ದಂಡ ವಸೂಲಿ ಇನ್ನು ಕ್ಯಾಶ್‌ಲೆಸ್
Team Udayavani, Apr 5, 2017, 12:21 PM IST
ಬೆಂಗಳೂರು: ಸಂಚಾರ ನಿಯಮ ಉಲ್ಲಂ ಸಿದವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಕೇಸು ಹಾಕುವುದು, ಇಲ್ಲವೇ ದಂಡವನ್ನು ಸ್ಥಳದಲ್ಲೇ ಪಡೆದು ಬ್ಲಾಕ್ ಬೆರ್ರಿ ಮೂಲಕ ರಸೀತಿ ನೀಡುತ್ತಿದ್ದದ್ದು ಟ್ರಾಫಿಕ್ ಪೊಲೀಸರ ಹಳೇ ಜಮಾನ. ಈಗೇನಿದ್ದರೂ ಕ್ಯಾಶ್‌ಲೆಸ್ ದಂಡದ ಜಮಾನ. ಇನ್ನು ಮುಂದೆ ನೀವೇನಾದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಮೂಲಕವೇ ದಂಡ ಪಾವತಿಸಬಹುದು.
ಹೌದು, ನಗದು ರಹಿತ(ಕ್ಯಾಶ್‌ಲೆಸ್) ವ್ಯವಸ್ಥೆಗೆ ಸಂಚಾರ ಪೊಲೀಸರು ಮುಂದಡಿ ಇಟ್ಟಿದ್ದಾರೆ. ಈ ಹಿಂದೆ ಬಳಸುತ್ತಿದ್ದ ಬ್ಲ್ಯಾಕ್‌ಬೆರ್ರಿಗೆ ಗುಡ್‌ಬೈ ಹೇಳಿರುವ ಟ್ರಾಫಿಕ್ ಪೊಲೀಸರು, ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್(ಪಿಡಿಎ) ಯಂತ್ರಗಳ ಬಳಕೆಗೆ ಸಜ್ಜಾಗಿದ್ದಾರೆ. ಸಂಚಾರ ನಿಯಮ ಉಲ್ಲಂ ಸುವ ಸವಾರರಿಂದ ದಂಡ ವಸೂಲಿಗೆ 2008ರಲ್ಲಿ ಬ್ಲ್ಯಾಕ್‌ಬೆರ್ರಿ ಫೋನ್ ಸಿಸ್ಟಂ ವಿತರಿಸಲಾಗಿತ್ತು.
2016 ಜೂನ್‌ನಲ್ಲಿ ಈ ಕಂಪೆನಿಯ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ಇದೇ ಕಂಪೆನಿಯ ಹೆಚ್ಚಿನ ತಂತ್ರಜ್ಞಾನವನ್ನೊಳಗೊಂಡ 650 ಪಿಡಿಎಗಳನ್ನು ಖರೀದಿಸಲಾಗಿದೆ. ಈ ಯಂತ್ರಗಳನ್ನು ಮುಂದಿನ 5 ವರ್ಷಗಳ ಅವಧಿಗೆ ಪೂರೈಕೆ ಮಾಡಲಿರುವ ಕಂಪನಿ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತಿದೆ. 10 ಕೋಟಿ ರೂ. ಗುತ್ತಿಗೆ ಪಡೆದುಕೊಂಡಿದೆ.
ಈ ಯಂತ್ರಗಳನ್ನು ಎಎಸ್‌ಐ ಮೇಲ್ಪಟ್ಟ ಅಧಿಕಾರಿಗಳಿಗೆ ವಿತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ. ಈ ಮೂಲಕ ಸಂಚಾರ ಪೊಲೀಸರ ಜತೆ ಅನುಚಿತವಾಗಿ ವರ್ತಿಸುತ್ತಿದ್ದ ಸವಾರ ಹಾಗೂ ವಾಹನದ ವಿಡಿಯೋ, ಫೋಟೋ ತೆಗೆದು ಸಾಕ್ಷ್ಯ ಸಮೇತ ದಂಡ ವಸೂಲಿ ಮಾಡಬಹುದು. ಜತೆಗೆ ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಸೆಲ್ಫಿ ವಿತ್ ಸ್ಕೈವಾಕ್
ಪಾದಚಾರಿಗಳ ಅನುಕೂಲಕ್ಕಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಕೈವಾಕ್ ಅಳವಡಿಸಲಾಗಿದ್ದು, ಈ ಕುರಿತ ಅರಿವು ಮೂಡಿಸಲು “ಸೆಲ್ಪಿ ವಿತ್ ಸ್ಕೈವಾಕ್’ ಎಂಬ ಹೆಸರಿನಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಹಾಗೇ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೂಡ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟರ್‌ಗಳ ಮೂಲಕ ಸ್ಕೈವಾಕ್ ಮೇಲೆ ಸೆಲ್ಫಿ ತೆಗೆದು ಅಪ್‌ಲೋಡ್ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಪ್ರವೀಣ್ ಸೂದ್ ಹೇಳಿದರು.
ಹೊಸ ಉಪಕರಣಗಳ ಉಪಯೋಗವೇನು?
ಹಳೆಯ ಬ್ಲ್ಯಾಕ್‌ಬೆರಿ ಮತ್ತು ವೈರ್‌ಲೆಸ್ ಪ್ರಿಂಟರ್ ನಿರ್ವಹಣೆ ಕಷ್ಟವಾಗಿತ್ತು. ಆದರೆ, ಈ ನೂತನ ಪಿಡಿಎನಲ್ಲಿ ಸ್ಮಾರ್ಟ್ ಫೋನ್, ಪ್ರಿಂಟರ್ ಸೌಲಭ್ಯ, ಕ್ರೆಡಿಟ್, ಡೆಬಿಟ್ ಕಾರ್ಡ ಬಳಕೆಯ ಸೌಲಭ್ಯ ಜತೆಗೆ ಒಂದು ಸ್ಟಿಲ್ ಕ್ಯಾಮೆರಾ, ವಿಡಿಯೋ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೇ ಪೊಲೀಸ್ ಅಧಿಕಾರಿಗಳ ಮೇಲೆ ನಿಗಾವಹಿಸಲು ಜಿಪಿಎಸ್ ಅಳವಡಿಸಲಾಗಿದೆ. ಇನ್ನು ಡಿಜಿಟಲ್ ಮಾದರಿಯ ಚಾಲನ ಪರವಾನಗಿ (ಡಿಎಲ್), ವಾಹನದ ದಾಖಲೆಗಳಿದ್ದರೆ (ಆರ್‌ಸಿ) ಸ್ವೆ„ಪ್ ಮೂಲಕ ಎಲ್ಲ ಮಾಹಿತಿ ನೀಡಬಹುದು ಎಂದು ಅವರು ತಿಳಿಸಿದರು.
ನಗರಾದ್ಯಂತ ನಿರ್ಮಿಸಿರುವ 11 ಜೀರೋ ಟಾಲರೆನ್ಸ್‌ನಲ್ಲಿ ಕಳೆದ 3 ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂ ಸಿದ 84 ಸಾವಿರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿದೇಶಿ ಮಾದರಿಯಲ್ಲಿ ಸಂಚಾರ ನಿಯಮಗಳನ್ನು ಜಾರಿಗೆ ತರಲಾಗುತ್ತದೆ.
-ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.