ಜನತಾ ಕರ್ಫ್ಯೂಗೆ ರಾಜಧಾನಿ ಸಜ್ಜು


Team Udayavani, Mar 21, 2020, 11:17 AM IST

ಜನತಾ ಕರ್ಫ್ಯೂಗೆ ರಾಜಧಾನಿ ಸಜ್ಜು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯ ಮೇರೆಗೆ ಭಾನುವಾರ ಬೆಂಗಳೂರು ಬಹುತೇಕ ಸ್ತಬ್ಧಗೊಳ್ಳಲಿದೆ. ಸಮೂಹ ಸಾರಿಗೆಗಳು, ಮನರಂಜನಾ ತಾಣಗಳು, ಪಬ್‌-ಕ್ಲಬ್‌ ಗಳು, ಮದ್ಯದ ಅಂಗಡಿಗಳು, ಮಾರುಕಟ್ಟೆಗಳು ಸೇರಿದಂತೆ ಜನ ಸೇರುವ ಸ್ಥಳಗಳನ್ನು ಸ್ವಯಂಪ್ರೇರಿತವಾಗಿ “ಬಂದ್‌’ ಮಾಡಿ, ಜನತಾ ಕರ್ಫ್ಯೂಗೆ ಕೈಜೋಡಿಸಲು ಇಡೀ ನಗರ ಸಜ್ಜಾಗಿದೆ.

ಆದರೆ ಹೆಚ್ಚು ಜನ ಸೇರುವ ಮೆಟ್ರೋ, ಬಸ್‌ನಂತಹ ಸೇವೆಗಳನ್ನು ಕಡಿತಗೊಳಿಸಲಿಕ್ಕೂ ಪ್ರಧಾನಿ ಕರೆ ನೀಡುವವರೆಗೆ ಕಾಯಬೇಕಿತ್ತಾ? ಸರ್ಕಾರಗಳಿಗೆ ಮುಂಚಿತವಾಗಿಯೇ ಇಂತಹ ಮಹಾಮಾರಿ ಹರಡುವುದನ್ನು ತಡೆಯಲು 15-20 ದಿನಗಳ ಮೊದಲೇ ಕ್ರಮ ಕೈಗೊಳ್ಳಬಹುದಾಗಿತ್ತಲ್ಲವೇ? ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುವ ಜನರನ್ನು ಅಲ್ಲಿಯೇ ಆಸುಪಾಸು “ಗೃಹ ಬಂಧನ’ ರೀತಿಯಲ್ಲಿ ನಿಗಾ ಇಡಲು ಅವಕಾಶ ಇತ್ತು. ಇದು ಊರು ಕೊಳ್ಳೆಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಲಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಅಪಸ್ವರಗಳ ನಡುವೆಯೂ ಬೆಂಗಳೂರಿಗರು ವಿವಿಧ ಸಂಘ-ಸಂಸ್ಥೆಗಳು ಭಾನುವಾರದ “ಜನತಾ ಕರ್ಫ್ಯೂ’ಗೆ ಬೆಂಬಲ ವ್ಯಕ್ತಪಡಿಸಿವೆ.

