ಫೋರ್ಟಿಸ್‌ನಿಂದ ಹೃದಯ ಆರೋಗ್ಯ ಜಾಗೃತಿ
Team Udayavani, Oct 4, 2018, 12:19 PM IST
ಬೆಂಗಳೂರು: ವಿಶ್ವ ಆರೋಗ್ಯ ದಿನದ ಅಂಗವಾಗಿ ಹೃದಯ ಆರೋಗ್ಯ ಕಾಪಾಡಿಕೊಳ್ಳುವುದರ ಪ್ರಾಮುಖ್ಯತೆ ಕುರಿತು
ಸಾರ್ವಜನಿಕರಿಗೆ ಶಿಕ್ಷಣ ನೀಡಲು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ 500 ಮಂದಿ ಪೊಲೀಸರಿಗೆ ಹೃದಯ ತಪಾಸಣೆ ಮಾಡುವುದರೊಂದಿಗೆ ಮೂರು ದಿನಗಳ ಕಾರ್ಯಕ್ರಮ ನಡೆಸಲಾಯಿತು. ನಗರದ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ
ಆಟಗಳು ಮತ್ತು ಆರೋಗ್ಯಕರ ಚಟುವಟಿಕೆಗಳನ್ನು, ಕಾರ್ಪೊರೇಟ್ ಕಚೇರಿಗಳಲ್ಲಿ ಮೆಟ್ಟಿಲುಗಳನ್ನು ಬಳಸಲು ಪ್ರೋತ್ಸಾಹಿಸುವ ಹಾಗೂ ಹೃದಯ ಆರೈಕೆಯ ಭರವಸೆ ಮೂಡಿಸುವ ವ್ಯಾಯಾಮಗಳನ್ನು ಹೇಳಿಕೊಡಲಾಯಿತು.
ಫೋರ್ಟಿಸ್ ಆಸ್ಪತ್ರೆಯ ಹೃದಯರೋಗ ಶಸ್ತ್ರಚಿಕಿತ್ಸಾ ಸಲಹಾ ತಜ್ಞ ಡಾ. ಪ್ರಭಾಕರ್ ಕೋರೆಗಾಲ್ ಅವರು ಮಾತನಾಡಿ, “”ಹೃದಯ ರಕ್ತನಾಳದ ರೋಗಗಳು ವಿಶೇಷವಾಗಿ ಭಾರತದಲ್ಲಿ ಸಾವಿನ ಪ್ರಮುಖ ಕಾರಣಗಳಾಗಿವೆ.
ಜೀವನಶೈಲಿ, ಆಹಾರಶೈಲಿ, ವ್ಯಾಯಾಮರಹಿತ ಜೀವನ, ಧೂಮಪಾನ ಮತ್ತು ಮದ್ಯಪಾನ ಚಟಗಳಿಂದ ಬಹಳಷ್ಟು ಮಂದಿ ಹೃದ್ರೋಗಕ್ಕೆ ಗುರಿಯಾಗುತ್ತಿದ್ದಾರೆ. ಹೃದಯವನ್ನು ಆರೋಗ್ಯಕರವಾಗಿ ಉಳಿಸಿಕೊಳ್ಳಲು ದೈಹಿಕ ದೃಢತೆ ಕಾಯ್ದುಕೊಳ್ಳುವುದು, ದುಶ್ಚಟಗಳಿಂದ ದೂರಾಗುವುದು, ಉತ್ತಮ ಆಹಾರ ಸೇವನೆ ಹಾಗೂ ಒತ್ತಡ ಮುಕ್ತ ಜೀವನ ನಡೆಸುವ ಹಾಗೂ ಅವುಗಳ ಪ್ರಾಮುಖ್ಯತೆ ಕುರಿತು ಜನರಲ್ಲಿ ಮನವರಿಕೆ ಮಾಡುವ ಕೆಲಸ ಮಾಡಿದ್ದೇವೆ. ವಿಶ್ವ ಆರೋಗ್ಯ ದಿನ ಪ್ರಯುಕ್ತ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇಚ್ಛಿಸುತ್ತೇವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.