ಸಿಬಿಎಸ್‌ಇ ಫಲಿತಾಂಶ ಪ್ರಕಟ
Team Udayavani, May 3, 2019, 10:52 AM IST
ಬೆಂಗಳೂರು: ಸಿಬಿಎಸ್‌ಇ 12 ತರಗತಿಯ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದ್ದು ಬೆಂಗಳೂರಿನ ಮಾರತ್‌ಹಳ್ಳಿಯ ಶ್ರೀಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿ ಜೆಫಿನ್ ಬಿಜು ಮತ್ತು ಬನ್ನೇರುಘಟ್ಟ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಶಾಲೆ ಅನನ್ಯ ಆರ್.ಬುರಲಿ 493 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಇಂದಿರಾನಗರದ ಎನ್‌ಪಿಎಸ್ ಶಾಲೆಯ ವಿದ್ಯಾರ್ಥಿನಿ ಅಪರ್ಣಾ ಎ.ಗುಪ್ತೆ 492, ಪಿಎಸ್‌ಬಿಬಿ ಲರ್ನಿಂಗ್ ಲೀಡರ್‌ಶಿಪ್ ಅಕಾಡೆಮಿಯ ಪ್ರಕಾರ್ ಗೋಯಲ್ 492 ಅಂಕಗಳಿಸುವ ಮೂಲಕ 2ನೇ ಸ್ಥಾನ ಹಾಗೂ ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಶಾಲೆ(ಎನ್‌ಪಿಎಸ್) ಕೌಶ್ತಭ್ ರಾಯ್ 491 ಅಂಕಗಳಿಸುವ ಮೂಲಕ 3ನೇಸ್ಥಾನ ಪಡೆದಿದ್ದಾರೆ.
ಸಿಎಂಆರ್ ನ್ಯಾಷನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಕೆ.ವರ್ಷ ಶೇ.96.6, ಎಂ.ಗುಹಾನ್ ಸಿದ್ಧಾರ್ಥ್-ಶೇ.96, ಎನ್.ಮೋಹಿತ್ ರಾಜು – ಶೇ.96, ಸಿಮ್ರಾನ್ ಗ್ರೇಸ್ ಸತ್ಯನಾರಾಯಣ ಶೇ.96.2 ಅಂಕಪಡೆದಿದ್ದಾರೆ.ಐಟಿಪಿಎಲ್ನ ಐಕ್ಯ ಶಾಲೆಯ ಸುದೀಪ್ತಾ ಶೇ.95, ಆಂಟೋ ಇಮ್ಯಾನ್ಯುಲ್ ಫೆಲಿಕ್ಸ್ ಶೇ.94.6, ಮನಾಲಿ ಯು.ತನ್ನ, 92.8, ಗೌರವ್ ಗೋವರ್ಧನ್- ಶೇ.92.4, ಇಶಾ ಆಭಿಜಿತ್ ಜೋಶಿ- ಶೇ.91.4, ಎಸ್.ಅಭಿಕ್- ಶೇ.91.4 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ನನ್ನಲ್ಲಿರುವ ಗೊಂದಲಗಳನ್ನು ಶಿಕ್ಷಕರಲ್ಲಿ ಕೇಳುತ್ತಿದ್ದೆ. ಗುರುಗಳು ಗೊಂದಲಗಳನ್ನು ಬಗೆಹರಿಸುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವಂತಾಯಿತು.
●ಜೆಫಿನ್ ಬಿಜು
ನನ್ನ ಪಾಲಕರು ಹೆಚ್ಚಿಗೆ ಓದುವಂತೆ ಒತ್ತಡ ಹಾಕಲಿಲ್ಲ.ಅಪ್ಪನ ಆಸೆಯಂತೆ ನಾನು ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ.
●ಕೌಶ್ತುಭಾ ರಾಯ್
ತರಗತಿಯಲ್ಲಿ ಚೆನ್ನಾಗಿ ಪಾಠ ಕೇಳುತ್ತಿದ್ದೆ ಮತ್ತೆ ಮನೆಯಲ್ಲಿ ಓದುತ್ತಿದ್ದೆ. ಇದು ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು. ಫಲಿತಾಂಶ ಖುಷಿಕೊಟ್ಟಿದೆ.
●ಅಪರ್ಣಾ ಎ. ಗುಪ್ತೆ
ಪ್ರತಿ ನಿತ್ಯ 8 ರಿಂದ 10 ತಾಸು ವ್ಯಾಸಂಗ ಮಾಡುತ್ತಿದ್ದೆ. ಜೆಇಇ ಮೇನ್ಸ್, ಸಿಇಟಿ, ವಿಐಟಿ, ಎಸ್‌ಆರ್‌ಎಂ ಎಲ್ಲ ಪರೀಕ್ಷೆಗಳನ್ನು ಬರೆದಿದ್ದೇನೆ. ಫಲಿತಾಂಶ ಬಂದ ಮೇಲೆ ಮುಂದಿನ ವ್ಯಾಸಂಗದ ಬಗ್ಗೆ ಆಲೋಚಿಸುತ್ತೇನೆ.
●ಅನನ್ಯ ಬುರಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.