ಕಲುಷಿತಗೊಳ್ಳುತ್ತಿದ್ದಾಳೆ ಕಾವೇರಿ
Team Udayavani, Apr 14, 2018, 12:01 PM IST
ಬೆಂಗಳೂರು: ರಾಜಧಾನಿಯ ಹಳೆಯ ಪ್ರದೇಶಗಳನ್ನೇ ಪ್ರಧಾನವಾಗಿ ಹೊಂದಿರುವ ದಿಕ್ಷಣ ಭಾಗಕ್ಕೆ ಜಲಮಂಡಳಿಯಿಂದ ನೀರು ಹರಿಸಲಾಗುತ್ತಿದ್ದರೂ, ಹಲವು ಬಡಾವಣೆಗಳಲ್ಲಿನ ಕಾವೇರಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದೇ ವಾಸ್ತವ ಸ್ಥಿತಿ.
ನಗರದ ಪ್ರತಿಷ್ಠಿತ ಬಡಾವಣೆಗಳನ್ನು ಒಳಗೊಂಡಿರುವ ಪಾಲಿಕೆ ದಕ್ಷಿಣ ವಲಯಕ್ಕೆ ಜಲಮಂಡಳಿಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಆದರೆ, ಮಂಡಳಿಯ ಕೇಂದ್ರ ಕಚೇರಿಗೆ ಕೆಲವೇ ಕಿ.ಮೀ. ಅಂತರದಲ್ಲಿರುವ ಹಲವು ಭಾಗಗಳಿಗೆ ಕಲುಷಿತ ನೀರು ಹರಿಯುತ್ತಿದೆ. ದುರ್ವಾಸನೆಯುಕ್ತ ನೀರು ಬಳಸಲಾಗದೆ ಜನರು ಅನಿವಾರ್ಯವಾಗಿ ಕ್ಯಾನ್ ನೀರಿನ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಾಜಧಾನಿಗೆ ಕಾವೇರಿ ನೀರು ಪೂರೈಕೆಯಾಗುವ ಪ್ರಮುಖ ಕೊಳವೆ ದಕ್ಷಿಣ ಭಾಗದಲ್ಲೇ ಹಾದು ಹೋಗಿದೆ. ಹಾಗಾಗಿ ಬಹುತೇಕ ಕಡೆ ನಿಯಮಿತವಾಗಿ ಪೂರೈಕೆಯಿದ್ದರೂ ಆಗಾಗ್ಗೆ ಕಲುಷಿತಗೊಳ್ಳುತ್ತಿರುವುದು ನೀರಿನ ಗುಣಮಟ್ಟದ ಬಗ್ಗೆಯೇ ಸಂಶಯ ಸೃಷ್ಟಿಸುವಂತಾಗಿದೆ.
ನಗರದ ಹೊರ ವಲಯಗಳ ಬಹುತೇಕ ಭಾಗಗಳಿಗೆ ಜಲಮಂಡಳಿಯಿಂದ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ನೀರು ಹರಿಸಲಾಗುತ್ತದೆ. ಆದರೆ, ಕೇಂದ್ರ ಭಾಗಕ್ಕೆ ದಿನ ಬಿಟ್ಟು ದಿನ ನೀರು ಹರಿಸುತ್ತಿದೆ. ಆದರೆ ಗುಣಮಟ್ಟದ ಕೊರತೆ, ಸೋರಿಕೆ ಇತರೆ ಕಾರಣಗಳಿಂದ ಸಾಕಷ್ಟು ಪೋಲಾಗುತ್ತಿರುವುದು ಕಂಡುಬಂದಿದೆ.
ಕಾವೇರಿ ನೀರಿನೊಂದಿಗೆ ಚರಂಡಿ ಅಥವಾ ಒಳಚರಂಡಿ ನೀರು ಸೇರುತ್ತಿರುವುದರಿಂದ ಜನರು ಮೊದಲೆರಡು ಗಂಟೆಗಳು ಬರುವ ಕಲುಷಿತ ನೀರನ್ನು ಚರಂಡಿಗೆ ಬಿಡುತ್ತಾರೆ. ನಂತರ ಶುದ್ಧವಾಗಿ ಬರುವ ನೀರನ್ನು ಹಿಡಿಯುತ್ತಾರೆ. ಇದೇ ಪರಿಸ್ಥಿತಿ ಹಲವು ಬಡಾವಣೆಗಳಲ್ಲಿದೆ ಎಂದು ಸುಧಾಮನಗರ ನಿವಾಸಿ ಲಕ್ಷ್ಮೀ ಅವರು ಬೇಸರ ವ್ಯಕ್ತಪಡಿಸಿದರು.
