ಕೈ ಕಚ್ಚಿದ ಮಹಿಳೆಯ ಕೊಂದ ಚಾಲಕ ಸೆರೆ
Team Udayavani, May 12, 2019, 3:04 AM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಕ್ಯಾಬ್ ಚಾಲಕ ಸುಬ್ರಹ್ಮಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಭರತ್ ಅಲಿಯಾಸ್ ಗುಂಡ (26) ಬಂಧಿತ ಕ್ಯಾಬ್ ಚಾಲಕ. ಆರೋಪಿ, ಮೇ 6ರಂದು ಇಸ್ರೋ ಲೇಔಟ್‌ನ ವಲ್ಲಭನಗರದ ಭಾಗ್ಯಮ್ಮ (45) ಎಂಬಾಕೆಯ ಕತ್ತುಕೊಯ್ದು ಬರ್ಬರವಾಗಿ ಕೊಂದಿದ್ದ.
ಹಲವು ವರ್ಷಗಳಿಂದ ಕುಮಾರಸ್ವಾಮಿ ಲೇಔಟ್‌ನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಮಂಡ್ಯ ಮೂಲದ ಭಾಗ್ಯಮ್ಮ, ಅವರ ಪತಿ 20 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಕೆಲ ವರ್ಷಗಳ ಹಿಂದೆ ಇದ್ದ ಒಬ್ಬ ಮಗನೂ ಮೃತಪಟ್ಟಿದ್ದ.
ಹೀಗಾಗಿ ಭಾಗ್ಯಮ್ಮ ವಲ್ಲಭನಗರದಲ್ಲಿ ಸಣ್ಣದೊಂದು ಕಟ್ಟಡದ ಮಹಡಿ ಮೇಲೆ ಶೀಟ್ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಅದೇ ಕಟ್ಟಡದ ನೆಲ ಮಹಡಿಯ ಬಾಡಿಗೆ ಮನೆಯಲ್ಲಿ ಆರು ತಿಂಗಳಿಂದ ಸ್ನೇಹಿತನ ಜತೆ ಆರೋಪಿ ಭರತ್ ವಾಸವಾಗಿದ್ದ.
ಕ್ಯಾಬ್ ಚಾಲಕನಾಗಿರುವ ಆರೋಪಿ, ಪ್ರತಿನಿತ್ಯ ಸ್ನೇಹಿತರನ್ನು ಮನೆಗೆ ಕರೆತಂದು ಪಾರ್ಟಿ ಮಾಡುತ್ತಿದ್ದ. ಮೇ 6ರಂದು ರಾತ್ರಿ ಕೂಡ ಮದ್ಯದ ಅಮಲಿನಲ್ಲಿ ಸ್ನೇಹಿತರೆಲ್ಲರೂ ಜೋರಾಗಿ ಮಾತನಾಡುತ್ತಿದ್ದರು. ಇದು ಭಾಗ್ಯಮ್ಮನಿಗೆ ಕಿರಿಕಿರಿ ಉಂಟು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೈ ಕಚ್ಚಿದ ಭಾಗ್ಯಮ್ಮ: ಕೂಡಲೇ ಆರೋಪಿ ಮನೆ ಬಳಿ ಹೋದ ಭಾಗ್ಯಮ್ಮ, ಆತನನ್ನು ನಿಂದಿಸಿ ಪೊರಕೆಯಿಂದ ಹೊಡೆದಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದಲ್ಲಿ ಭಾಗ್ಯಮ್ಮ, ಭರತ್‌ನ ಕೈ ಕಚ್ಚಿ ಅಲ್ಲಿಂದ ಮನೆಗೆ ಹೋಗಿದ್ದರು.
ಅದರಿಂದ ಆಕ್ರೋಶಗೊಂಡ ಆರೋಪಿ, ಮದ್ಯದ ಅಮಲಿನಲ್ಲಿ, ಚಾಕು ತೆಗೆದುಕೊಂಡು ಭಾಗ್ಯಮ್ಮ ಅವರ ಮನೆಗೆ ಹೋಗಿ ಆಕೆಯ ಕತ್ತುಕೊಯ್ದು, ನಾಲೆª„ದು ಬಾರಿ ಹೊಟ್ಟೆಗೆ ಇರಿದು ಕೊಂದು, ಮನೆ ಬಾಗಿಲು ಹಾಕಿಕೊಂಡು ಕನಕಪುರದ ಕಡೆ ಹೋಗಿದ್ದ ಎಂದು ಪೊಲೀಸರು ಹೇಳಿದರು.
ಸ್ಥಳೀಯರು ನೀಡಿದ ಮಾಹಿತಿ: ಭಾಗ್ಯಮ್ಮ ಮೂರು ದಿನಗಳಿಂದ ಹೂವಿನ ವ್ಯಾಪಾರಕ್ಕೆ ಬಾರದಿದ್ದ ಕಾರಣ ಆಕೆಯಿಂದ ಪಿಗ್ಮಿ ಹಣ ಕಟ್ಟಿಸಿಕೊಳ್ಳುವರು ಹಾಗೂ ಸ್ಥಳೀಯರು ಮಂಡ್ಯದಲ್ಲಿರುವ ಅವರ ಸಹೋದರನಿಗೆ ಪೋನ್ ಮಾಡಿ ಕೇಳಿದ್ದು, ಅವರು, ಇಲ್ಲಿಗೆ ಬಂದಿಲ್ಲ ಎಂದಿದ್ದರು. ಅನುಮಾನದ ಮೇರೆಗೆ ಅವರ ಮನೆ ಬಳಿ ಹೋದಾಗ ದುರ್ವಾಸನೆ ಬಂದಿದ್ದು, ಕೂಡಲೇ ಸುಬ್ರಹ್ಮಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳೀಯರನ್ನು ವಿಚಾರಿಸಿದಾಗ ಕೆಲ ದಿನಗಳ ಹಿಂದೆ ಭರತ್ ಜತೆ ಜಗಳ ಮಾಡಿದ್ದ ವಿಚಾರ ತಿಳಿಸಿದ್ದರು. ಈ ಮಾಹಿತಿ ಆಧರಿಸಿ, ಕನಕಪುರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.