ಸಂಚಾರ ನಾಡಿ ಸ್ತಬ್ಧ: ನಿತ್ಯ ಲಕ್ಷಾಂತರ ಜನರನ್ನು ಕೊಂಡೊಯ್ಯುವ “ನಮ್ಮ ಮೆಟ್ರೋ’ ಮತ್ತು ಬಿಎಂಟಿಸಿ ಬಸ್‌ಗಳು, ಆ್ಯಪ್‌ ಆಧಾರಿತ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳು ಸ್ವಯಂಪ್ರೇರಿತವಾಗಿ ರಸ್ತೆಗಿಳಿಸದಿರಲು ನಿರ್ಧರಿಸಿವೆ. ಆ ಮೂಲಕ “ಜನತಾ ಕರ್ಫ್ಯೂ’ಗೆ ಕೈಜೋಡಿಸಲಿವೆ. ಇದರಿಂದ ನಗರದ “ಸಂಚಾರ ನಾಡಿ’ ಬಹುತೇಕ ಸ್ಥಗಿತಗೊಳ್ಳಲಿದ್ದು, ಒಂದು ವೇಳೆ ಜನ ರಸ್ತೆಗಿಳಿಯುವುದಾದರೆ, ಸ್ವಂತ ವಾಹನಗಳ ಮೊರೆಹೋಗುವುದು ಅಗತ್ಯ ಮತ್ತು ಅನಿವಾರ್ಯ ಆಗಲಿದೆ. ಬಿಎಂಟಿಸಿ ಬಸ್‌ಗಳು ವಾರಾಂತ್ಯದಲ್ಲಿ ಅಂದರೆ ಶನಿವಾರ ಶೇ. 50 ಬಸ್‌ಗಳ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಭಾನುವಾರ ಈ ಸೇವೆ ಕೇವಲ ಶೇ. 20ಕ್ಕೆ ಕುಸಿಯಲಿದೆ. ಅದೂ ಸಂಚಾರದಟ್ಟಣೆ ಮತ್ತು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಅವುಗಳು ಸಂಚರಿಸಲಿವೆ. ಅಗತ್ಯ ಸೇವೆ ವ್ಯಾಪ್ತಿಗೆ ಬಿಎಂಟಿಸಿ ಬರುವುದರಿಂದ, ಸಂಪೂರ್ಣವಾಗಿ ಸ್ಥಗಿತಗೊಳಿಸಲು ಆಗುವುದಿಲ್ಲ ಎಂದು ಸಂಸ್ಥೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು “ನಮ್ಮ ಮೆಟ್ರೋ’ ಸೇವೆ ಭಾನುವಾರ ಇಡೀ ದಿನ ಇರುವುದಿಲ್ಲ. ಸೋಂಕು ಹರಡುವುದನ್ನು ತಡೆಯಲು ಅಂದು ಸಾರ್ವಜನಿಕರು ಮನೆಯಲ್ಲಿಯೇ ಉಳಿಯಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಟ್ವೀಟ್‌ ಮಾಡಿದೆ.

ಹಿರಿಯರು- ಕಿರಿಯರಿಗೆ ನಿರ್ಬಂಧ: ಸುರಕ್ಷತಾ ಕ್ರಮಗಳ ಬಗ್ಗೆಯೂ ಪ್ರಕಟಣೆಯಲ್ಲಿ ಮೆಟ್ರೋ ನಿಗಮವು ವಿವರಿಸಿದೆ. ಅದರಂತೆ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದ ಒಳಗಿನವರಿಗೆ ಸೋಂಕು ಬೇಗ ಹರಡುವ ಕಾರಣ, ಮೆಟ್ರೊ ರೈಲಿನಲ್ಲಿ ಇವರ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. ತೀರಾ ಅಗತ್ಯವಿದ್ದಲ್ಲಿ ಮಾತ್ರ ಮೆಟ್ರೋ ರೈಲು ಬಳಸಿ. ಅನಗತ್ಯ ಪ್ರಯಾಣ ಬೇಡ ಎಂದು ಮನವಿ ಮಾಡಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ (ಥರ್ಮಲ್‌ ಸ್ಕ್ಯಾನಿಂಗ್‌) ಮಾಡಲಾಗುವುದು. ರೈಲಿನಲ್ಲಿ ಪ್ರಯಾಣಿಕರು ನಿಗದಿತ ಅಂತರ ಕಾಯ್ದುಕೊಳ್ಳದಿದ್ದರೆ, ಬೋಗಿ ಹೆಚ್ಚು ಪ್ರಯಾಣಿಕರಿಂದ ತುಂಬಿದ್ದರೆ ಮುಂದಿನ ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.

ಸುರಿದ ಮಳೆ; ಏರಿದ ಆತಂಕ! : ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆ ನಗರದಲ್ಲಿ ದಿಢೀರ್‌ ಮಳೆ ಆಗಮನವಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಸಾಮಾನ್ಯವಾಗಿ ತಾಪಮಾನ ಹೆಚ್ಚಾದಾಗ ವೈರಸ್‌ಹರಡುವ ಸಾಧ್ಯತೆ ಕಡಿಮೆ. ಬಿಸಿಲಿನ ಧಗೆಯ ನಡುವೆಯೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಮಧ್ಯೆ ಶುಕ್ರವಾರ ತಂಪೆರೆದ ಮಳೆ ಜನರಲ್ಲಿ ಆತಂಕ ಮೂಡಿಸಿದ್ದು, ಒಂದು ವೇಳೆ ಈ ಮಳೆ ವಾರಗಟ್ಟಲೆ ಇದೇ ರೀತಿ ಮುಂದುರಿದರೆ, ತಾಪಮಾನ ಇಳಿಕೆ ಆಗಲಿದೆ. ಆಗ, ಸೋಂಕು ಏರಿಕೆಯಾಗುವ ಸಾಧ್ಯತೆ ಹೆಚ್ಚು ಎನುತ್ತಾರೆ ನಿಮ್ಹಾನ್ಸ್‌ ವೈದ್ಯ ಡಾ.ರವಿ. ಶುಕ್ರವಾರ ನಗರದ ಕೆಂಗೇರಿ, ಮೆಜೆಸ್ಟಿಕ್‌, ಮಲ್ಲೇಶ್ವರ, ಜಯನಗರ, ಹಂಪಿನಗರ, ಹಲಸೂರು, ಶಿವಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಕೊರೊನಾ ಹಿನ್ನೆಲೆ ಜನರ ಓಡಾಟ ಕಡಿಮೆಯಾಗಿತ್ತು.

