ಜಪಾನ್ ರಾಯಭಾರಿ ಹೆಸರಲ್ಲಿ ಕಾರು ಮಾರಾಟ!
Team Udayavani, Aug 23, 2018, 6:00 AM IST
ಬೆಂಗಳೂರು: ಸೈಬರ್ ವಂಚಕರು ಇದೀಗ ಜಪಾನ್ ರಾಯಭಾರಿ ಹೆಸರು ಹಾಗೂ ಕಚೇರಿ ವಿಳಾಸ ದುರ್ಬಳಕೆ ಮಾಡಿಕೊಂಡು ಅನ್‌ಲೈನ್ ಮಾರಾಟ ತಾಣದಲ್ಲಿ ಕಾರು ಮಾರಾಟಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಚ್ಚರಿಯ ಸಂಗತಿ ಎಂದರೆ ಆನ್‌ಲೈನ್ ತಾಣದಲ್ಲಿ ವಂಚಕ ಹಾಕಿದ ಕಾರಿನ ಮಾರಾಟದ ಜಾಹೀರಾತು ಪೋಸ್ಟರ್ ಗಮನಿಸಿದ ವ್ಯಕ್ತಿಯೊಬ್ಬರು, ಕಾರು ಖರೀದಿಸಲು ಕಬ್ಬನ್ ರಸ್ತೆಯಲ್ಲಿರುವ ಜಪಾನ್ ರಾಯಭಾರಿ ಕಚೇರಿಗೆ ಆಗಮಿಸಿದಾಗ ಅಲ್ಲಿನ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಕೆಲ ದಿನಗಳ ಹಿಂದೆ ಅಪರಿಚಿತ ವಂಚಕನೊಬ್ಬ, ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನ ಫೋಟೋ ಹಾಕಿ ಕಾರು ಮಾರಾಟದ ಬಗ್ಗೆ ದಿಸ್ ಈಸ್ ಮೈ ಕಾರ್, ಸೂಪರ್ ಲುಕಿಂಗ್.. ನೋ ಸಾಚಸ್, ಟೊಯೋಟಾ ಇನೋವಾ ಕ್ರಿಸ್ಟಾ, ಫಾರ್ ಸೇಲ್, 14 ಲಕ್ಷ ರೂ. ಎಂದು ಜಾಹೀರಾತು ಪೋಸ್ಟ್ ಹಾಕಿದ್ದಾನೆ. ಕೊಳ್ಳಲು ಆಸಕ್ತಿ ಇರುವವರು ಸಂಪರ್ಕಿಸಲು ಮೊಬೈಲ್ ನಂಬರ್ ನೀಡಿದ್ದು, ಅದಕ್ಕೆ ಜಪಾನ್ ರಾಯಭಾರಿ ಹೆಸರಿನಲ್ಲಿ ನಕಲಿ ಮೇಲ್ ವಿಳಾಸ ಬರೆದಿದ್ದಾನೆ. ಜತೆಗೆ, ಕಬ್ಬನ್ ರಸ್ತೆಯಲ್ಲಿರುವ ರಾಯಭಾರಿ ಕಚೇರಿ ವಿಳಾಸವನ್ನೂ ನಮೂದಿಸಿದ್ದಾನೆ.
ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಕಾರು ಕೊಳ್ಳುವುದಾಗಿ ವಂಚಕ ನೀಡಿದ ದೂರವಾಣಿ ನಂಬರ್‌ಗೆ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ವಂಚಕ ನೀಡಿದ ಅಕೌಂಟ್ ನಂಬರ್‌ಗೆ 20 ಸಾವಿರ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆತ ಹೇಳಿದಂತೆ ಮಂಗಳವಾರ ಮಧ್ಯಾಹ್ನ ಕಾರು ನೋಡುವ ಸಲುವಾಗಿ ರಾಯಭಾರಿ ಕಚೇರಿಗೆ ಆಗಮಿಸಿದ್ದು, ಕೆಲ ಹೊತ್ತು ಕಾದರೂ ವಂಚಕನಿಂದ ಯಾವುದೇ ದೂರವಾಣಿ ಕರೆ ಬರದಿದ್ದರಿಂದ ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಈ ಮಾಹಿತಿ ಕೇಳಿ ರಾಯಭಾರಿ ಕಚೇರಿ ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ!
ಕೂಡಲೇ ರಾಯಭಾರಿ ಟಕಾಯುಕಿ ಕಿಟಗಾವ್ ಅವರ ಸೂಚನೆ ಮೇರೆಗೆ ಅಲ್ಲಿನ ಅಧಿಕಾರಿ ಮಿತ್ಸುಹಿರೋ ಅಮೋ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ವಿದೇಶಿ ಸೈಬರ್ ವಂಚಕರ ಕೃತ್ಯ?
ವಿದೇಶಗಳಿಂದ ಬರುವ ರಾಯಭಾರಿಗಳ ಹೆಸರು ವಿಮಾನನಿಲ್ದಾಣಗಳ ಎಂಟ್ರಿ ಪುಸ್ತಕದಲ್ಲಿ ನಮೂದಾಗಿರುತ್ತದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತ ಹೆಸರುಗಳಾಗಿರುತ್ತವೆ. ಹೀಗಾಗಿ ವಿದೇಶಿ ಸೈಬರ್ ವಂಚಕರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಅಲ್ಲದೆ, ಸೈಬರ್ ವಂಚನೆಯಲ್ಲಿ ನುರಿತರಾಗಿರುವ ಆಫ್ರಿಕನ್ ಪ್ರಜೆಗಳು ಈ ಕೃತ್ಯ ಎಸಗಿರುವ ಶಂಕೆಯಿದ್ದು ವಂಚಕನ ಕುರಿತು ಸುಳಿವು ಸಿಕ್ಕಿದೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ವಂಚಕ ಯಾರದೋ ಫೋಟೋ ಅಪ್ಲೋಡ್ ಮಾಡಿ, ಜಪಾನ್ ರಾಯಭಾರಿ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ. ಸದ್ಯಕ್ಕೆ, ಕಾರಿನ ಜಾಹೀರಾತು ನೋಡಿ ಒಬ್ಬ ವ್ಯಕ್ತಿ ಮಾತ್ರ ವಂಚಕನಿಗೆ ಹಣ ಕಳುಹಿಸಿರುವ ಬಗ್ಗೆ ಮಾಹಿತಿಯಿದೆ. ಆತ ಮತ್ತಷ್ಟು ಜನರಿಗೆ ವಂಚಿಸಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಅಧಿಕಾರಿ ಹೇಳಿದರು.
ಜಪಾನ್ ರಾಯಭಾರಿ ಹಾಗೂ ಕಚೇರಿ ವಿಳಾಸವನ್ನು ದುರ್ಬಳಕೆ ಮಾಡಿಕೊಂಡು ವಂಚಕನೊಬ್ಬ ಕಾರು ಮಾರಾಟ ಜಾಹೀರಾತು ನೀಡಿರುವ ಪ್ರಕರಣದ ತನಿಖೆ ಮುಂದುವರಿದಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು.
- ಡಿ.ದೇವರಾಜು, ಕೇಂದ್ರ ವಿಭಾಗ ಡಿಸಿಪಿ
– ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.