ದುರ್ವಾಸನೆ: ಜಲಮಂಡಳಿಗೆ ಕೂಗಳತೆ ದೂರದಲ್ಲಿರುವ ಸುಧಾಮನಗರ ವಾರ್ಡ್‌ನ ಕುಂಬಾರಗುಂಡಿ ಬಡಾವಣೆ, ಹಮೀದ್ ಖಾನ್ ಗಾರ್ಡನ್, ರಾಜಗೋಪಾಲ ಗಾರ್ಡನ್, ರಾಜಾರಾಮ್ ಮೋಹನ್‌ರಾಯ್ ಬಡಾವಣೆ, ದೊಡ್ಡಮಾವಳ್ಳಿ, ಕಲಾಸಿಪಾಳ್ಯ ಸುತ್ತಮುತ್ತಲಿನ ಪ್ರಮುಖ ಬಡಾವಣೆಗಳು, ಕೊಳೆಗೇರಿಗಳು ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌ನ ಹಲವು ಭಾಗಗಳಲ್ಲಿ ಕಾವೇರಿ ನೀರು ಕಲುಷಿತಗೊಂಡಿದ್ದು, ದುರ್ವಾಸನೆ ಬೀರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಮರ್ಪಕ ನೀರು ಪೂರೈಕೆ: ಕೇಂದ್ರ ಭಾಗದ ದಕ್ಷಿಣ ವಲಯದ ಬಹುತೇಕ ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಕೆ ವ್ಯವಸ್ಥೆ ಇದೆ. ಜಲಮಂಡಳಿಯಿಂದ ದಿನ ಬಿಟ್ಟು ದಿನ ನೀರು ಹರಿಸುವುದರಿಂದ ವಲಯದಲ್ಲಿ ಹೆಚ್ಚಿನ ನೀರಿನ ಸಮಸ್ಯೆಯಿಲ್ಲ. ಕಾವೇರಿ ಸಂಪರ್ಕ ಹೊಂದಿಲ್ಲದ ಪ್ರದೇಶಗಳು ಹಾಗೂ ಕೆಲ ಕೊಳಗೇರಿ ಹೊರತುಪಡಿಸಿದರೆ ಒಟ್ಟಾರೆಯಾಗಿ ವಲಯದಲ್ಲಿ ನೀರಿನ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಳಕೆಗೆ ಯೋಗ್ಯವಲ್ಲ: ಜಲಮಂಡಳಿಯಿಂದ ಭರಪೂರವಾಗಿ ನೀರು ಹರಿಸಿದರೂ, ದಕ್ಷಿಣ ಭಾಗದ ಜನರು ಮಾತ್ರ ಜಲಮಂಡಳಿಯಿಂದ ಪೂರೈಸಲಾಗುವ ನೀರನ್ನು ಕುಡಿಯಲು ಬಳಸುವುದಿಲ್ಲ. ಬದಲಾಗಿ ಶುದ್ಧೀಕರಿಸಿದ ಕ್ಯಾನ್ ನೀರಿಗೆ ಆದ್ಯತೆ ನೀಡುತ್ತಿದ್ದು, ಕಾವೇರಿ ನೀರನ್ನು ಗೃಹ ಬಳಕೆಗೆ ಬಳಸುತ್ತಿರುವುದು ಕಂಡುಬಂದಿದೆ.
ಮೊದಲ ಎರಡು ಮೂರು ಗಂಟೆ ದುರ್ವಾಸನೆಯಿಂದ ಕೂಡಿದ ಕಲುಷಿತ ನೀರು ಬರುತ್ತದೆ. ನಂತರದಲ್ಲಿ ಶುದ್ಧ ನೀರು ಬರುತ್ತದೆ. ಒಳಚರಂಡಿ ಮ್ಯಾನ್‌ಹೋಲ್ ಪಕ್ಕದಲ್ಲಿಯೇ ನೀರಿನ ಪೈಪ್‌ಲೈನ್ ಹಾಕಿರುವುದು ಸಮಸ್ಯೆಗೆ ಕಾರಣ.
-ಪ್ರಶಾಂತ್, ರಾಜಗೋಪಾಲ ಗಾರ್ಡನ್ ನಿವಾಸಿ
ಜಲಮಂಡಳಿಯಿಂದ ಹರಿಸಲಾಗುವ ನೀರಿನಲ್ಲಿ ಕೆಲವೊಮ್ಮೆ ಮೋರಿ ನೀರು ಮಿಶ್ರಣವಾಗಿರುತ್ತದೆ. ಜತೆಗೆ ಕೆಲವೊಮ್ಮೆ ನೀರು ತುಂಬಾ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೀಗಾಗಿ ಕುಡಿಯಲು ಆ ನೀರನ್ನು ಬಳಸುವುದಿಲ್ಲ.
-ನೀಲಾವತಿ, ಕುಂಬಾರಗುಂಡಿ ಬಡಾವಣೆ
ನೀರಿನ ಪೈಪುಗಳನ್ನು ಚರಂಡಿ ಪಕ್ಕದಲ್ಲಿ ಅಳವಡಿಸಿರುವುದರಿಂದ ನೀರು ದುರ್ವಾಸನೆ ಕೂಡಿರುತ್ತದೆ. ಈ ಕುರಿತು ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ.
-ಆನಂದಿ, ಸುಧಾಮನಗರ
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.