ನಿಗೂಢ ನಾಪತ್ತೆ ರಹಸ್ಯವ ಭೇದಿಸುವುದೇ ಸಿಬಿಐ?
Team Udayavani, Nov 23, 2018, 11:30 AM IST
ಬೆಂಗಳೂರು: ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣದ “ನಿಗೂಢ ರಹಸ್ಯ’ ಬೇಧಿಸಲು ಸಿಬಿಐ ಅಧಿಕೃತವಾಗಿ ಮುಂದಡಿಯಿಟ್ಟಿದೆ. ಅಜಿತಾಬ್ ನಿಗೂಢ ನಾಪತ್ತೆಯನ್ನು ಬೇಧಿಸಲು ಆರಂಭದಲ್ಲಿ ವೈಟ್ಫೀಲ್ಡ್ ಪೊಲೀಸರು, ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ, ಸಿಐಡಿ ಜತೆ ಸೇರಿ ಮೂರು ಹಂತದಲ್ಲಿ ತನಿಖೆ ನಡೆಸಿದರೂ ಅಜಿತಾಬ್ ಪ್ರಕರಣ ಚಿದಂಬರ ರಹಸ್ಯವಾಗಿಯೇ ಉಳಿದುಕೊಂಡಿದೆ.
ಈ ಬೆನ್ನಲ್ಲೇ ಅಜಿತಾಬ್ ತಂದೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್, ತನಿಖೆಯನ್ನು ಸಿಬಿಐ ಹೆಗಲಿಗೆ ವರ್ಗಾಯಿಸಿ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿನ ಅನ್ವಯ ಪ್ರಕರಣ ವರ್ಗಾವಣೆಗೊಂಡ ಬಳಿಕ ಮೊದಲ ಹಂತದಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಸಿಬಿಐನ ಚೆನ್ನೈ ಘಟಕ, ತನಿಖೆ ಆರಂಭಿಸಿದೆ.
ಹಲವು ಆಯಾಮಗಳಲ್ಲಿ ತನಿಖೆ ನಡೆಸಿರುವ ಸಿಐಡಿ 1000 ಪುಟಗಳ ತನಿಖಾ ವರದಿಯನ್ನು ಸಿಬಿಐಗೆ ಹಸ್ತಾಂತರಿಸಿದೆ. ಅಜಿತಾಬ್ ನಿಗೂಢ ನಾಪತ್ತೆ ಪ್ರಕರಣವನ್ನು ಹಲವು ಆಯಾಮಗಳಲ್ಲಿ ಸಿಐಡಿ ತನಿಖೆ ನಡೆಸಿದೆ. ಕೆಲವು ಮಹತ್ವದ ಸುಳಿವು ದೊರೆತರೂ, ಆತನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಇದೀಗ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಸಿಬಿಐಗೆ ತನ್ನದೇ ಆದ ತಂತ್ರಜ್ಞಾನ, ವಿದೇಶಗಳಿಂದ ಮಾಹಿತಿ ತರಿಸಿಕೊಳ್ಳಲು ಸುಲಭವಾಗಿ ಅವಕಾಶವಿದೆ. ಅವರ ತನಿಖಾ ವಿಧಾನಗಳಿಂದಾಗಿ ತನಿಖೆ ಚುರುಕುಗೊಳ್ಳುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಟೆಕ್ಕಿ ಅಜಿತಾಬ್ ನಾಪತ್ತೆ ಭೇದಿಸಲು ಮುಂದಾದ ಸಿಐಡಿ ಪೊಲೀಸರು ಬರೋಬ್ಬರಿ 1.45 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಅಜಿತಾಬ್ ಓಎಲ್ಎಕ್ಸ್ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರು ಖರೀದಿಸಲು ಆಸಕ್ತಿ ತೋರಿದ ವ್ಯಕ್ತಿ ಜತೆ ಮಾತನಾಡಿದ್ದ.
ಆ ವ್ಯಕ್ತಿಯ ಮೊಬೈಲ್ ನಂಬರ್ ಜಾಡು ಹಿಡಿದು ಹೊರಟಾಗ ಕೋಲಾರದಲ್ಲಿ ಅಂಗಡಿಯೊಂದರಲ್ಲಿ ಸಿಮ್ ಖರೀದಿಸಿದ್ದು ಖಚಿತವಾಗಿತ್ತು. ಅಂಗಡಿ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದಾಗ, ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬ ನಕಲಿ ದಾಖಲೆಗಳನ್ನು ನೀಡಿ ಸಿಮ್ ಖರೀದಿಸಿದ್ದ ಎಂಬುದು ಖಚಿತವಾಯಿತು.
