ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಸೆರೆ
Team Udayavani, Jun 30, 2019, 3:01 AM IST
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಮೀಟರ್ ಬಡ್ಡಿ ಹಾಗೂ ಅಧಿಕ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಪತ್ತೆ ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೂಚನೆ ಮೇರೆಗೆ ಉತ್ತರ ವಿಭಾಗದ ಮಲ್ಲೇಶ್ವರ, ಯಶವಂತಪುರ ಮತ್ತು ಜೆ.ಸಿ.ನಗರ ಉಪವಿಭಾಗದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದುಬಾರಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹತ್ತು ದಂಧೆಕೋರರ ಮನೆಗಳ ಮೇಲೆ ದಾಳಿ ನಡೆಸಿ 13,16 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳ 145 ಖಾಲಿ ಚೆಕ್‌ಗಳು,
ಐದು ಸ್ಟಾಂಪ್ ಪತ್ರಗಳು, ಮೂರು ಆಸ್ತಿ ಪತ್ರಗಳು, ಆರು ಬಾಂಡ್ ಪೇಪರ್‌ಗಳು, ಎರಡು ಜಿಪಿಎ ಪತ್ರಗಳು, ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಅಡಮಾನ ಪತ್ರಗಳು ಮತ್ತು ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ತು ಮಂದಿಯ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ.
ವೆಂಕಟೇಶ್ (31), ನಾಗರಾಜ್ (63), ಕೆ.ಎಂ.ಜಗದೀಶ್ (32), ಕುಮಾರ್ (35), ಪಿ.ಬಿ.ರಾಮಕೃಷ್ಣ (48), ಸುಜಾತಾ (46) ಬಂಧಿತರು. ಹಾಗೇ ಇತರೆ ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿದ್ದು, ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಬ್ರಹ್ಮಣ್ಯನಗರದ ವೆಂಕಟೇಶ್ (31) ಬಳಿ 15,600 ರೂ. ನಗದು, ಸಾಲ ಪಡೆದುಕೊಂಡವರ ವಿವರದ ಎರಡು ನೋಟ್ ಪುಸ್ತಕಗಳು, ಮಹಾಲಕ್ಷಿಲೇಔಟ್‌ನ ಕುರುಬರಹಳ್ಳಿಯ ನಾಗರಾಜ್ ಬಳಿ ವಿವಿಧ ಬ್ಯಾಂಕ್‌ಗಳ 19 ಖಾಲಿ ಚೆಕ್‌ಗಳು, ಎರಡು ಖಾಲಿ ಬಾಂಡ್‌ಗಳು, ನಂದಿನಿ ಲೇಔಟ್‌ನ ಕೆ.ಎಂ.ಜಗದೀಶ್ ಬಳಿ ಮೂರು ಖಾಲಿ ಚೆಕ್‌ಗಳು,
ನಾಲ್ಕು ಖಾಲಿ ಬಾಂಡ್ ಪೇಪರ್‌ಗಳು, ರಾಜಗೋಪಾಲನಗರದ ಕುಮಾರ್ ಎಂಬಾತನ ಮನೆ ಮತ್ತು ಕಚೇರಿಯಲ್ಲಿ ನಾಲ್ಕು ಖಾಲಿ ಚೆಕ್‌ಗಳು, ಎರಡು ಶುದ್ಧ ಕ್ರಯ ಪತ್ರ, ಎರಡು ನೋಟ್ ಪುಸ್ತಕಗಳು,ಮೂರು ದ್ವಿಚಕ್ರ ವಾಹನಗಳು, ಆರ್‌ಎಂಸಿ ಯಾರ್ಡ್‌ನ ನಂದಿನಿ ಲೇಔಟ್‌ನ ಪಿ.ಬಿ.ರಾಮಕೃಷ್ಣ ಬಳಿ ಎರಡು ಖಾಲಿ ಸ್ಟಾಂಪ್ ಪೇಪರ್‌ಗಳು, ಹರೀಶ್ ಎಂಬುವರ ಹೆಸರಿನಲ್ಲಿರುವ ಎರಡು ಖಾಲಿ ಚೆಕ್‌ಗಳು,
ತ್ಯಾಗರಾಜ್ ಎಂಬುವರ ಹೆಸರಿನಲ್ಲಿರುವ ಒಂದು ಖಾಲಿ ಈ ಸ್ಟಾಂಪ್ ಪೇಪರ್, ಅಸಲು ಜಿಪಿಎ ಪತ್ರ, ಏಳು ವಿವಿಧ ಜನರ ಹೆಸರಿನಲ್ಲಿರುವ ಖಾಲಿ ಚೆಕ್‌ಗಳು, ತಾತ್ಕಾಲಿಕ ಹಕ್ಕು ಪತ್ರದ ಅಸಲು, ಒಂದು ಖಾಲಿ ಈ ಸ್ಟಾಂಪ್ ಪೇಪರ್, ಮೂಲ ಜಿಪಿಎ ಪತ್ರ, ನಿವೇಶನದ ಶುದ್ಧ ಕ್ರಯ ಪತ್ರದ ಅಸಲು, ಐದು ನೋಟ್ ಪುಸ್ತಕಗಳ ಸಿಕ್ಕಿವೆ.
ಸೋಲದೇವನಹಳ್ಳಿಯ ಹೆಸರುಘಟ್ಟದ ದಿಲೀಪ್ ಬಳಿ ಜನಾರ್ಧನ ಹೆಸರಿನ ಒಂದು ಖಾಲಿ ಚೆಕ್, ನಾಲ್ಕು ಮತ್ತು ದ್ವಿಚಕ್ರ ವಾಹನಗಳ ನಾಲ್ಕು ಅಡಮಾನ ಪತ್ರಗಳು, ಬಾಗಲಗುಂಟೆ ಟಿ.ದಾಸರಹಳ್ಳಿಯ ಸುಜಾತಾ ಎಂಬವರ ಮನೆಯಲ್ಲಿ 18 ಖಾಲಿ ಚೆಕ್‌ಗಳು, 19 ಬಾಂಡ್ ಪೇಪರ್‌ಗಳು ಮತ್ತು ಇತರೆ ದಾಖಲೆಗಳು,
ಜಾಲಹಳ್ಳಿಯ ಜಮುನಾ ಮತ್ತು ಪೀಣ್ಯದ ಇಂದಿರಾನಗರದಲ್ಲಿ ವೆಂಕಟೇಶ್ ಅಲಿಯಾಸ್ ಆಸಿಡ್ ವೆಂಕೇಟಶ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರ್.ಟಿ.ನಗರದ ಎಸ್. ಜಯರಾಮ್ ಅಲಿಯಾಸ್ ರಾಮಣ್ಣ ಎಂಬವರ ಮನೆಯಲ್ಲಿ ದಾಳಿ ನಡೆಸಿ 90 ಖಾಲಿ ಚೆಕ್‌ಗಳು, 25 ಖಾಲಿ ಬೇಡಿಕೆ ಪತ್ರ, ಪ್ರಾಮಿಸರಿ ನೋಟ್ ಮತ್ತು ಕನ್‌ಸಿಡರೇಷನ್ ರೆಸಿಪ್ಟ್ಗಳು, ಟಾಟಾ ಸಫಾರಿ ವಾಹನದ ದಾಖಲೆ ಪತ್ರ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.