ಅಮಾಯಕರ ಥಳಿಸುವ ಸುನಾಮಿ ಕಿಟ್ಟಿ ವಿಡಿಯೋದಲ್ಲಿ ಸೆರೆ!
Team Udayavani, Mar 5, 2018, 12:03 PM IST
ಬೆಂಗಳೂರು: ಅಪಹರಣ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಿಯಾಲಿಟಿ ಸ್ಟಾರ್ ಸುನಾಮಿ ಕಿಟ್ಟಿ ಮತ್ತವನ ತಂಡ, ತೌಶಿತ್ ಹಾಗೂ ಬಾರ್ ಸಪ್ಲೆಯರ್ ಗಿರೀಶ್ ಮೇಲೆ ದೌರ್ಜನ್ಯ ಎಸಗುತ್ತಿರುವ ಎರಡು ವಿಡಿಯೋಗಳು ಪತ್ತೆಯಾಗಿವೆ.
ಫೆ.28ರಂದು ಗಿರೀಶ್ ಮತ್ತು ದೀಪಾ ಸ್ನೇಹಿತ ತೌಶಿತ್‌ನನ್ನು ಅಪಹರಿಸಿದ ಆರೋಪಿಗಳು ದೀಪಾ ಪತಿ ಸುನೀಲ್ ಮಾಲೀಕತ್ವದ ಹೊರಮಾವುನಲ್ಲಿರುವ ತೋಟದ ಮನೆಯಲ್ಲಿ ಹಿಂಸೆ ನೀಡಿದ್ದು, ಇದನ್ನು ಸುನಾಮಿ ಕಿಟ್ಟಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.
ಈ ವಿಡಿಯೋದಲ್ಲಿ ದೀಪಾಳ ಪತಿ ಸುನೀಲ್ ಕಾಲಿಗೆ ಬೀಳುವಂತೆ ಸುನಾಮಿ ಕಿಟ್ಟಿ ಸೂಚಿಸುತ್ತಿದ್ದು, ಅದರಂತೆ ತೌಶಿತ್ ಮತ್ತು ಗಿರೀಶ್ ಸುನೀಲ್ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾರೆ. ಜತೆಗೆ ಸುನೀಲ್ ಕೂಡ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಕಿಟ್ಟಿ ಈ ಇಬ್ಬರಿಗೂ ಕಾಲಿನಲ್ಲಿ ದೆಯುತ್ತಿರುವುದು ಕೂಡ ಸೆರೆಯಾಗಿದೆ. ಈ ಸಂಬಂಧ ತಲೆಮರೆಸಿಕೊಂಡಿರುವ ಸುನೀಲ್ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈತನ ಎರಡನೇ ಪತ್ನಿ ದೀಪಾಳಿಗಾಗಿಯೂ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಾ ಎರಡನೇ ಪತ್ನಿ!: ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಸುನೀಲ್ ಈ ಮೊದಲು ದೂರದ ಸಂಬಂಧಿ ಯುವತಿಯೊಬ್ಬರನ್ನು ವಿವಾಹವಾಗಿದ್ದು, ಆಕೆಯಿಂದ ದೂರವಾಗಿದ್ದಾನೆ. ಈ ಮಧ್ಯೆ ದೀಪಾಳನ್ನು ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದ. ಸುನೀಲ್ ಕುರಿತ ಕೆಲವೊಂದು ಮಾಹಿತಿಯನ್ನು ಮೊದಲ ಪತ್ನಿಯಿಂದ ಪಡೆಯಲಾಗಿದೆ. ಆದರೆ, ಎರಡನೇ ಪತ್ನಿ ದೀಪಾ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುನಾಮಿ ಕಿಟ್ಟಿ ಬಗ್ಗೆ ತನಿಖೆ ಚುರುಕು: ರಿಯಾಲಿಟಿ ಶೋಗಳಲ್ಲಿ ವಿಜೇತನಾಗಿ ನಂತರ ಖಾಲಿ ಕುಳಿತ ಸುನಾಮಿ ಕಿಟ್ಟಿ, ರೌಡಿ ಶೀಟರ್ ಮುಲಾನ, ಈತನ ಆಪ್ತ ಪಿ.ಮೂರ್ತಿ (ಆದಿವಾಸಿ ಸಿನಿಮಾ ನಿರ್ಮಾಪಕ) ರೌಡಿ ಲಕ್ಷ್ಮಣನ ಜತೆ ಸುತ್ತಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸುನಾಮಿ ಕಿಟ್ಟಿ ಈ ವ್ಯಕ್ತಿಗಳ ಜತೆ ಸೇರಿ ಬೇರೆ ಯಾವುದಾದರು ಪ್ರಕರಣದಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೌಶಿತ್ ಬ್ಲಾಕ್‌ವೆುಲ್ ಮಾಡುತ್ತಿದ್ದ!: ಮತ್ತೂಂದೆಡೆ ಘಟನೆ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಪತ್ನಿ ದೀಪಾ, “ತೌಶಿತ್ ಜತೆ ನನಗೆ ಯಾವುದೇ ಸಂಬಂಧವಿಲ್ಲ. ನಾವಿಬ್ಬರೂ ಓನ್ಲಿ ಫ್ರೆಂಡ್ಸ್ ಅಷ್ಟೇ. ತೌಶಿತ್ ನನ್ನ ಮೊಬೈಲ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ನನ್ನ ಪತಿಗೆ ಕಳುಹಿಸಿದ ಸಂದೇಶವನ್ನು ಫಾರ್ವರ್ಡ್ ಮಾಡಿಕೊಂಡು ನನ್ನ ಬ್ಲಾಕ್‌ವೆುಲ್ ಮಾಡುತ್ತಿದ್ದ,’ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ
Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ
Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್
Bengaluru: ರೈಲಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ಚಿನ್ನ ಪ್ರಯಾಣಿಕನಿಗೆ ಹಸ್ತಾಂತರ
Bengaluru: ಬಸ್ ಕಂಡಕ್ಟರ್, ಡ್ರೈವರ್‌ಗೆ ತೀವ್ರ ಹಲ್ಲೆ: ಇಬ್ಬರು ಆರೋಪಿಗಳ ಬಂಧನ
MUST WATCH
ಹೊಸ ಸೇರ್ಪಡೆ
New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
MI: ಸೂರ್ಯ, ಹಾರ್ದಿಕ್ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್: ರೋಹಿತ್ ಹೇಳಿದ್ದೇನು?
Fadnavis: ಶೀಘ್ರವೇ ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿ ಸೇರ್ಪಡೆ
TTD: ತಿರುಪತಿಯಲ್ಲಿ ಕೆಲಸ ಮಾಡುವವರೆಲ್ಲ ಹಿಂದೂ ಆಗಿರಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.