ಅಗತ್ಯವಿದ್ದಲ್ಲಿ ಮಾತ್ರ ಸೇವೆ : ಮಾರ್ಚ್‌ 22ರಂದು ಅಗತ್ಯವಿದ್ದಲ್ಲಿ ಮಾತ್ರ ಬೆಳಗ್ಗೆಯಿಂದ ರಾತ್ರಿ 9 ಗಂಟೆವರೆಗೆ ಬಸ್‌ ಸೇವೆ ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ. ಇನ್ನು 21ರಂದು ರಾತ್ರಿ ತಂಗುವ ಮಾರ್ಗದ ಬಸ್‌ಗಳನ್ನು ಹತ್ತಿರದ ಘಟಕಗಳಿಗೆ ತೆರಳಲು ಸೂಚಿಸಲಾಗಿದೆ. 22ರ ರಾತ್ರಿ 9ರ ನಂತರ ರಾತ್ರಿ ಸೇವೆಯ ಬಸ್‌ಗಳಿಗೆ ಮುಂಗಡ ಕಾಯ್ದಿರಿಸಿದಲ್ಲಿ ಮಾತ್ರ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು. ಅಥವಾ ಜನಸಂದಣೆ ಇದ್ದಲ್ಲಿ ಕಾರ್ಯಾಚರಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ನಟ-ನಟಿಯರ ಬೆಂಬಲ :  ನಟಿ ರಾಗಿಣಿ, ನಟ ಸತೀಶ್‌ ನೀನಾಸಂ ಮೊದಲಾದವರು ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಒಳ್ಳೆಯ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕಾಗುತ್ತದೆ. ಭಾನುವಾರ ಇಡೀ ದಿನ ಎಲ್ಲರೂ ಮನೆಯಲ್ಲೇ ಇರಲು ತೀರ್ಮಾನಿಸಿದ್ದೇವೆ. ಕೋವಿಡ್ 19 ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಿಗೆ ನಿಲ್ಲುತ್ತೇವೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ರಾಮಕೃಷ್ಣ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಶಿವಕುಮಾರ್‌ ತಿಳಿಸಿದ್ದಾರೆ.

ಹೋಟೆಲ್‌ಗ‌ಳೂ ಇರಲ್ಲ? : ಪ್ರಧಾನಿ ಕರೆಯ ಮೇರೆಗೆ ಜನತಾ ಕರ್ಫ್ಯೂಗೆ ಕ್ಯಾಬ್‌, ಹೋಟೆಲ್‌ ಮತ್ತಿತರ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಅಂದು ಹೋಟೆಲ್‌-ರೆಸ್ಟೋರೆಂಟ್‌, ಸ್ವೀಟ್‌ ಸ್ಟಾಲ್‌ಗ‌ಳು, ಬೇಕರಿಗಳು ಸಂಪೂರ್ಣವಾಗಿ ಬಂದ್‌ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿವೆ. ಒಂದು ದಿನ ಗ್ರಾಹಕರು, ಕಾರ್ಮಿಕರು, ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಬೇಕು ಎಂದು ಹೋಟೆಲ್‌ ಸಂಘಟನೆಯ ಅಧ್ಯಕ್ಷ ಪಿ.ಸಿ. ರಾವ್‌ ಮನವಿ ಮಾಡಿದ್ದಾರೆ.

