನಕ್ಷೆ ಪರವಾನಗಿ ಇದೆಯೇ? ನಿಯಮ ಉಲ್ಲಂಘನೆಯಾಗಿದೆಯೇ? ಎಂಬ ಮಾಹಿತಿ ಕೇಳಿದ್ದಾರೆ. ಹಾಗೆಯೇ ಅಬಕಾರಿ ಇಲಾಖೆ ಪರವಾನಗಿ ಕೊಟ್ಟಿದ್ದು ಯಾವಾಗ ? ಪರವಾನಗಿಯ ಷರತ್ತುಗಳೇನು? ಮತ್ತು ಬಾರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಮಾಹಿತಿ ಮಾಹಿತಿ ನೀಡಿದ್ದರೇ? ಎಂಬ ಮಾಹಿತಿ ಕೋರಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

ಎಫ್ಎಸ್‌ಎಲ್‌ ತಂಡ ಭೇಟಿ: ಮಂಗಳವಾರ ಬೆಳಗ್ಗೆ ವಿಧಿವಿಜ್ಞಾನ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸುಟ್ಟು ಕರಕಲಾಗಿರುವ ವೈರ್‌ ಸಂಗ್ರಹಿಸಿದ್ದಾರೆ. ಬೆಸ್ಕಾಂನ ಎಂಜಿನಿಯರ್‌ ತಂಡ ಸಹ ಭೇಟಿ ನೀಡಿ ಶಾರ್ಟ್‌ಸರ್ಕಿಟ್‌ ಸಂಭವಿಸಲು ಕಾರಣವೇನು ಎಂಬ ಬಗ್ಗೆ ಕೆಲವೊಂದು ವಸ್ತುಗಳನ್ನು ಕೊಂಡೊಯ್ದಿದ್ದಾರೆ. ಈ ಎರಡು ತಂಡಗಳು 10 ದಿನಗಳಲ್ಲಿ ವರದಿ ನೀಡಲಿವೆ ಎಂದು ಅಧಿಕಾರಿ ವಿವರಿಸಿದರು.

ಶೆಟ್ಟರ್‌ ಆಗ್ರಹ: ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಐವರು ಮೃತಪಟ್ಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ನಿಯಮಾವಳಿ ಪ್ರಕಾರ ನಡೆಯುತ್ತಿವೆಯೇ? ಕಟ್ಟಡಗಳಲ್ಲಿ ಎಲ್ಲ ಸುರಕ್ಷತಾ ಕ್ರಮ ಇದೆಯೇ? ಎಂಬ ಬಗ್ಗೆ ಅಬಕಾರಿ ಇಲಾಖೆ ತಪಾಸಣೆ ನಡೆಸಬೇಕು. ವರ್ಷಕ್ಕೊಮ್ಮೆ ನವೀಕರಣ ಸಂದರ್ಭದಲ್ಲಿ ಮಾಮೂಲಿ ಪಡೆದು ಕೋಟ್ಯಂತರ ರೂ. ಹಣ ಸಂಗ್ರಹ ಮಾಡುವುದಷ್ಟೇ ಕಾಯಕವಲ್ಲ. ಮುಂದೆ ಇಂತಹ ದುರ್ಘ‌ಟನೆ ನಡೆಯದಂತೆ ಎಚ್ಚರಿಕೆ ವಹಿಸಲಿ ಎಂದು ಆಗ್ರಹಿಸಿದರು.

ಟಾಪ್ ನ್ಯೂಸ್

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್

Snaehamayi-krishna-GTD

MUDA: ಮಗಳ-ಅಳಿಯಗೆ ಮುಡಾ ಸೈಟ್‌: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು

Congress-Symbol

CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ

2-bbk-11

BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್

Sringeri-DKS

Devotee: ಟೆಂಪಲ್‌ ರನ್‌ ಎನ್ನುವುದಾದರೆ ದೇಗುಲಗಳನ್ನು ಮುಚ್ಚಿಬಿಡಿ: ಡಿ.ಕೆ.ಶಿವಕುಮಾರ್‌

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

Jai Hanuman: ರಿಷಬ್‌ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು

CT-Ravi-Threat

Threat: ಹೆಬ್ಬಾಳ್ಕರ್‌ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ

Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

3-shimogga

Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್

Snaehamayi-krishna-GTD

MUDA: ಮಗಳ-ಅಳಿಯಗೆ ಮುಡಾ ಸೈಟ್‌: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು

Congress-Symbol

CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ

2-bbk-11

BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.