ಅದೇ ಸಂಖ್ಯೆಯಿಂದ ಆ ವ್ಯಕ್ತಿ ಅಜಿತಾಬ್ಗ ಕರೆ ಮಾಡಿದ್ದಾನೆ. ಜತೆಗೆ ಇಬ್ಬರ ನಡುವೆ ಎರಡು ಬಾರಿ ಮಾತ್ರ ವಾಟ್ಸ್ಆ್ಯಪ್ ಕರೆ ಮೂಲಕ ಮಾತುಕತೆ ನಡೆದಿದೆ. ಡಿ.17ರಂದು ರಾತ್ರಿ 7.30ರ ಸುಮಾರಿಗೆ ಆ ನಂಬರ್ ಸ್ವಿಚ್ ಆಪ್ ಆಗಿದ್ದು, ಮತ್ತೆ ಆನ್ ಆಗೇ ಇಲ್ಲ.
ಅದರ ಜಾಡು ಹಿಡಿದು ಹೊರಟಾಗ, ಆ ನಂಬರ್ನ ಕೊನೆಯ ಲೋಕೇಶನ್ ಹೆಬ್ಟಾಳದಲ್ಲಿ ತೋರಿಸಿದೆ. ಫೋನ್ ಸ್ವಿಚ್ಆಫ್ ಮಾಡಿದ ವ್ಯಕ್ತಿ ಅದನ್ನು ಚಲಿಸುತ್ತಿದ್ದ ಲಾರಿಯೊಂದರ ಮೇಲೆ ಎಸೆದಿದ್ದ. ನಂತರ ಆ ಮೊಬೈಲ್ ತೆಗೆದುಕೊಂಡ ಚಾಲಕನ ವಿಚಾರಣೆ ನಡೆಸಿದರೂ ಅಪರಿಚಿತ ವ್ಯಕ್ತಿಯ ಸುಳಿವು ಲಭ್ಯವಾಗಲಿಲ್ಲ ಎಂದು ಅಧಿಕಾರಿ ತಿಳಿಸಿದರು.
ಆಧ್ಯಾತ್ಮ ಕೇಂದ್ರದಲ್ಲಿದ್ದಾನೆಯೇ ಅಜಿತಾಬ್!: ಅಜಿತಾಬ್ ಪೂರ್ವಾಪರ, ಆತನ ಇಷ್ಟದ ವಿಷಯದ ಅಂಶವನ್ನಿಟ್ಟುಕೊಂಡು ತನಿಖೆ ನಡೆಸಿದ ಸಿಐಡಿಗೆ ಕುತೂಹಲಕಾರಿ ಅಂಶವೊಂದು ಗೊತ್ತಾಗಿತ್ತು. ಅಜಿತಾಬ್ ಆಧ್ಯಾತ್ಮದ ಕಡೆ ಹೆಚ್ಚು ಒಲವು ಬೆಳೆಸಿಕೊಂಡಿದ್ದು,
ಉತ್ತರ ಭಾರತ ಮೂಲದ ಪ್ರಖ್ಯಾತ ಆಧ್ಯಾತ್ಮ ಗುರು ಒಬ್ಬರ ಮೇಲೆ ಅತೀವ ಭಕ್ತಿ ಹೊಂದಿದ್ದ ಮತ್ತು ಅವರ ವಿಚಾರಧಾರೆಗಳನ್ನು ಬಹುವಾಗಿ ಇಷ್ಟಪಡುತ್ತಿದ್ದ. ಗುರುಗಳನ್ನು ಭೇಟಿ ಮಾಡುವ ಸಲುವಾಗಿಯೇ ಒಮ್ಮೆ ವಿದೇಶಕ್ಕೂ ಹೋಗಿ ಬಂದಿದ್ದ ಎಂಬ ಅಂಶ, ಆತನ ಸ್ನೇಹಿತರ ವಿಚಾರಣೆ ವೇಳೆ ಗೊತ್ತಾಗಿತ್ತು.
ವೈಟ್ಫೀಲ್ಡ್ನ ಬ್ರಿಟೀಷ್ ಟೆಲಿಕಾಂ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಪಾಟ್ನಾ ಮೂಲದ ಅಜಿತಾಬ್ (29), ತನ್ನ ಬಳಿಯಿದ್ದ ಮಾರುತಿ ಸಿಯಾಜ್ ಕಾರು ಮಾರಾಟ ಮಾಡಲು ತೀರ್ಮಾನಿಸಿ ಓಎಲ್ಎಕ್ಸ್ನಲ್ಲಿ ಪ್ರಕಟಣೆ ನೀಡಿದ್ದ. ಪ್ರಕಟಣೆ ನೀಡಿದ ಮಾರನೇ ದಿನ, ಅಪರಿಚಿತ ವ್ಯಕ್ತಿಯೊಬ್ಬ ಕಾರು ಖರೀದಿಸುವ ಆಸಕ್ತಿ ತೋರಿ ಕರೆ ಮಾಡಿದ್ದ. ಬಳಿಕ ಡಿ.18ರಂದು ಸ್ನೇಹಿತರಿಗೆ ಹೇಳಿ ಮನೆಯಿಂದ ಹೋಗಿದ್ದ ಅಜಿತಾಬ್, ನಿಗೂಢವಾಗಿ ನಾಪತ್ತೆಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.