ಎಚ್‌ಡಿಡಿ ಬೆಂಬಲ :  ಜನತಾ ಕರ್ಫ್ಯೂ ಸಂಬಂಧ ಪ್ರಧಾನಿ ನರೇಂದ್ರಮೋದಿ ಅವರ ಕರೆಗೆ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಪ್ರಧಾನಿಯವರು ನೀಡಿರುವ ಕರೆಯನ್ನು ನಾವೆಲ್ಲರೂ ಪಾಲಿಸಲೇಬೇಕು ಎಂದು ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷ ಒಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದು ಪ್ರಧಾನಿಯವರ ಆಗ್ರಹಪೂರ್ವಕ ವಿನಂತಿಯ ಹಿಂದಿರುವ ಕಾಳಜಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

2 ವಾರ ಕೋರ್ಟ್‌ ಮುಚ್ಚಲು ಪತ್ರ :  ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ನ್ಯಾಯಾಲಯಗಳನ್ನು ಎರಡು ವಾರ ಮುಚ್ಚಲು ಆದೇಶ ನೀಡಬೇಕು ಎಂದು ಮನವಿ ಮಾಡಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ.

ಅರಿವು ಕಾರ್ಯಕ್ರಮ :  ಕೋವಿಡ್ 19 ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್‌ ಬಳಸುವ ಸಂಬಂಧ ವಕೀಲರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹೈಕೋರ್ಟ್‌ನಲ್ಲಿ ಐದು ವರ್ಷಗಳ ಕಾನೂನು ಪದವಿ ವಕೀಲರ ಸಂಘ ಹಮ್ಮಿಕೊಂಡಿತ್ತು. ಸಂಘದ ಅಧ್ಯಕ್ಷ ಡಾ.ಎಸ್‌.ಉಮೇಶ್‌ ಶುಕ್ರವಾರ ಹೈಕೋರ್ಟ್‌ ಆವರಣಕ್ಕೆ ಭೇಟಿ ನೀಡಿದ ವಕೀಲರು, ಕಕ್ಷಿದಾರರು, ಸಿಬ್ಬಂದಿ ಕೈಗಳಿಗೆ ಸ್ಯಾನಿಟೈಸರ್‌ ಹಾಕಿ ಅರಿವು ಮೂಡಿಸಿದರು.

ಪೀಣ್ಯ ಕೈಗಾರಿಕೆಗಳ ಸಾಥ್‌ :  “ಜನತಾ ಕರ್ಫ್ಯೂ ‘ಗೆ ಪೀಣ್ಯ ಕೈಗಾರಿಕೆಗಳು ಕೂಡ ಕೈ ಜೋಡಿಸಿದ್ದು, ಅಲ್ಲಿನ 8,500 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿಲ್ಲ. ಸಾಮಾನ್ಯವಾಗಿ ಭಾನುವಾರ ಶೇ.50ರಷ್ಟು ಕೈಗಾರಿಕೆಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ, ಈ ವಾರ ಸಂಪೂರ್ಣವಾಗಿ ಬಂದ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ಪೀಣ್ಯಾ ಕೈಗಾರಿಕಾ ಸಂಘದ ಹಿರಿಯ ಉಪಾಧ್ಯಕ್ಷ ಸಿ. ಪ್ರಕಾಶ್‌ ತಿಳಿಸಿದ್ದಾರೆ.

ಪೊಲೀಸರ ಜಾಗೃತಿ ಅಭಿಯಾನ : ರಾಜಧಾನಿಯಲ್ಲಿ ಕೋವಿಡ್ 19  ಸೋಂಕು ತಡೆ ಕುರಿತ ಜಾಗೃತಿ ಅಭಿಯಾನಕ್ಕೆ ನಗರ ಪೊಲೀಸರು ಮುಂದಾಗಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗ ಪೊಲೀಸರು “ಅರೆಸ್ಟ್‌ ಕೊರೊನಾ’ ಹೆಸರಿನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಂಚಾರ ವಿಭಾಗ ಪೊಲೀಸರು ಶುಕ್ರವಾರ ಕ್ವಿನ್ಸ್‌ ಜಂಕ್ಷನ್‌, ಚಾಲುಕ್ಯ ವೃತ್ತ ಸೇರಿ ನಗರದ 20ಕ್ಕೂ ಅಧಿಕ ಸಿಗ್ನಲ್‌ಗ‌ಳಲ್ಲಿ ಆಯಾ ವಿಭಾಗದ ಸಂಚಾರ ಪೊಲೀಸರು ಜನರಲ್ಲಿ ಅರಿವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಂಗಿಕ ಸನ್ನೆಗಳ ಮೂಲಕ ತಿಳಿಸಿಕೊಟ್ಟರು. ಜತೆಗೆ ಧ್ವನಿವರ್ಧಕದ ಮೂಲಕವೂ ಕೊರೊನಾ ತಡೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.